ಬೆಂಗಳೂರು: ಡಿಕೆ ಬ್ರದರ್ಸ್ ಕಳೆದ ಎರಡು ದಿನಗಳ ಹಿಂದೆ ದೆಹಲಿ ಅಂಗಳದಲ್ಲಿ ಕುರ್ಚಿ ಕಸರತ್ತಿಗೆ ಫುಲ್ ಸರ್ಕಸ್ ಮಾಡಿದ್ದು, ಹೈಕಮಾಂಡ್ ಜೊತೆ ಮಹತ್ವದ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಕಾಂಗ್ರೆಸ್ ಪಡೆಸಾಲೆಯಲ್ಲಿ ಮೇ 15ರ ಒಳಗಾಗಿ ಸಿಎಂ ಬದಲಾಗುತ್ತಾರೆ ಎಂಬ ಕೂಗು ಜೋರಾಗಿ ಕೇಳುತ್ತಿರುವ ಬೆನ್ನಲ್ಲೇ ಇದೀಗ ಬಮುಲ್ ಅಧ್ಯಕ್ಷ ಡಿ ಕೆ ಸುರೇಶ್ ಅವರು ಪ್ರತಿಕ್ರಿಯಿಸಿದ್ದು, ಕೆಲವೊಮ್ಮೆ ನಾವು ಸರ್ಕಾರದ ಕೆಲಸದ ನಿಮಿತ್ಯ ದೆಹಲಿಗೆ ಹೋಗಿರುತ್ತೇವೆ ಇನ್ನು ಕೆಲವೊಂದು ಸಾರಿ ವೈಯಕ್ತಿಕ ಕಾರಣಗಳಿಂದ ದೆಹಲಿಗೆ ತೆರಳುತ್ತೇವೆ ಆದರೆ ಇದರಲ್ಲಿ ಖುಷಿ ಪಡುವಂತ ವಿಚಾರ ಏನು ಇಲ್ಲ ಎಂದು ತಿಳಿಸಿದ್ದಾರೆ.
ನಗರದಲ್ಲಿ ಇಂದು (ಬುಧವಾರ ಏ. 29) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಅವರು ಹುಟ್ಟುಹಬ್ಬಕ್ಕೆ ಯಾವುದೇ ಪ್ಲೆಕ್ಸ್, ಬ್ಯಾನರ್ ಹಾಕಬೇಡಿ ಎಂದಿದ್ದಾರೆ. ಎಲ್ಲರೂ ದಯವಿಟ್ಟು ಇದನ್ನು ಪಾಲನೆ ಮಾಡುವುದು ಒಳಿತು ಎಂದರು. ಇದನ್ನೂ ಓದಿ: ಸಾರಿಗೆ ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ
ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ. ಇದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ಪಾಲನೆ ಮಾಡುತ್ತೇವೆ ಎಂದು ಹೇಳಿದ್ದೇವೆ ಎಂದರು.
