ಬೆಂಗಳೂರು: ಇಂದು ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಪಕ್ಷದ ಶಾಸಕರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಹಾಕುತ್ತಿದ್ದಾರೆ.
ಆದರೆ ಅಚ್ಚರಿ ಸಂಗತಿ ಎಂದರೆ ಎಸ್ಟಿ ಸೋಮಶೇಖರ್ ಅವರು ಅಚ್ಚರಿ ಹೇಳಿಕೆ ಹೇಳಿದ್ದಾರೆ.
ಪರಿಷತ್ ಮತ ಚುನಾವಣೆ ಬಳಿಕ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಿದ್ದೇನೆ. ಬಿಜೆಪಿ ನನಗೆ ಸಂಪರ್ಕಿಸಿಲ್ಲ ಹಾಗಾಗಿ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಿದ್ದೇನೆ ಎಂದು ಹೇಳಿದ್ದಾರೆ.
ಸಂಪರ್ಕ ಮಾಡದೇ ಇದ್ದರೆ ಮತದಾನ ಹೇಗೆ? ಯಾರು ಮನವಿ ಮಾಡಿದ್ದಾರೆ ಅವರಿಗೆ ಮತದಾನ ಆಗುತ್ತದೆ. ನನ್ನ ಕ್ಷೇತ್ರದ ಅನುದಾನ ವಿಚಾರಕ್ಕಾಗಿ ಕಾಂಗ್ರೆಸ್ ಪಕ್ಷದ ಜೊತೆ ಇದ್ದೇನೆ ಎಂದರು. ಇದನ್ನೂ ಓದಿ: ಪರಿಷತ್ ಚುನಾವಣೆ; ಮತ ಚಲಾಯಿಸಿದ ಮಾಜಿ ಸಿಎಂ ಸಿದ್ದು
ಬಿಜೆಪಿಯಾಗಲಿ ಜೆಡಿಎಸ್ ಆಗಲಿ ಮತಕ್ಕಾಗಿ ನನಗೆ ಮನವಿ ಮಾಡಿಲ್ಲ. ಸಿಎಂ ಕರೆ ಮಾಡಿ ಮತ ಹಾಕಲು ಮನವಿ ಮಾಡಿಕೊಂಡ್ರು. ನಮ್ಮ ಏರಿಯಾದ ಸಮಸ್ಯೆ ಬಗೆಹರಿಸಿದರೆ ಮತ ಹಾಕೋದಾಗಿ ಹೇಳಿದ್ದೆ. ಹಂತ ಹಂತವಾಗಿ ಕ್ಷೇತ್ರದ ಅಭಿವೃದ್ಧಿ ಮಾಡ್ತೇವೆ ಎಂದು ಹೇಳಿದ್ದಾರೆ. ಈಗ ಎಲ್ಲವೂ ಮುಗಿಯಿತು. ನಾನು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿ ಆಯ್ತು. ನನ್ನ ಆತ್ಮಸಾಕ್ಷಿಗೆ ಮತ ಹಾಕಿದ್ದೇನೆ ಎಂದು ಅವರು ಹೇಳಿದರು.
