ಮುಂಬೈ: ಇತ್ತೀಚಿನ ದಿನಗಳಲ್ಲಿ ಮಾಡೆಲ್ಗಳು ಸೇರಿದಂತೆ ಸಿನಿ ತಾರೆಯರು ಮಾದಕ ವಸ್ತುಗಳ ಸೇವನೆ ಮಾಡುವುದು ಮತ್ತು ವಿದೇಶದಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತದೆ.
ಹೌದು, ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ಮಾಡೆಲ್ ಗಳು ಹಾಗೂ ಸಿಹಿ ತಾರೆಯರು ಡ್ರಗ್ಸ್, ಗಾಂಜಾ ಕೇಸ್ ಗಳಲ್ಲಿ ಅರೆಸ್ಟ್ ಆಗುತ್ತಿದ್ದಾರೆ.
ಇದಕ್ಕೆ ದೊಡ್ಡ ಉದಾಹರಣೆ ಎಂಬಂತೆ ಇದೀಗ ಸುಮಾರು 11 ಕೋಟಿ ಮೌಲ್ಯದ ಹೈಡ್ರೋಫೋನಿಕ್ಸ್ ಗಾಂಜಾ ಸಮೇತವಾಗಿ ಮಿಸೆಸ್ ಕೇರಳ ಸೌಂದರ್ಯ ಸ್ಪರ್ಧೆಯ ಮಾಜಿ ಸ್ಪರ್ಧಿ ಹರ್ಷ ಸನ್ನಿ ಅವರನ್ನ ಮುಂಬೈನಲ್ಲಿ ಬಂಧಿಸಲಾಗಿದೆ.
ಯೆಸ್…ಮಾಡೆಲ್ ಹರ್ಷ ಸನ್ನಿ ಅವರನ್ನ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾಂಜಾ ಸಮೇತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಹರ್ಷ ಸನ್ನಿ ಜೂನ್ 10-11ರ ರಾತ್ರಿ ಬ್ಯಾಂಕಾಕ್ನಿಂದ ಏರ್ ಇಂಡಿಯಾ ವಿಮಾನ TG-351 ಮೂಲಕ ಮುಂಬೈನ ಶಿವಾಜಿ ಏರ್ಪೋರ್ಟ್ಗೆ ಬಂದಿಳಿದಿದ್ದರು. ಅನುಮಾನದ ಮೇಲೆ ಆಕೆಯನ್ನ ತಡೆಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ಆಕೆಯ ಲಗೇಜ್ ಬ್ಯಾಗ್ಗಳನ್ನ ಶೋಧಿಸುವ ವೇಳೆ ಸುಮಾರು 12 ಪ್ಯಾಕೆಟ್ ಕವರ್ಗಳನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾನು ಜೀವಂತವಾಗಿದ್ದೇನೆ ಸುಳ್ಳು ಸುದ್ದಿ ನಂಬಬೇಡಿ: ದೊಡ್ಡಣ್ಣ
ಹೈಡ್ರೋಪೋನಿಕ್ಸ್ ಗಾಂಜಾ ವಶಪಡಿಸಿಕೊಂಡ ಬಳಿಕ, NDPS ಆಕ್ಟ್ ಅಡಿಯಲ್ಲಿ ಹರ್ಷ ಸನ್ನಿ ಅವರನ್ನ ಬಂಧಿಸಲಾಯಿತು. ನಂತರ ಕೋರ್ಟ್ಗೆ ಹಾಜರುಪಡಿಸಿದ ಬಳಿಕ ಅವರನ್ನ ಎಸ್ಪ್ಲನೇಡ್ (ಕಿಲ್ಲಾ) ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
