Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಎಚ್ಎಸ್ಆರ್ ನಲ್ಲಿ 10K ರನ್ ಸಕ್ಸಸ್: ತೇಜಸ್ವಿ ಸೂರ್ಯ ಭಾಗಿ
  • Bangalore
  • Politics
  • State

ಎಚ್ಎಸ್ಆರ್ ನಲ್ಲಿ 10K ರನ್ ಸಕ್ಸಸ್: ತೇಜಸ್ವಿ ಸೂರ್ಯ ಭಾಗಿ

Praja Vahini June 14, 2026 1 minute read
Screenshot_2026-06-14-10-55-14-43_6012fa4d4ddec268fc5c7112cbb265e7
Spread the love

ಬೆಂಗಳೂರು: ಇವತ್ತಿನ ಇನ್‌ಸ್ಟಂಟ್ ಲೈಫ್‌ನಲ್ಲಿ ನಮಗೆ ಆರೋಗ್ಯ ಅನ್ನೋದು ತುಂಬಾನೇ ಮುಖ್ಯ ಆಗಿದೆ. ‘ಆರೋಗ್ಯವೇ ಭಾಗ್ಯ’ ಅನ್ನೋ ಮಾತನ್ನ ನೆನಪಿಸೋಕೆ ಇವತ್ತು ಸಾವಿರಾರು ಜನ ರಸ್ತೆಗಿಳಿದಿದ್ದಾರೆ. ಹೌದು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಒಂದಾಗಿ ಬನ್ನಿ ಒಟ್ಟಾಗಿ ಓಡಿ ಎಂಬ  ಬೃಹತ್ ಆರೋಗ್ಯ ಕಾಳಜಿಯ ‘ವಾಕಥಾನ್’ ಕಾರ್ಯಕ್ರಮ ನೆರವೇರಿತು. ಜಿಮ್, ಡಯಟ್ ಮಧ್ಯೆ ಸಿಂಪಲ್ ಆಗಿ ಹೆಜ್ಜೆ ಹಾಕುತ್ತಾ ಆರೋಗ್ಯವನ್ನ ಹೇಗೆ ಕಾಪಾಡಿಕೊಳ್ಳಬಹುದು ಅನ್ನೋ ಸಂದೇಶ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ ಬೆಂಗಳೂರು ರನ್ ಜಾತ್ರೆಯಲ್ಲಿ ಭಾಗವಹಿಸಿ ಜಯನಗರದಿಂದ ಎಚ್ಎಸ್ಆರ್ ಬಡಾವಣೆಗೆ ವರೆಗೆ ಡಬಲ್ ಡಕ್ಕರ್ ಫ್ಲೈ ಓವರ್ ನಲ್ಲಿ ಸುಮಾರು 200 ಜನರ ಜೊತೆಯಲ್ಲಿ ಬೆಳಿಗ್ಗೆ 5 ಗಂಟೆಯಿಂದಲೇ ರನ್ ಮಾಡಲು ಪ್ರಾರಂಭಿಸಿ ಎಚ್ಎಸ್ಆರ್ ನಲ್ಲಿರುವ ನೆರವೇರಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಂತರ ಮಾತನಾಡಿದ ಅವರು, ಪ್ರತಿಯೊಬ್ಬರ ನಾಗರಿಕರ ಬ್ಯುಸಿ ಬದುಕಿನಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ವಾಕ್ ಮಾಡುವುದರ ಜೊತೆಗೆ  ವ್ಯಾಯಾಮ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಂದೇಶ ನೀಡಿದರು.

ಬೆಂಗಳೂರು ನಗರದಲ್ಲಿ ತಿಂಗಳಿಗೊಂದು ಭಾನುವಾರ ಯಾವುದಾದರೂ ಒಂದು ರಸ್ತೆಯನ್ನ ರನ್ ಮತ್ತು ವಾಕ್ ಮಾಡಲು ಸರ್ಕಾರ ಸಂಚಾರ ಮುಕ್ತ ರಸ್ತೆಗಳನ್ನು  ಮಾಡಬೇಕೆಂದು  ಕೋರಿದರು.

ಇಂದಿನ ಯುಗದಲ್ಲಿ ಯುವಕ, ಯುವತಿಯರು ತಮ್ಮ ಬಿಜಿ ಲೈಫಿನಲ್ಲೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಡ್ಡಾಯವಾಗಿ ರನ್ ಮತ್ತು ಇನ್ನಿತರ ಕ್ರೀಡ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯ ಜೊತೆಗೆ ಸಮಾಜದಲ್ಲಿ ಉತ್ತಮ ಯುವಕ ಯುವತಿಯರಾಗಿ ಬೆಳೆಯಲು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೂಡ ಬೆಂಗಳೂರು ನಗರದಲ್ಲಿ ಯುವಕ, ಯುವತಿಯರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಅತಿ ಜಾಗೃತವಾಗಿ ತಂದೆತಾಯಿಯರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಸತೀಶ್ ರೆಡ್ಡಿ ಅವರು ಮಾತನಾಡಿ, ಎಲ್ಲರೂ ತಮ್ಮ ಆರೋಗ್ಯದ ಕಡೆ ಗಮನ ವಹಿಸಲು ದಿನನಿತ್ಯ ವ್ಯಾಯಾಮ, ಯೋಗ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಆರೋಗ್ಯದ ಕಡೆ ಗಮನ ವಹಿಸಬೇಕೆಂದು ಸೂಚಿಸಿದರು.

ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸುಮಾರು 20ಕ್ಕೂ ಹೆಚ್ಚು ಉದ್ಯಾನವನಗಳು ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಇದರ ಜೊತೆಗೆ ಹಲವಾರು ಕಡೆಗಳಲ್ಲಿ ಕ್ರೀಡಾಂಗಣಗಳನ್ನು ಸಾರ್ವಜನಿಕರ ಹಿತ ದೃಷ್ಟಿಯಿಂದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನಿರ್ವಾಹಕರಾದ ಶ್ರೀಧರ್ ರೆಡ್ಡಿ,  ಮುಖ್ಯ ಕಾರ್ಯನಿರ್ವಾಹಕರಾದ ಭಾರತೀ ಸೇರಿದಂತೆ ಇನ್ನಿತರ ಹಲವಾರು ಜನ ಭಾಗಿಯಾಗುವುದರ ಜೊತೆಗೆ ಸುಮಾರು ಎಂಟು ಸಾವಿರಕ್ಕಿಂತ ಹೆಚ್ಚು ಜನ ವಾಕಥಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಓಟದಲ್ಲಿ ಗೆದ್ದಂತವರಿಗೆ  ಬಹುಮಾನ ವಿತರಣವನ್ನು ಸಂಸದರು ಮತ್ತು ಶಾಸಕರು ವಿತರಿಸಿ ಅಭಿನಂದಿಸಿದರು.

About the Author

Praja Vahini

Editor

View All Posts

Spread the love

Post navigation

Previous: ಉಡುಪಿಯ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಕೇಂದ್ರ ಸಚಿವೆ ಭೇಟಿ
Next: ಸಚಿವ ಪ್ರಿಯಾಂಕ್ ಖರ್ಗೆ ಆವರಿಂದ ಮೋಹನ್ ಭಾಗವತ್ ಅವರಿಗೆ ಪತ್ರ

Views:

62

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.