ಉಡುಪಿ: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ (DHO) ಕೊಡುಗೆಯಾಗಿ ನೀಡಿರುವ ಹೊಸ ಸುಸಜ್ಜಿತ ವಾಹನಕ್ಕೆ ಇಂದು (ಶನಿವಾರ ಮೇ. 16) ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕೃತವಾಗಿ ಚಾಲನೆ ನೀಡಿದರು.
ನಂತರ ಇದೇ ಸಂದರ್ಭದಲ್ಲಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ‘ಸಂಜೀವಿನಿ’ ಸಂಸ್ಥೆಯ ವತಿಯಿಂದ ಸಮಗ್ರ ಕೃಷಿ ಸಮೂಹಗಳಡಿ ಸ್ಥಾಪಿಸಲಾಗಿರುವ ನೂತನ ‘ಜೀವನೋಪಾಯ ಸೇವಾ ಕೇಂದ್ರ’ ಕ್ಕೆ ಚಾಲನೆ ನೀಡಿ, ಕೃಷಿ ಚಟುವಟಿಕೆಗಳಿಗೆ ಪೂರಕವಾದ ನೂತನ ಟ್ರ್ಯಾಕ್ಟರ್ ಹಾಗೂ ಸರಕು ಸಾಗಾಣಿಕೆಯ ಟಾಟಾ ಏಸ್ ವಾಹನಗಳನ್ನು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಿದರು
ನಂತರ ಮಾತನಾಡಿದ ಅವರು, ಉಡುಪಿ ತಾಲೂಕಿನ ಅಲೆವೂರಿನ ‘ಸಮೃದ್ಧಿ ಸಂಜೀವಿನಿ ಗ್ರಾಮೀಣ ಪಂಚಾಯತ್ ಮಟ್ಟದ ಒಕ್ಕೂಟ ಸಂಪೂರ್ಣ ನಿರ್ವಹಣೆ ಮಾಡಲಿರುವ ಈ ಕೇಂದ್ರವು, ಸ್ಥಳೀಯ ರೈತ ಬಾಂಧವರಿಗೆ ಅತ್ಯಂತ ಸುಲಭ ಹಾಗೂ ರಿಯಾಯಿತಿ ದರದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದ ಮೇಲೆ ಒದಗಿಸಲಿದೆ ಎಂದು ಹೇಳಿದರು. ಇದನ್ನೂ ಓದಿ: ಇತಿಹಾಸ ಅರಿಯದೆ ಹೋದರೆ ಸಮಾಜದ ಅಂಕುಡೊಂಕುಗಳನ್ನು ಅರಿಯಲು ಸಾಧ್ಯವಿಲ್ಲ: ಸಿಎಂ
ಜಿಲ್ಲೆಯ ಜನರ ಆರೋಗ್ಯ ರಕ್ಷಣೆ ಮತ್ತು ರೈತರ ಆರ್ಥಿಕ ಸಬಲೀಕರಣಕ್ಕೆ ಈ ಯೋಜನೆಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ತಿಳಿದರು.
