ಭಾರತದ ಅತಿದೊಡ್ಡ ಐಪಿಒ ಎನ್ನಲಾದ 30,213 ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಷೇರು ಕೊಡುಗೆಯಲ್ಲಿ, ಜಿಯೋ ಷೇರುಗಳು1,119 ರೂಪಾಯಿ ಐಪಿಒ ದರಕ್ಕೆ ಹೋಲಿಸಿದರೆ ಶೇ.21.36ರಷ್ಟು ಏರಿಕೆಯೊಂದಿಗೆ 1,358 ರೂಪಾಯಿಗೆ ಪಟ್ಟಿಯಾದವು. ಐಪಿಒ ಒಟ್ಟಾರೆ22.19 ಪಟ್ಟು ಚಂದಾದಾರಿಕೆಯಾಗಿದ್ದು, ಸಾಂಸ್ಥಿಕ ಹೂಡಿಕೆದಾರರಿಂದ ಭಾರಿ ಬೇಡಿಕೆ ವ್ಯಕ್ತವಾಯಿತು.
ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಡಿಜಿಟಲ್ ಮೂಲಸೌಕರ್ಯ ಮತ್ತು ಉದ್ಯಮ ಸೇವೆಗಳ ಮೂಲಕ ಆದಾಯಹೆಚ್ಚಿಸುವುದು ಜಿಯೋಗೆ ಪ್ರಮುಖ ಸವಾಲಾಗಿದೆ. 53.33 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಕಂಪನಿ, ಜಾಗತಿಕ ತಂತ್ರಜ್ಞಾನಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ.
