ಬೆಂಗಳೂರು: ಹೆಚ್ಎಸ್ಆರ್ ಲೇಔಟ್ನ ಶಕ್ತಿದೇವತೆ ಶ್ರೀ ಕಾವೇರಮ್ಮನವರ ಮೊದಲ ವರ್ಷದ ವಾರ್ಷಿಕೋತ್ಸವಕ್ಕೆ ಅದ್ಧೂರಿ ಚಾಲನೆ ದೊರಕಿದೆ. ಈ ಕಾರ್ಯಕ್ರಮ ಎರಡು ದಿನ ನಡೆಯಿದ್ದು, ಶುಕ್ರವಾರ ಸಂಜೆ 5 ಗಂಟೆಗೆ ಕುಂಭಾಭಿಷೇಕ ಕಾರ್ಯಕ್ರಮದೊಂದಿಗೆ ಈ ಪವಿತ್ರ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಕುಟುಂಬಸ್ಥರಿಂದ ಕಲಶ ಹೊತ್ತ ಗಂಗಾರತಿಯೊಂದಿಗೆ ಗಂಗಾಪೂಜೆ, ಅಂಕುರಾರ್ಪಣೆ, ವಾಸ್ತು ಹೋಮ ಮತ್ತು ರಕ್ಷಾಬಂಧನ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ಕಾರ್ಯಗಳು ನೆರೆವೇರಿದವು. ಇದನ್ನೂ ಓದಿ: ಬಿಎಸ್ವೈ ಅಭಿಮಾನೋತ್ಸವ ಡಿಕೆಶಿ ಹೇಳಿದ್ದೇನು?
ಇನ್ನು ಇಂದು (ಶನಿವಾರ ಮೇ 09) ಬೆಳಿಗ್ಗೆ 6 ಗಂಟೆಯಿಂದಲೇ ವಿಶೇಷ ಪೂಜೆಗಳು ಆರಂಭವಾಗಿದ್ದು, ಗಣಪತಿ ಪೂಜೆ, ಜೀವಕಲನ್ಯಾಸ ಶಕ್ತಿ ಆವಾಹನೆ, ಸೂಕ್ತ ಹೋಮ, ಪರಿವಾರ ದೇವತೆಗಳ ಹೋಮ, ಪೂರ್ಣಾಹುತಿ, ಕುಂಭಾಬಿಷೇಕ ನಂತರ ಪ್ರಸಾದ ವಿನಿಯೋಗ ಕಾರ್ಯಕ್ರಮ ನೆರವೇರಿದವು.
ಯಾವುದೇ ಕುಂದು ಕೊರತೆ ಬಾರದಂತೆ ಈ ಮೊಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರೆವೇರಿತು. ಈ ಧಾರ್ಮಿಕ ವಿಧಿವಿಧಾನ ಕಾರ್ಯದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಭಕ್ತಿ ಸಾಗರದಲ್ಲಿ ಮಿಂದೆದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಲಕ್ಷ್ಮಿ ಆನಂದ, ದಲಿತ ಮುಖಂಡರಾದ ಬಿ ರಮೇಶ್, ಮಂಗಮ್ಮನ ಪಾಳ್ಯ ವಾರ್ಡ್ ಅಧ್ಯಕ್ಷರಾದ ಗೋಪಿನಾಥ್ ರೆಡ್ಡಿ, ಸುನಂದಮ್ಮ ದಲಿತ ಮುಖಂಡರು, ಕೃಷ್ಣಮೂರ್ತಿ ಎಚ್ಎಸ್ಆರ್ ಲೇಔಟ್ ನ ಒಕ್ಕೂಟದ ಅಧ್ಯಕ್ಷರು, ಹರ್ಷಿತ, ಯೋಗ ಆಧ್ಯಾತ್ಮಕ ಬೋಧಕರಾದ ಕೃಷ್ಣಮೂರ್ತಿ, ಕೋಡತಿ ರಘು ಗ್ರಾಮ ಪಂಚಾಯಿತಿ ಅಧ್ಯಕ್ಷರು,ಹಾಗೂ ಎಳ್ಳು ಕುಂಟೆ, ಮಂಗಮ್ಮನ ಪಾಳ್ಯ, ಎಚ್ ಎಸ್ ಆರ್ ಬಡಾವಣೆ ಸುತ್ತಮುತ್ತಲಿನ ಬಡಾವಣೆಗಳು ಭಾಗಿಯಾಗಿದ್ದರು.
