ಶಹಾಪುರ: ಪ್ರಸ್ತುತ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರ ಸಚಿವ ಸಂಪುಟದಲ್ಲಿ ತಮಗೂ ಸಚಿವರಾಗುವ ಅವಕಾಶ ಮತ್ತೊಮ್ಮೆ ಸಿಗುವುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಶರಣಬಸಪ್ಪಗೌಡ ದರ್ಶನನಾಪುರ, ಅವಕಾಶ ಸಿಕ್ಕರೆ ಸಂತೋಷಪಡುವೆ, ಸಿಗದಿದ್ದರೆ ನಮಗೆ ಬೇಸರವೇನು ಇಲ್ಲವೆಂದು ತಿಳಿಸಿದರು.
ಬದ್ಧತೆಯ ರಾಜಕಾರಣಿ ಎಂದು ಹೆಸರು ಪಡೆದು, ಅಭಿವೃದ್ಧಿಯ ಕಾಳಜಿ ಹೊಂದಿರುವ ದರ್ಶನಾಪುರ ಅವರು, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಸಣ್ಣಕೈಗಾರಿಕೆ ಸಾರ್ವಜನಿಕ ಉದ್ಯಮ ಸಚಿವರಾಗಿ ಉತ್ತಮ ಕಾರ್ಯ ನಿರ್ವಹಿಸಿದವರು. ಜೊತೆಗೆ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಅತ್ಯಂತ ಆತ್ಮೀಯರುಳ್ಳವರಾಗಿದ್ದಾರೆ. ಯಾವುದಕ್ಕೂ ಲಾಬಿ ಮಾಡುವ ಜಾಯಮಾನದವರಲ್ಲ ಎಂಬುವುದು ಜನಜನಿತವಾಗಿದೆ. ಇದನ್ನೂ ಓದಿ: ಮಾಜಿ ಎಂಎಲ್‌ಸಿ ಕಿಡ್ನ್ಯಾಪ್; 2 ಕೋಟಿ ಹಣ ಬೇಡಿಕೆ ಇಟ್ಟ ದುಷ್ಟರು
ನಮಗಿಂತಲೂ ಹಿರಿಯರಿಗೆ ಈ ಹಿಂದೆ ಅವಕಾಶ ಸಿಕ್ಕಿಲ್ಲ, ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನು ಅಳಿದು ತೂಗಿ ನೋಡುತ್ತಿದ್ದು, ನಾವು ಸದಾ ಕಾಲ ಕಾಂಗ್ರೆಸ್ ಪಕ್ಷದ ಹಿತದೃಷ್ಟಿ ತಾಲೂಕಿನ ಅಭಿವೃದ್ಧಿಗೆ ನಮ್ಮ ಕಾರ್ಯಬದ್ಧತೆ ಎಂದು ತಿಳಿಸಿದರು.
