ಗದಗ: ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಗದಗ ಜಿಲ್ಲೆಯಲ್ಲಿ ಈಗಾಗಲೇ ಹಲವಾರು ಪ್ರಸಿದ್ಧ ಸ್ಥಳಗಳು, ಪ್ರಸಿದ್ಧ ತಾಣಗಳು ಜೊತೆಗೆ ಗದಗ ಜಿಲ್ಲೆ ಹಲವಾರು ಪುರಾತನ ದೇವಾಲಯಗಳಲ್ಲಿ ಪ್ರಾಚೀನ ಕಾಲದ ಶಿಲಾಯುಗಗಳು ಇಡೀ ರಾಜ್ಯದ ಜನರ ಕಣ್ಮಣ ಸೆಳೆಯುತ್ತವೆ.
ಹೌದು, ಇತ್ತೀಚಿಗಷ್ಟೇ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಮಾಹಿತಿ ಒಂದು ಹೊರಬಿದ್ದಿದ್ದು, ಪ್ರಜ್ವಲ್ ಎಂಬ ಬಾಲಕ ಮನೆಕಟ್ಟಿಸುತ್ತಿರುವ ಸಂದರ್ಭದಲ್ಲಿ ಅವರ ಮನೆ ಪಾಯ ಹಾಕುತ್ತಿರುವಾಗ ಪುರಾತನ ಕಾಲದ 466 ಗ್ರಾಂ ಚಿನ್ನ ಪತ್ತೆಯಾಗಿತ್ತು.
ಈ ಚಿನ್ನಕ್ಕೆ ಇದೀಗ ಸರಿ ಸುಮಾರು 8 ಕೋಟಿ ಬೆಲೆ ಬಾಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ಅವರು ತಿಳಿಸಿದ್ದಾರೆ.
ನಗರದಲ್ಲಿ ಇಂದು (ಬುಧವಾರ ಮೇ. 21) ಮಾತನಾಡಿದ ಅವರು, ಲಕ್ಕುಂಡಿಯಲ್ಲಿ ಪತ್ತೆಯಾದ ಈ ಖಜಾನೆಯಲ್ಲಿ ಸುಮಾರು 466 ಗ್ರಾಂ ತೂಕದ ಅಪರೂಪದ ಪುರಾತನ ಚಿನ್ನದ ಆಭರಣಗಳಿದ್ದು, ಅವು ಸುಮಾರು 600 ವರ್ಷಗಳ ಹಳೆಯದಾಗಿದೆ. ಇದನ್ನೂ ಓದಿ: ಜೈಲುಗಳಲ್ಲಿ ಹೊಸ ನಿಯಮ ಜಾರಿ; ಕೈದಿಗಳಿಗೆ ಶುರುವಾಯ್ತು ಢವಢವ!
ಈ ಖಜಾನೆಯ ಮೌಲ್ಯ ನಿರ್ಧಾರಕ್ಕಾಗಿ ಪುರಾತತ್ವ ಇಲಾಖೆಯ ಆಯುಕ್ತರು ಗದಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 7 ಸದಸ್ಯರ ಸಮಿತಿಯನ್ನು ರಚಿಸಿದ್ದರು. ಸಮಿತಿ ತನ್ನ ವರದಿ ಸಲ್ಲಿಸಿದ್ದು, ಅಂತರರಾಷ್ಟ್ರೀಯ ಪುರಾತತ್ವ ಮೌಲ್ಯದ ಆಧಾರದ ಮೇಲೆ ಖಜಾನೆಯ ಬೆಲೆ ಸುಮಾರು ರೂ.8 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
