Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕಾಂಗ್ರೆಸ್ ನವರಿಗೆ ತ್ಯಾಗ, ದೇಶ ಭಕ್ತಿ ಅನ್ನುವುದೇ ಗೊತ್ತಿಲ್ಲ: ಬೊಮ್ಮಾಯಿ
  • Politics
  • State
  • ಗದಗ

ಕಾಂಗ್ರೆಸ್ ನವರಿಗೆ ತ್ಯಾಗ, ದೇಶ ಭಕ್ತಿ ಅನ್ನುವುದೇ ಗೊತ್ತಿಲ್ಲ: ಬೊಮ್ಮಾಯಿ

Praja Vahini May 11, 2026 1 minute read
WhatsApp Image 2026-05-11 at 17.09.22
Spread the love

ಗದಗ: ಕಾಂಗ್ರೆಸ್ ನವರಿಗೆ ತ್ಯಾಗ, ದೇಶ ಭಕ್ತಿ ಅನ್ನುವುದೇ ಗೊತ್ತಿಲ್ಲ. ಕಾಂಗ್ರೆಸ್ ನವರಿಗೆ ಜನ ಮಾನಸದಲ್ಲಿ ದೇಶ ಭಕ್ತಿ ಆಳವಾಗಿ ಊರಿದೆ ಎಂಬುದು ಗೊತ್ತಿಲ್ಲ ವಿರೋಧ ಮಾಡುವುದರ ಸಲುವಾಗಿ ವಿರೋಧ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಇಂದು (ಸೋಮವಾರ ಮೇ. 11) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಇರಾನ್, ಇಸ್ರೇಲ್, ಅಮೇರಿಕಾ ಯುದ್ದ ನಡೆಯುತ್ತಿದೆ. ಗಲ್ಫ್ ರಾಷ್ಟ್ರದ ಯುದ್ದ ಮುಗಿಯುವಂತೆ ಕಾಣುತ್ತಿಲ್ಲ. ಉಕ್ರೇನ್ ರಷ್ಯಾ ಯುದ್ದ ಆದಾಗ ಬಹಳಷ್ಟು ಸಮಸ್ಯೆ ಆಗಿತ್ತು. ರಸಗೊಬ್ಬರ ಕಚ್ಚಾವಸ್ತುಗಳ ಸಮಸ್ಯೆ ಆಗಿತ್ತು. ಈಗ ಪೆಟ್ರೋಲ್, ಡಿಸೇಲ್, ಆಯಿಲ್ ಸಮಸ್ಯೆ ಆಗುತ್ತಿದೆ. ಇರಾನ್ ದೇಶದ ಮೇಲೆ ಅವಲಂಬಿತವಾಗಿದೇವೆ. ಇಷ್ಟು ದಿನ ನರೇಂದ್ರ ಮೋದಿ ಅವರು ಅಂತರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ಉಪಯೋಗಿಸಿ ಕಳೆದ ಎರಡು ತಿಂಗಳು ಪೆಟ್ರೋಲ್ ಡಿಸೇಲ್, ಗ್ಯಾಸ್ ಸಮಸ್ಯೆ ಆಗದಂತೆ ನೋಡಿದ್ದರು.

ಆಯಿಲ್ ಕಂಪನಿಗಳು ನಷ್ಟದಲ್ಲಿ ವಿತರಣೆ ಮಾಡಿದ್ದಾರೆ. ಯುದ್ದ ಮುಗಿಯುತ್ತೇ ಎಂಬ ನಂಬಿಕೆ ಇತ್ತು. ಆದರೆ, ಯುದ್ದ ಮುಗಿದ್ದಿಲ್ಲ. ಬರುವ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ಗ್ಯಾಸ್ ಸಂಕಷ್ಟ ಬರಹಬಹುದು. ಅಂತರಾಷ್ಟ್ರೀಯ ಮಟ್ಟದಲ್ಲಿ ದರಗಳು ಹತ್ತು ಪಟ್ಟು ಹೆಚ್ಚಿಗೆ ಆಗಿವೆ. ಅಮೇರಿಕಾ, ಶ್ರೀಲಂಕಾ, ಮಲೇಷಿಯಾ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರದಲ್ಲಿ ದರ ಏರಿಕೆ ಆಗಿದೆ. ಭಾರತ ದರ ಹೆಚ್ಚಿಗೆ ಆಗದೆ ಇರುವ ದೇಶವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ ಕೊಟ್ಟಿದ್ದಾರೆ. ಜನರು ನಮ್ಮ ಮಿತವ್ಯಯದಲ್ಲಿ ಬಳಕೆ ಮಾಡಬೇಕು. ಇದನ್ನೂ ಓದಿ: ಪಕ್ಷದ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ

ನಮ್ಮ ಮೇಲೆ ಬರುವ ದೊಡ್ಡ ಬಾರ, ಹಣ ದುಬ್ಬರವನ್ನ ನಿಲ್ಲಿಸಬಹುದಾಗಿದೆ. ಸುಲಭವಾಗಿ ಮಾಡಬಹುದಾಗಿದೆ. ಬಂಗಾರ ಖರೀದಿ ಮಾಡುವದ್ರಿಂದ ವಿದೇಶಿ ತೆರಿಗೆ ಹೊಡೆತ ಬೀಳುತ್ತಿದೆ. ಹೀಗಾಗಿ ಒಂದು ವರ್ಷ ಬಂಗಾರ ಖರೀದಿ ನಿಲ್ಲಿಸಿದದಿದ್ದರೆ ಏನೂ ಆಗುವುದಿಲ್ಲ. ಇನ್ನು ಪೆಟ್ರೋಲ್ ಡಿಸೇಲ್ ಮಿತವ್ಯಯವಾಗಿ ಬಳಕೆ ಮಾಡಬೇಕು. ರಸಗೊಬ್ಬರ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಕೆ ಮಾಡಿ ಎಂದಿದ್ದಾರೆ. ಇನ್ನು ವಿದೇಶ ಪ್ರಯಾಣ ಸಹ ಕಡಿಮೆ ಮಾಡಬೇಕು ಎಂದಿದ್ದಾರೆ ದೇಶಕ್ಕಾಗಿ ಇಷ್ಟಾದರೂ ನಾವು ಮಾಡಬೇಕಿದೆ ಎಂದು ಹೇಳಿದರು.

 

About the Author

Praja Vahini

Editor

View All Posts

Spread the love

Post navigation

Previous: ಪಕ್ಷದ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ
Next: ಪ್ರಧಾನಿ ಅವರ ಸುಳ್ಳು, ಕೀಳು ಅಭಿರುಚಿ, ದ್ವೇಷಾಸೂಯೆಗಳ ಭಾಷಣಗಳ ಮಾಡ್ತಾರೆ: ಸಿಎಂ

Views:

21

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.