Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕಾಮಗಾರಿ ಪಡೆಯಲು ಲಂಚ, ಬಿಲ್ ಪಾವತಿಗೂ ಲಂಚ!?
  • State
  • ಶಹಾಪುರ

ಕಾಮಗಾರಿ ಪಡೆಯಲು ಲಂಚ, ಬಿಲ್ ಪಾವತಿಗೂ ಲಂಚ!?

Praja Vahini June 5, 2026
Screenshot_2026-06-05-19-31-00-96_6012fa4d4ddec268fc5c7112cbb265e7
Spread the love

ಕಾಮಗಾರಿ ಟೆಂಡರ್‌ನಲ್ಲಿ ಭ್ರಷ್ಟಚಾರದ ಕರಾಳಮುಖ, ದಲ್ಲಾಳಿ/ಅಧಿಕಾರಿ/ಜನಪ್ರತಿನೀಧಿಗಳಿಗೂ ಹಣ

ಶಹಾಪುರ: ಒಂದೆಡೆ ಜಿಲ್ಲೇಯಾದ್ಯಂತ ಗುತ್ತಿಗೆದಾರರ ಬಿಲ್ ಪಾವತಿಗೆ ಕಮಿಷನ್ ದುಪ್ಪಟ್ಟಾಗಿದೆ, ಇನ್ನೊಂದೆಡೆ ಹೊಸ ಕಾಮಗಾರಿಯ ಟೆಂಡರ್‌ನಲ್ಲಿ ಕಾಮಗಾರಿಗಳು ಜನಪ್ರತಿನೀಧಿಗಳು ಹಾಗೂ ಅಧಿಕಾರಿಗಳ ಆತ್ಮೀಯರ ಪಾಲಾಗುತ್ತಿವೆ. ಒಂದು ಕೆಲಸವನ್ನು ಪಡೆಯಲು ನೂರು ಬಾರಿ ಕಛೇರಿಗೆ ತಿರುಗಬೇಕಾದ ಸ್ಥೀತಿ ಸದ್ಯ ಜಿಲ್ಲೇಯ ಗುತ್ತಿಗೆದಾರರಿಗೆ ಇದೆ ಎಂದು ಸುವರ್ಣಾ ಕರ್ನಾಟಕ ಗುತ್ತಿಗೆದಾರರ ಸಂಘದ ತಾಲೂಕ ಅಧ್ಯಕ್ಷ ಸಂಗಣ್ಣ ದೊಡ್ಮನಿ ದೂರಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಮ್ಮನ್ನು ಪ್ರತಿ ಬಾರಿ ಸಮಾಧಾನ ಮಾಡಿ, ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರಿಗೆ ಗೌರವ ಕೊಟ್ಟು, ಅಪಾರ ನಂಬಿಕೆಯಿಂದ ಜಿಲ್ಲೆಗಳ ಎಲ್ಲ ಗುತ್ತಿಗೆದಾರರೂ ಸಮಾಧಾನದಿಂದ ಇದ್ದರೂ, ಇದೀಗ ಡಿ.ಕೆ ಶಿವಕುಮಾರ ಅವರು ಮತ್ತು ನೂತನ ಸಚಿವರು ಅಧಿಕಾರಕ್ಕೆ ಬಂದ ನಂತರ ಗುತ್ತಿಗೆದಾರರ ಸಮಸ್ಯೆಯನ್ನು ಆಲಿಸಬೇಕಾಗಿದೆ. ಗುತ್ತಿಗೆದಾರರಿಗೆ ಸರಿಯಾಗಿ ಕೆಲಸ ನೀಡಬೇಕು. ಬಿಲ್ ಪಾವತಿಗಾಗಿ ಕಚೇರಿಗಳಲ್ಲಿ ದಲ್ಲಾಳಿಗಳದ್ದೆ ದರ್ಬಾರ್ ನಡೆದಿದ್ದು, ಅಧಿಕಾರಿಗಳು ಬೇಟಿಯಾಗುವ ಮೊದಲು ಅವರ ಕೈಕೆಳಗಿನ ಅಧಿಕಾರಿಗಳ ಹತ್ತಿರ ಮಾತಾಡಿದ ನಂತರವೇ ಬಿಲ್ ಪಾವತಿಗೂ ಹಣ ಕೊಡಬೇಕು, ಕಾಮಗಾರಿ ಪಡೆಯಲು ಸಹ ಹಣ ನೀಡಬೇಕು. ಎರಡು ವರ್ಷ ಕಳೆದರು ಜೆಜೆಎಂನ ಬಾಕಿ ಬಿಲ್ ಪಾವತಿಯಾಗಿಲ್ಲಾ ಸಮಸ್ಯೆಗಳ ಮಧ್ಯೆಯೆ ಗುತ್ತಿಗೆದಾರರು ದಿನದೂಡುತ್ತಿದ್ದಾರೆ.

ಲಂಚದ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ

ಕಾಮಗಾರಿ ಗುತ್ತಿಗೆಯಲ್ಲಿ ಲಂಚದ ಆರೋಪ ಸರ್ಕಾರವನ್ನು ಮುಜುಗರಕ್ಕೆ ದೂಡಿದೆ, ಇದರ ಮಧ್ಯೆ ಕಾಮಗಾರಿ ನೀಡಲು ಸಹ ಭಾರಿ ಪ್ರಮಾಣದ ಲಂಚದ ಹಾವಳಿ ಇದೆ ಎಂಬ ದೂರಗಳೀಗ ಮುನ್ನೆಲೆಗೆ ಬಂದಿವೆ. ಕಾಮಗಾರಿ ನೀಡುವಲ್ಲಿ ಲಂಚದ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇರುವ ಬಗ್ಗೆ ಸಚಿವರು, ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಕೊಟ್ಟು ಬಸವಳಿದಿರುವ ಗುತ್ತಿಗೆದಾರರ ಸಂಘ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಕಾಮಗಾರಿ ನಡೆಸುವ ಇಲಾಖೆಗಳಲ್ಲಿ ಹಾಸು ಹೊಕ್ಕಾಗಿದ್ದ ಭ್ರಷ್ಟಚಾರದ ಕರಾಳಮುಖ ಇದು ಗುತ್ತಿಗೆದಾರರ ವಲಯದಲ್ಲಿ ಆತಂಕವನ್ನು ಮೂಡಿಸಿದ್ದು, ಇದಕ್ಕೆಲ್ಲಾ ಆಯಾ ಉಸ್ತುವಾರಿ ಸಚಿವರೆ ನೇರ ಹೊಣೆಗಾರರು ಎಂದು ಗುತ್ತಿಗೆದಾರರು ಗಂಭೀರವಾಗಿ ಆರೋಪಿಸಿದ್ದಾರೆ.

ಇನ್ನೂ ಜಿ.ಪಂ, ಲೋಕಪಯೋಗಿ, ಪಿಡಬ್ಲ್ಯೂಡಿ ಹೀಗೆ  ಇತರೆ ಇಲಾಖೆಗಳಲ್ಲಿ ಅಧಿಕಾರಿಗಳು ತಮಗೆ ಬೇಕಾದ ಜಿಲ್ಲೆ, ತಾಲೂಕ ಆಯಕಟ್ಟಿನ ಸ್ಥಳಗಳಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲು ಮೇಲಧಿಕಾರಿಗಳಿಗೆ, ಜನಪ್ರತಿನೀಧಿಗಳಿಗೆ ದೊಡ್ಡಮೊತ್ತವನ್ನೇ ಪಾವತಿಸುತ್ತಾರೆ. ವರ್ಷಕ್ಕೊಮ್ಮೆ ವರ್ಗಾವಣೆ ನಡೆಯ ತೊಡಗಿದ್ದರಿಂದಾಗಿ, ಆಯಕಟ್ಟಿನ ಹುದ್ದೆ ಬೇಕಾದ ಅಧಿಕಾರಿಗಳು ವರ್ಗಾವಣೆಗೆ ಖರ್ಚು ಮಾಡಲು ತಾವು ಪಡೆಯುವ ಲಂಚದ ಮೊತ್ತವನ್ನು ಹೆಚ್ಚಿಸಿದ್ದಾರೆ ಎನ್ನವುರು ಗುತ್ತಿಗೆದಾರರ ಗಂಭೀರ ಆರೋಪ.

ಭ್ರಷ್ಟ ಅಧಿಕಾರಿಗಳ ವಿರುದ್ಧ ದಾಖಲೆ ಸಹಿತ ದೂರು

ಭ್ರಷ್ಟ ಅಧಿಕಾರಿಗಳ ವಿರುದ್ಧ ದಾಖಲೆ ಸಹಿತ ದೂರು ನೀಡಿದರೂ, ಅವರಿಂದಲೇ ಮತ್ತಷ್ಟು ಲಾಭ ಮಾಡಿಕೊಳ್ಳುವ ವ್ಯವಸ್ಥೆ ಸದ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಭ್ರಷ್ಟಚಾರ ಮಿತಿ ಮೀರಿದೆ. ಗುತ್ತಿಗೆದಾರರು ಗ್ರಾಮೀಣ ಭಾಗದಲ್ಲಿ ನೂರಾರು ಸಮಸ್ಯೆಗಳ ಮಧ್ಯೆಯೆ ಕೆಲಸ ಮಾಡಿದರು ಬಿಲ್ ಪಾವತಿಗೆ ದಲ್ಲಾಳಿಗಳಿಗೆ ಬೇರೆ ಮೊತ್ತ, ಅಧಿಕಾರಿಗಳಿಗೆ ಮತ್ತೊಂದು ಮೊತ್ತ ನೀಡಬೇಕಾಗಿದೆ. ಇದರಿಂದ ಗುತ್ತಿಗೆದಾರರು ಕಂಗಲಾಗಿದ್ದು ಬೇರೆ ಜಿಲ್ಲೆಗೆ ಹೋಗಿ ಕಾಮಗಾರಿ ಟೆಂಡರ್ ಹಾಕಿದರೆ ಅಲ್ಲಿಯೂ ನೂರಾರು ಸಮಸ್ಯೆ, ಸರಿಯಾದ ಕಾಮಗಾರಿ ಮಾಡಲು ಸಹ ಸಾಕಷ್ಟು ಅಡ್ಡಗಾಲು ಹಾಕುವವರೇ ಹೆಚ್ಚಿದ್ದು, ಇದಕ್ಕೆ ಅಧಿಕಾರಿಗಳು ಸೊಪ್ಪು ಹಾಕುತ್ತಾರೆ. ಲೋಪದೋಷಗಳನ್ನು ಹುಡುಕಿ ತಮಗೆ ಬೇಕಾದವರಿಗೆ ಕಾಮಗಾರಿ ನೀಡುತ್ತಾರೆ. ಗುತ್ತಿಗೆದಾರರು ಕೆಲಸ ಮಾಡದಂತಹ ಸ್ಥೀತಿ ಇದೆ.

ಈಗಾಗಲೇ ಜಿಲ್ಲೇಯಾದ್ಯಂತ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆ, ಲೋಕಪಯೋಗಿ ಇಲಾಖೆಯಡಿಯಲ್ಲಿ 2025 ಮಾರ್ಚ್ 1 ರಿಂದ 2026 ರ ಜೂನ್ 1 ರವರೆಗೆ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸಿದ ಎಲ್1 ರಿಂದ ಎಲ್ 10ರವರೆಗೆ ಗುತ್ತಿಗೆದಾರರ ವಿವರ ನೀಡಬೇಕು. ಅರ್ಹ ಗುತ್ತಿಗೆದಾರರಿಗೆ ಅಧಿಕಾರಿಗಳು ಮಾಡಿದ ಅಗ್ರಿಮೆಂಟ್ ಪ್ರತಿಗಳು, ಕಾಮಗಾರಿಯ ವರ್ಕ್ ಆರ್ಡರ್ ಪ್ರತಿಗಳನ್ನು ನೀಡಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಸುವರ್ಣ ಕರ್ನಾಟಕ ಕಾರ್ಯನಿರತ ಗುತ್ತಿಗೆದಾರರ ಸಂಘ ತಾಲೂಕ ಅಧ್ಯಕ್ಷ ಸಂಗಣ್ಣ ದೊಡ್ಮನಿ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.

ಶಹಾಪುರ ಮತಕ್ಷೇತ್ರದ ಲ್ಯಾಂಡರ್ಮಿ, ನಿರ್ಮಿತಿ ಕೇಂದ್ರ, ಎಬಿಟೆಡ್ ಹಾಗೂ ಇತರೆ ಇಲಾಖೆಗಳಲ್ಲಿ ಪ್ಯಾಕೇಜ್ ಮಾಡಿ ತಮಗೆ ಬೇಕಾದವರ ಹೆಸರಿಗೆ ಅರ್ಗಿಮೆಂಟ್ ಮಾಡಿಸಿ, ಜನಪ್ರತಿನಿಧಿಗಳು ತಮಗೆ ಬೇಕಾದ ಕಾಂಗ್ರೆಸ್ ಕಾರ್ಯಕರ್ತರಿಗೆ, ಸಂಬಂಧಿಕರಿಗೆ ಕೆಲಸ ನೀಡಿ, ಸಣ್ಣ ಗುತ್ತಿಗೆದಾರರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದು ಇದನ್ನು ನಿಲ್ಲಿಸಬೇಕು. ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸುತ್ತಿದ್ದು, ಒಳಗೊಳಗೆ ನೊಂದುಕೊಂಡವರೇ ಹೆಚ್ಚು, ಸದ್ಯ ಜನಪ್ರತಿನಿಧಿಗಳು ಮಾಡಿದ್ದೇ ಮಾರ್ಗ ಎನ್ನುವಂತಾಗಿದ್ದು, ಪ್ರಶ್ನಿಸುವವರು, ಎದುರಾಳಿಗಳು ಇಲ್ಲದಿರುವುದಕ್ಕೆ ಕ್ಷೇತ್ರವೇ ಸಮಸ್ಯೆಯಲ್ಲಿ ಮುಳುಗಿ ಹೋಗಿದೆ ಎಂದು ಬಿಜೆಪಿ ಮುಖಂಡರಾ ಶರಣು ಸಗರ ಹೇಳಿದರು.

About the Author

Praja Vahini

Editor

View All Posts

Spread the love

Post navigation

Previous: ಎಂಬಿಬಿಎಸ್ ಪದವಿ ಮುಗಿಸಿದ ವೈದ್ಯರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ!
Next: ರಾಮಲಿಂಗಾರೆಡ್ಡಿಯವರು ಪಕ್ಷ ಉಳಿಸುತ್ತಿರುವವ: ಸಿಎಂ ಡಿಕೆಶಿ

Views:

387

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.