ಚಿಂಚೋಳಿ: ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಕಾರ ಹುಣ್ಣಿಮೆಯನ್ನು ಅತ್ಯಂತ ಸಂಭ್ರಮ ಮತ್ತು ಭಕ್ತಿಭಾವದಿಂದ ಆಚರಿಸಲಾಯಿತು. ರೈತರ ಪಾಲಿನ ಹಬ್ಬವಾದ ಕಾರ ಹುಣ್ಣಿಮೆಯ ಅಂಗವಾಗಿ ಗ್ರಾಮದಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿತ್ತು.
ಎತ್ತುಗಳ ಪೂಜೆ
ರೈತರು ತಮ್ಮ ಜೀವನಾಡಿಯಾಗಿರುವ ಎತ್ತುಗಳನ್ನು ಈ ದಿನ ವಿಶೇಷವಾಗಿ ಸಿಂಗರಿಸಿದ್ದರು. ಎತ್ತುಗಳಿಗೆ ಸ್ನಾನ ಮಾಡಿಸಿ, ಮೈಗೆ ಬಣ್ಣ ಬಳಿದು, ಕೊಂಬುಗಳಿಗೆ ಬಣ್ಣ ಹಚ್ಚಿ, ಹೊಸ ವಸ್ತ್ರ ಮತ್ತು ಗೆಜ್ಜೆಗಳನ್ನು ಕಟ್ಟಿ ಅಲಂಕರಿಸಲಾಗಿತ್ತು.
ರೈತ ಬಾಂಧವರು ತಮ್ಮ ಕೃಷಿ ಉಪಕರಣಗಳು ಮತ್ತು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಕೃತಜ್ಞತೆ ಅರ್ಪಿಸಿದರು. ಸಮೃದ್ಧ ಮಳೆ ಬೆಳೆ ಮತ್ತು ರೈತರ ಬಾಳು ಹಸನಾಗಲಿ ಎಂದು ಪ್ರಾರ್ಥಿಸಲಾಯಿತು.
ಇನ್ನು ಗ್ರಾಮದಲ್ಲಿ ದೇಸಾಯಿ ಮನೆಯಿಂದ ಕರಿ ಬಂಡಿಯನ್ನು ಮಾವಿನ ತೋರಣಗಳಿಂದ ಸಿಂಗರಿಸಿ ಗ್ರಾಮದ ಮುಖಂಡರು ಗ್ರಾಮಸ್ಥರು ಎಲ್ಲರು ಪ್ರಮುಖ ಬೀದಿಗಳಲ್ಲಿ ತಮಟೆ ಭಾರಿಸುತ್ತ ಮೇರವಣಿಗೆ ಮಾಡಿ ತೇರ ಮೈದಾನಕ್ಕೆ ಆಗಮಿಸಿವದು ಸಂಪ್ರದಾಯವಾಗಿದ್ದು, ತೇರ ಮೈದಾನದಲ್ಲಿ ಜಮಾವಣೆಕಗೊಂಡ ಎತ್ತುಗಳ ಬಂಡಿಗಳು ನೋಡುಗರ ಗಮನ ಸೇಳೆದವು.
ಎತ್ತುಗಳನ್ನ ಓಡಿಸಿದ ನಂತರ ಕರಿ ಕಡಿಯುವ ಸಂಪ್ರದಾಯ ನಡೆಯುತ್ತದೆ ಗ್ರಾಮದ ತೇರ ಮೈದಾನ ಹೆಬ್ಬಾಗಿಲಿನ ಬಳಿ ಮಾವಿನ ತೋರಳು ತಳವಾರ ಮನೆತನದವರು ಹಿಡಿದುಕೊಂಡು ನಿಲ್ಲುವ ಸಂಪ್ರದಾಯವಿದ್ದು, ದೇಸಾಯಿ ಮನೆತನ ಕರಿ ಬಂಡಿ ಓಡಿಸುತ್ತ ಕರಿ ಕಡಿಯುವ ಮೂಲಕ ಕಾರಹುಣ್ಣಿಮೆ ಅಧ್ದೂರಿಯಾಗಿ ಆಚರಣೆ ಮಾಡಿದರು. ಇದನ್ನೂ ಓದಿ: ಮೂಲಸೌಕರ್ಯ ಒದಗಿಸಲು ಶಾಸಕರಿಗೆ ಮನವಿ
ಈ ಸಂದರ್ಭದಲ್ಲಿ ಮಹಾರುದ್ರಪ್ಪ ದೇಸಾಯಿ, ಮುರಗೆಪ್ಪ ಕುಕ್ಕಡಿ, ಮಲ್ಲಿಕಾರ್ಜುನ ದೇಸಾಯಿ, ಜಹಿರ್ ಪಟೇಲ, ಮಹೇಶ ಬೇಮಳಗಿ, ರಾಜು ದಬ್ಬಾ, ಮಲ್ಲಸೆಟ್ಟಿ ಪಡಸೆಟ್ಟಿ, ನಾಗೇಶ ಕೊಟಗಿ, ಚಂದ್ರಕಾಂತ ಹೂಗಾರ್, ನಾಗೇಶ ಶಿಲವಂತ, ಶಿವಕುಮಾರ ಕೊತ್ತಪೇಟ, ಶಿರಾಜ ಪಟೇಲ, ವಿಜಯಕುಮಾರ ಬಗಲಿ, ದಶರಥ ಮಂಕಲ, ನಾರಾಯಣ ರೆಡ್ಡಿ, ಶಿವಕುಮಾರ ನಿಂಗದಳ್ಳಿ ಸೇರಿದಂತೆ ಅನೇಕರು ಇದ್ದರು.
