Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕ್ಷೇತ್ರದಲ್ಲಿ ಹೆಚ್ಚುತ್ತಿದೆ ಪ್ರಬಲ ಆಕಾಂಕ್ಷಿಗಳ ಪಟ್ಟಿ
  • Politics
  • State
  • ಶಹಾಪುರ

ಕ್ಷೇತ್ರದಲ್ಲಿ ಹೆಚ್ಚುತ್ತಿದೆ ಪ್ರಬಲ ಆಕಾಂಕ್ಷಿಗಳ ಪಟ್ಟಿ

Praja Vahini October 11, 2026
Screenshot_2026-10-11-20-58-34-00_6012fa4d4ddec268fc5c7112cbb265e7
Spread the love

ತಾ.ಪಂ ಜಿ.ಪಂ ಚುನಾವಣೆಗೆ ಆಕಾಂಕ್ಷಿಗಳ ಕಸರತ್ತು /ಸ್ಥಳೀಯ ಶಾಸಕರು ಹಾಗೂ ಪಕ್ಷ ನಾಯಕರನ್ನು ಮನವೊಲಿಸಲು ಸರ್ಕಸ್

ಶಹಾಪುರ: ಜಿಲ್ಲಾ ಮತ್ತು ತಾಲೂಕ ಪಂಚಾಯಿತಿಗಳಿಗೆ ವೇದಿಕೆ ಸಿದ್ಧವಾಗಿದ್ದು ಆಡಳಿತಾರೊಢ ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್‌ನಲ್ಲಿ ನಾಲ್ಕೈದು ಪ್ರಬಲ ಆಕಾಂಕ್ಷಿಗಳು ಹುಟ್ಟಿಕೊಂಡಿರುವುದು ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಕ್ಷೇತ್ರದಲ್ಲಿ ಈಗಾಗಲೇ ಬಂಡಾಯದ ಸುಳಿವು ಕಂಡುಬರುತ್ತಿದ್ದು ಮೂಲ ಹಾಗೂ ವಲಸಿಗ ಕಾರ್ಯಕರ್ತರ ನಡುವಿನ ಅಸಮಾಧಾನ ಸ್ಪೋಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಸರಕಾರ ಮುಂದಿನ ವರ್ಷಾರಂಭದಲ್ಲೇ ಜಿಪಂ ಹಾಗೂ ತಾಪಂಗಳ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದು ಪ್ರಬಲ ಆಕಾಂಕ್ಷಿಗಳಲ್ಲಿ ನಡುಕ ಹಾಗೂ ಯುವಕರಲ್ಲಿ ಹೊಸ ಹುರುಪು ಎರಡೂ ಮನೆ ಮಾಡಿದೆ. ಈಗಾಗಲೇ ಕೇಲ ಯುವ ಅಭ್ಯರ್ಥಿಗಳು ನೇರವಾಗಿ ಅಖಾಡಕ್ಕೆ ಧುಮಕಲು ಸಿದ್ಧವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಯುವಕರ ಪಡೆ ಹಾಗೂ ಆಕಾಂಕ್ಷಿಗಳು ಟಿಕೆಟ್‌ಗಾಗಿ ಹಾಲಿ ಶಾಸಕರ ಬೇಟಿ, ಹಿರಿಯ ನಾಯಕರ ಆರ್ಶೀರ್ವಾದ ಪಡೆಯುವ ಕಸರತ್ತುಗಳು ಗ್ರಾಮ ಮಟ್ಟದಲ್ಲಿ ಬಿರುಸಿನಿಂದ ಸಾಗಿವೆ. ಇನ್ನೂ ಹೊಸಬರಿಗೆ ಅವಕಾಶ ನೀಡಿ ಎಂದು ಪಕ್ಷದ ಪ್ರಬಲ ನಾಯಕರಿಗೆ ದುಂಬಾಲು ಭೀಳುತ್ತಿರುವುದು ಹಿರಿಯ ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಠಿಯಾಗಿದೆ. ಕೇಲವರ ಪ್ರಕಾರ ಈಗಾಗಲೇ ಕಾಂಗ್ರೆಸ್‌ನಲ್ಲಿ ಕೇಲವರಿಗೆ ಟಿಕೆಟ್ ಫೀಕ್ಸ್ ಆಗಿದೆ. ಇದರಿಂದ ನಮಗೆ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಗಳು ಪಕ್ಷೇತರವಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾತು ಕೇಲ ಆಕಾಂಕ್ಷಿಗಳದ್ದು. ಇದರಿಂದ ಮತಗಳು ಒಡೆದು ಎದುರಾಳಿಗೆ ಲಾಭವಾಗಬಹುದು ಎಂಬ ಆತಂಕ ಕಾಂಗ್ರೆಸ್ ಪಾಳಯವನ್ನು ಕಾಡುತ್ತಿದೆ.

ದೋಸ್ತಿ ಲೆಕ್ಕಾಚಾರ

ವಿಧಾನಸಭೆ ಹಾಗೂ ಲೋಕಸಭೆಯ ಬೇನ್ನಲ್ಲೇ ಜಿಪಂ ತಾಪಂನಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೃತ್ರಿ ಮುಂದುವರಿಯಲಿದೆಯೇ ಎಂಬ ಕುತೂಹಲ ತಾರಕ್ಕೇರಿದೆ. ಕಾಂಗ್ರೆಸ್ ಸೋಲಿಸಲು ಮೃತ್ರಿಯೇ ಅಸ್ತç ಎಂಬುದು ಎರಡು ಪಕ್ಷಗಳ ನಾಯಕರ ಲೆಕ್ಕಾಚಾರವಾದರೂ, ಸೀಟು ಹಂಚಿಕೆ ಕಗ್ಗಂಟಾಗುವ ಲಕ್ಷಣಗಳಿವೆ. ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಸ್ಥಳೀಯ ಮುಖಂಡರ ನಡುವೆ ಪರಸ್ಪರ ವೈಮನಸ್ಸು ಇದ್ದರೂ, ಅಧಿಕಾರ ಹಿಡಿಯುವ ಅನಿವಾರ್ಯತೆಯಿಂದಾಗಿ ಹೊಂದಾಣಿಕೆ ಮಾಡಿಕೊಂಡು ಒಟ್ಟಾಗಿ ಹೋರಾಡುವ ಸಾಧ್ಯತೆಗಳು ಹೆಚ್ಚಿದೆ.

ಲೆಕ್ಕಾಚಾರ ಉಲ್ಟಾಪಲ್ಟಾ

ಮೀಸಲು ಪ್ರಕಟವಾಗುತ್ತಿದ್ದಂತೆ ಹಲವು ನಾಯಕರ ರಾಜಕೀಯ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗಿವೆ. ಕ್ಷೇತ್ರಗಳು ಮೀಸಲಾದ ಪರಿಣಾಮ ಪ್ರಭಾವಿಗಳು ಅಕ್ಕಪಕ್ಕದ ಕ್ಷೇತ್ರಗಳಿಗೆ ವಲಸೆ ಹೋಗಲು ಬಾಲಂಗೋಚಿ ಹುಡುಕುತ್ತಿದ್ದಾರೆ. ಹೊಸ ಮುಖಗಳಿಗೆ ಮೀಸಲು ಪಟ್ಟಿ ವರದಾನವಾಗಿದೆ. ಈಗಾಗಲೇ ಚುನಾವಣೆಯ ಲೆಕ್ಕಾಚಾರ ಎಲ್ಲೇಡೆ ಧಗಧಗಿಸುತ್ತಿದ್ದು , ದಿನದಿಂದ ದಿನಕ್ಕೆ ರಂಗು ಹೆಚ್ಚುತ್ತಿದೆ.

ಮಹಿಳಾ ಮೀಸಲು; ಪತ್ನಿ, ಪುತ್ರಿ, ಸೊಸೆಯಂದಿರು ಕಣಕ್ಕೆ

ಮೀಸಲು ಪಟ್ಟಿಯಲ್ಲಿ ಶೇ.50 ರಷ್ಟು ಸ್ಥಾನವನ್ನು ಮಹಿಳೆಯರಿಗೆ ಮೀಸಲಿಟ್ಟಿರುವುದು ಪ್ರಮುಖವಾಗಿದೆ. ಹಲವು ಪ್ರಭಾವಿ ಹಿರಿಯ ನಾಯಕರ ಕ್ಷೇತ್ರಗಳು ಮಹಿಳೆಯರ ಪಾಲಾಗಿದ್ದು ಹಲವು ಘಟಾನುಘಟಿಗಳು ಅನಿವಾರ್ಯವಾಗಿ ತಮ್ಮ ಪತ್ನಿ, ಪುತ್ರಿ, ಅಥವಾ ಸೊಸೆಯಂದಿರನ್ನು ಕಣಕ್ಕಿಳಿಸಲು ತೆರೆಮರೆಯ ಸಿದ್ಧತೆ ಆರಂಭಗೊಂಡಿವೆ. ಮನೆಯಲ್ಲಿ ಕುಳಿತು ರಾಜಕೀಯ ನೋಡುತ್ತಿದ್ದ ಮಹಿಳೆಯರು ಈಗ ಜಿಪಂ ತಾಪಂ ಪಂಚಾಯಿತಿ ಗದ್ದುಗೆ ಏರಲು ಸಜ್ಜಾಗುತ್ತಿದ್ದು, ಮಹಿಳಾ ಮತದಾರರನ್ನು ಸೆಳೆಯಲು ಪಕ್ಷಗಳು ವಿಶೇಷ ತಂತ್ರ ರೂಪಿಸುತ್ತಿದೆ.

About the Author

Praja Vahini

Editor

View All Posts

Spread the love

Post navigation

Previous: ಅ. 11 ರಂದು ಮೈಸೂರು ದಸರಾ ಉದ್ಘಾಟಿಸಲಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು
Next: ಕೆಬಿಜೆಎನ್‌ಎಲ್ ಬಾಕಿ ಬಿಲ್ ಪಾವತಿಗೆ ಗುತ್ತಿಗೆದಾರರ ಗಡುವು

Views:

193

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.