ಬೆಂಗಳೂರು: ಬೆಂಗಳೂರು ನಗರದಲ್ಲಿರುವ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ನಮ್ಮ ಮೆಟ್ರೋ ಈಗಾಗಲೇ ಹಲವು ಏರಿಯಾಗಳಲ್ಲಿ ತನ್ನ ಸಂಚಾರ ನಡೆಸುತ್ತಿದ್ದು, ಇದೀಗ ಮಾದಾವರ ಟು ತುಮಕೂರು ವರೆಗೆ ಮೆಟ್ರೋ ವಿಸ್ತರಣೆ ಮಾಡಬೇಕೆಂದು ಸರ್ಕಾರಕ್ಕೆ ಇದೀಗ ಡಿಪಿಆರ್ ಸಲ್ಲಿಕೆ ಮಾಡಲಾಗಿದೆ.
ಹೌದು, ಗೃಹ ಸಚಿವ ಜಿ ಪರಮೇಶ್ವರ್ ಅವರು ನಿನ್ನೆ (ಶುಕ್ರವಾರ ಮೇ 22) ಸಂಜೆ ವಿಧಾನಸೌಧದಲ್ಲಿ ಡಿಪಿಆರ್ ವರದಿ ಸಲ್ಲಿಕೆ ಮಾಡಿದ್ದಾರೆ. ಮಾದವಾರ-ತುಮಕೂರು ಮೆಟ್ರೋ ರೈಲು ಯೋಜನೆ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ಸಾಧ್ಯತೆ ಇದೆ. ಡಿಪಿಆರ್ ಅನ್ನು ಬಿಎಮ್ಆರ್ಸಿಎಲ್ ಸಿದ್ಧಪಡಿಸಿದೆ. ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿಗೆ ಮಾತಿನ ಮೇಲೆ ನಿಗಾ ಇಲ್ಲ: ಇಕ್ಬಾಲ್ ಹುಸೇನ್
ಡಿಪಿಆರ್ ಸಲ್ಲಿಕೆ ಮಾಡಿದ ನಂತರ ಮಾತನಾಡಿದ ಜಿ ಪರಮೇಶ್ವರ್ ಅವರು, ತುಮಕೂರಿಗೆ ಮೆಟ್ರೋ ರೈಲು ಬೇಕು ಅನ್ನೋ ನಿಟ್ಟಿನಲ್ಲಿ ಬಹಳ ದಿನಗಳಿಂದ ಪ್ರಯತ್ನ ನಡೀತಿತ್ತು. ಕಳೆದ ಬಜೆಟ್ನಲ್ಲಿ ಫೀಸಿಬಿಲಿಟಿ ಅಧ್ಯಯನ ಮಾಡೋದಾಗಿ ಸಿಎಂ ಹೇಳಿದ್ದರು. ಹೈದರಾಬಾದ್ ಸಂಸ್ಥೆಯಿಂದ 3.5 ಕೋಟಿ ರೂ. ಕರ್ಚು ಮಾಡಿ ವರದಿ ಪಡೆಯಲಾಗಿದೆ. ಈ ವರದಿಯಲ್ಲಿ ಮಾದಾವರ ಟು ತುಮಕೂರು ಮೆಟ್ರೋ ಯೋಜನೆ ಮಾಡಬಹುದು ಅಂತ ಹೇಳಲಾಗಿದೆ ಎಂದು ತಿಳಿಸಿದರು.
