ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ಎಂ ಕೃಷ್ಣಪ್ಪ ಅವರು ಅದ್ದೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ನಿನ್ನೆ (ಸೋಮವಾರ ಜೂನ್ 1) ರಂದು ಹುಟ್ಟು ಹಬ್ಬವನ್ನ ಆಚರಿಸಿಕೊಂಡರು.
ಇನ್ನು ಎಂ ಕೃಷ್ಣಪ್ಪ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು, ಮುಖಂಡರು ಸೇರಿದಂತೆ ಹಲವಾರು ಅವರ ಅಭಿಮಾನಿಗಳು ಅವರ ನಿವಾಸಕ್ಕೆ ತೆರಳಿ ಶುಭ ಕೋರಿದ್ದಾರೆ.
ಅದರಂತೆ ಎಂ. ಕೃಷ್ಣಪ್ಪ ರವರ ಹುಟ್ಟುಹಬ್ಬದ ಪ್ರಯುಕ್ತ ನಾಗನಾಥಪುರ ಹಾಗೂ ಚಿಕ್ಕತೋಗೂರು ವಾರ್ಡ್ ನ ಕಾರ್ಯಕರ್ತರುಗಳೊಂದಿಗೆ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಶಾಂತಬಾಬು ರವರು ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಿ. ಬಾಬು ರವರು ಹುಟ್ಟುಹಬ್ಬದ ಶುಭಾಶಯ ಕೋರಿದರು. ಇದನ್ನೂ ಓದಿ: ಒಂದೇ ಸ್ಥಳದಲ್ಲಿ 23 ನಾಗರ ಹಾವಿನ ಮರಿ ಪತ್ತೆ; ಗಾಬರಿಗೊಂಡ ಸ್ಥಳೀಯರು!
ಈ ಸಂದರ್ಭದಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
