Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ವಾಹನ ಸವಾರರ ಅನಾನುಕೂಲ ತಪ್ಪಿಸಿದ ಜಲಮಂಡಳಿ!
  • Bangalore
  • Politics
  • State

ವಾಹನ ಸವಾರರ ಅನಾನುಕೂಲ ತಪ್ಪಿಸಿದ ಜಲಮಂಡಳಿ!

Praja Vahini May 14, 2026
WhatsApp Image 2026-05-14 at 15.21.42
Spread the love

ಬೆಂಗಳೂರು: ಬೆಂಗಳೂರು ಜಲಮಂಡಳಿ ಅಳವಡಿಸಿಕೊಂಡಿರುವ ರೊಬೋಟಿಕ್‌ ತಂತ್ರಜ್ಞಾನದ ಯಶಸ್ವಿ ಬಳಕೆಯನ್ನು ಮುಂದುವರೆಸಿದೆ. ಕಳೆದ ಆರು ತಿಂಗಳಲ್ಲಿ 32,661 ಮೀಟರ್‌ಗಳ ತಪಾಸಣೆ ನಡೆಸಿದ್ದು, 399 ಸ್ಥಳಗಳಲ್ಲಿ ರಸ್ತೆ ಅಗತೆವನ್ನು ತಪ್ಪಿಸಿದೆ. ಈ ಮೂಲಕ ಸಾರ್ವಜನಿಕರಿಗೆ ಅಗುತ್ತಿದ್ದ ತೊಂದರೆಯನ್ನು ತಪ್ಪಿಸಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್‌ ಪ್ರಸಾತ್‌ ಮನೋಹರ್ ತಿಳಿಸಿದ್ದಾರೆ.

ನಗರದ ಸಂಚಾರ ದಟ್ಟಣೆಗೆ ಕಿರಿಕಿರಿಯಾಗದಂತೆ ಹಾಗೂ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಿರುವ ಬೆಂಗಳೂರು ಜಲಮಂಡಳಿಯು, ಕಳೆದ ವರ್ಷ ನವೆಂಬರ್‌ ನಲ್ಲಿ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರು ಚಾಲನೆ ನೀಡಿದ್ದ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವನ್ನು ಪೈಪ್‌ಲೈನ್ ಹಾಗೂ ಒಳಚರಂಡಿ ದೋಷಗಳನ್ನು ಪತ್ತೆಹಚ್ಚಲು ಯಶಸ್ವಿಯಾಗಿ ಬಳಸಿಕೊಂಡಿದೆ.

ಈ ವಿನೂತನ ತಂತ್ರಜ್ಞಾನದ ನೆರವಿನಿಂದ ಕಳೆದ ಆರು ತಿಂಗಳಲ್ಲಿ ನಗರದ ಬರೋಬ್ಬರಿ 399 ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆ ಅಗೆಯುವುದನ್ನು ತಪ್ಪಿಸಲಾಗಿದ್ದು, ಇದರಿಂದ ನಿತ್ಯ ನಗರದ ಪ್ರಯಾಣಿಕರು ಮತ್ತು ವಾಹನ ಸವಾರರು ಅನುಭವಿಸುತ್ತಿದ್ದ ಟ್ರಾಫಿಕ್ ಬವಣೆಗೆ ಬಹುದೊಡ್ಡ ಮಟ್ಟದಲ್ಲಿ ಮುಕ್ತಿ ಸಿಕ್ಕಿದೆ.

ಬೆಂಗಳೂರಿನಂತಹ ಮಹಾನಗರದಲ್ಲಿ ರಸ್ತೆ ಅಗೆಯುವುದು ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಎಷ್ಟು ಕಿರಿಕಿರಿ ಉಂಟುಮಾಡುತ್ತದೆ ಎಂಬುದು ನಮಗೆ ಅರಿವಿದೆ. ಈ ಹಿಂದೆ, ಪೈಪ್‌ಲೈನ್ ಸೋರಿಕೆ ಅಥವಾ ಒಳಚರಂಡಿ ದೋಷವನ್ನು ಪತ್ತೆಹಚ್ಚಲು ರಸ್ತೆಯುದ್ದಕ್ಕೂ ಅಗೆಯುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರ ನಿರ್ದೇಶನದಂತೆ ಅತ್ಯಾಧುನಿ ರೋಬೋಟಿಕ್ ತಂತ್ರಜ್ಞಾನವನ್ನು ಕಾರ್ಯಾಚರಣೆಗೆ ಅಳವಡಿಸಿಕೊಂಡಿದ್ದೇವೆ. ಇದನ್ನೂ ಓದಿ: ಕಾಲಮಿತಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸಿ: ಸಿಎಂ ಸೂಚನೆ

ಈ ಯಂತ್ರಗಳು ರಸ್ತೆಯನ್ನು ಅಗೆಯದೆಯೇ ಪೈಪ್‌ಲೈನ್ ಒಳಗೆ ಚಲಿಸಿ, ನಿಖರವಾಗಿ ದೋಷವನ್ನು ಪತ್ತೆಹಚ್ಚಿವೆ. ಇದರಿಂದ ಸತತ ಸುಮಾರು 32 ಕಿಲೋಮೀಟರ್‌ ವ್ಯಾಪ್ತಿಯ 399 ಕಡೆಗಳಲ್ಲಿ ರಸ್ತೆ ಅಗೆಯುವುದು ತಪ್ಪಿದ್ದು, ಸಾರ್ವಜನಿಕರಿಗೆ ತೊಂದರೆ ಆಗುವುದು ತಪ್ಪಿಸಲಾಗಿದೆ.

About the Author

Praja Vahini

Editor

View All Posts

Spread the love

Post navigation

Previous: ಕಾಲಮಿತಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸಿ: ಸಿಎಂ ಸೂಚನೆ
Next: ಕೇಂದ್ರ ಸರ್ಕಾರ ದೇಶದ ಯುವಜನತೆಗೆ ಕ್ರೂರ ದ್ರೋಹ ಮಾಡಿದೆ: ಸಿಎಂ

Views:

17

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.