ಶಹಾಪುರ: ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಯತಾರ್ಥ (ಮಾನಸಿಕ ಅಸ್ವಸ್ಥೆ) 12 ವರ್ಷದ ಬಾಲಕಿ ಮೇಲೆ ಸೋಮವಾರ ಅತ್ಯಾಚಾರ ನಡೆದಿದೆ.
ತಾಲ್ಲೂಕಿನ ಅಣಬಿ ಗ್ರಾಮದ ಯಲ್ಲಪ್ಪ ಸಾಯಿಬಣ್ಣ ನಾಯ್ಕೋಡಿ (27) ಅ*ತ್ಯಾಚಾರ ಎಸಗಿದ ಯುವಕ.
ನನ್ನ ಮಗಳು ಮನೆಯಲ್ಲಿ ಇದ್ದಾಗ ಯಲ್ಲಪ್ಪ ಮಗಳಿಗೆ ಚಾಕೊಲೇಟ್ ಕೊಡಿಸುವುದಾಗಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ನನಗೆ ಹೆದರಿಕೆಯಾಗಿದ್ದರಿಂದ ಹಾಗೂ ತಿಳುವಳಿಕೆ ಇಲ್ಲದೆ ಇದ್ದುದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುವೆ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಯಲ್ಲಪ್ಪ ಅವರನ್ನು ಮಂಗಳವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಭೀಮರಾಯನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಠಾಣೆಯ ಪಿಎಸ್ಐ ದೇವಿಂದ್ರರಡ್ಡಿ ತಿಳಿಸಿದರು.
ಭೇಟಿ ನೀಡದ ಅಧಿಕಾರಿಗಳು
ಮಾನಸಿಕ ಅಸ್ವಸ್ಥೆಯಾಗಿರುವ ಬಾಲಕಿಯ ಆರೋಗ್ಯ ಕ್ಷೇಮದ ಬಗ್ಗೆ ವಿಚಾರಿಸಲು ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿ ಆಗಲಿ ಇಲ್ಲವೆ ಸಾಂತ್ವನ ಕೇಂದ್ರ ಸಿಬ್ಬಂದಿ ಆಗಲಿ ಆಸ್ಪತ್ರೆಗೆ ಭೇಟಿ ನೀಡದೆ ನಿಷ್ಕಾಳಜಿ ತೋರಿಸಿದ್ದಾರೆ ಎಂದು ಮುಸ್ಲಿಂ ಸಮುದಾಯ ಮುಖಂಡರು ಒಬ್ಬರು ಬೇಸರ ವ್ಯಕ್ತಪಡಿಸಿದರು.
