ಹೈದರಾಬಾದ್: ಕಳೆದ ಹಲವು ತಿಂಗಳಿಗಳಿಂದ ದೇಶದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಆಗುತ್ತಿರುವುದರಿಂದ ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರಿಗೆ ಮದುವೆ ಹಾಗೂ ಇನ್ನಿತರ ಹಬ್ಬಗಳಲ್ಲಿ ಚಿನ್ನ ಖರೀದಿ ಮಾಡಬೇಡಿ ಎಂದು ಕರೆ ನೀಡಿದ್ದಾರೆ.
ಹೈದರಾಬಾದ್ ನಲ್ಲಿ ದೇಶದ ಜನತೆ ಉದ್ದೇಶಸಿ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳನ್ನು ವಿವೇಚನೆಯಿಂದ ಬಳಸಿ. ಪೆಟ್ರೋಲಿಯಂ ಉತ್ಪನ್ನಗಳಿಗೆ ಭಾರತ ಅವಲಂಬಿತವಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್‌ನಂತಹ ಉತ್ಪನ್ನಗಳನ್ನು ಸಂಯಮದಿಂದ ಬಳಸಬೇಕು. ಅಗತ್ಯಕ್ಕೆ ತಕ್ಕಂತೆ ಪೆಟ್ರೋಲಿಯಂ ಉತ್ಪನ್ನಗಳನ್ನ ಬಳಸಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣ ತನಿಖೆ ಚುರುಕು
ಮುಂದಿನ ಒಂದು ವರ್ಷ ಚಿನ್ನ ಖರೀದಿಸಬೇಡಿ. ಮನೆಯಲ್ಲಿ ಯಾವುದೇ ಪ್ರಮುಖ ಕಾರ್ಯಕ್ರಮ ಅಥವಾ ಮದುವೆ ಇದ್ದರೂ ಸಹ. ಜನರು ಕನಿಷ್ಠ ಒಂದು ವರ್ಷದವರೆಗೆ ಚಿನ್ನಾಭರಣ ಖರೀದಿಸುವುದನ್ನು ನಿಲ್ಲಿಸಬೇಕು. ದೇಶವು ಯುದ್ಧ ಅಥವಾ ರಾಷ್ಟ್ರೀಯ ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ ಜನರು ರಾಷ್ಟ್ರದ ಹಿತದೃಷ್ಟಿಯಿಂದ ಸರ್ಕಾರಕ್ಕೆ ತಮ್ಮ ಚಿನ್ನವನ್ನು ದಾನ ಮಾಡುತ್ತಾರೆ. ಇಂದು ಸರ್ಕಾರಕ್ಕೆ ನಿಮ್ಮ ಚಿನ್ನದ ದೇಣಿಗೆಗಳು ಅಗತ್ಯವಿಲ್ಲದಿದ್ದರೂ, ರಾಷ್ಟ್ರದ ಹಿತದೃಷ್ಟಿಯಿಂದ ಜನರು ಕನಿಷ್ಠ ಒಂದು ವರ್ಷದವರೆಗೆ ಹೊಸ ಚಿನ್ನ ಮತ್ತು ಚಿನ್ನದ ಆಭರಣಗಳನ್ನು ಖರೀದಿಸುವುದನ್ನು ತಡೆಯಬೇಕು ಎಂದು ತಿಳಿಸಿದ್ದಾರೆ.
ಹಲವು ತಿಂಗಳಿಗಳಿಂದ ಬೆಲೆ ಏರಿಕೆ ಕಂಡಿರುವ ಚಿನ್ನ ನರೇಂದ್ರ ಮೋದಿಯವರು ಹೇಳಿರುವ ಹೇಳಿಕೆಯಿಂದಾಗಿ ದೇಶದಲ್ಲಿ ಚಿನ್ನದ ದರ ಕಡಿಮೆ ಯಾಗುತ್ತದೆ ಎಂದು ಕಾದ ನೋಡಬೇಕಿದೆ.
