ಕೆಲವರಿಗೆ ಟೀ, ಕಾಫಿ ಅಂದ್ರೆ ಪಂಚಪ್ರಾಣ. ದಿನಪೂರ್ತಿ ಊಟವಿಲ್ಲದೆ ಇದ್ದರೂ ಪರವಾಗಿಲ್ಲ ಟೀ, ಕಾಫಿ ಇಲ್ಲದೆ ಅವರು ದಿನ ಕಳೆಯೋದೆ ಕಷ್ಟ ಎನ್ನುವ ರೀತಿಯಲ್ಲಿ ಬದುಕುತ್ತಾರೆ.
ಹೌದು, ಸಂಶೋಧನೆಯ ಪ್ರಕಾರ ಭಾರತ ದೇಶದಲ್ಲಿ ನೀರು ಬಿಟ್ಟರೆ ಹೆಚ್ಚಾಗಿ ಕುಡಿಯುವುದೇ ಟೀ, ಕಾಫಿ ಎಂದು ವರದಿಯಾಗಿದೆ. ಟೀ, ಕಾಫಿಯನ್ನು ಮಿತವಾಗಿ ಕುಡಿದರೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದು ಇಲ್ಲದಿದ್ದರೆ ಹೆಚ್ಚಾಗಿ ಕುಡಿದರೆ ಆರೋಗ್ಯಕ್ಕೆ ಹಾನಿಕರ ಎಂದು ವೈದ್ಯರು ತಿಳಿಸುತ್ತಾರೆ.
ಇನ್ನು ಬೇಸಿಗೆಯಲ್ಲಿ ಟೀ ಕಾಫಿ ಹೆಚ್ಚಾಗಿ ಕುಡಿಯುವುದರಿಂದ ದೇಹದ ಮೇಲೆ ಹಲವಾರು ಅಡ್ಡ ಪರಿಣಾಮಗಳು ಬೀರುವುದು ಹಾಗಾಗಿ ಮಿತವಾಗಿ ಟೀ, ಕಾಫಿ ಕುಡಿದರೆ ಒಳಿತು ಎಂದು ವೈದ್ಯರು ತಿಳಿಸುತ್ತಾರೆ.
ಗ್ಯಾಸ್ಟ್ರಿಕ್ ತೊಂದರೆ
ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಹೊಟ್ಟೆಯಲ್ಲಿ ಕಿರಿಕಿರಿ, ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಹೆಚ್ಚಾಗುತ್ತವೆ. ಹೆಚ್ಚು ಪ್ರಮಾಣದಲ್ಲಿ ಕುಡಿಯುವುದರಿಂದ ಈ ತೊಂದರೆಗಳು ಗಂಭೀರವಾಗಬಹುದು.
ನಿದ್ರಾಹೀನತೆ
ಸಂಜೆ ಅಥವಾ ರಾತ್ರಿ ವೇಳೆ ಚಹಾ ಕುಡಿಯುವುದರಿಂದ ನಿದ್ರೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಜೊತೆಗೆ ಹೃದಯ ಬಡಿತ ಹೆಚ್ಚಾಗಿ ಚಡಪಡಿಕೆ ಕಾಣಿಸಿಕೊಳ್ಳಬಹುದು.
ನಿರ್ಜಲೀಕರಣದ ಅಪಾಯ
ಚಹಾದಲ್ಲಿ ಇರುವ ಕ್ಯಾಫೀನ್ ಕಾರಣದಿಂದ ಪದೇಪದೇ ಮೂತ್ರ ವಿಸರ್ಜನೆ ಆಗುತ್ತದೆ. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗಿ ನಿರ್ಜಲೀಕರಣದ ಅಪಾಯ ಹೆಚ್ಚಾಗುತ್ತದೆ.
ಶಾಖದ ಹೊಡೆತದ ಸಾಧ್ಯತೆ
ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವ ಮುನ್ನ ಬಿಸಿ ಚಹಾ ಕುಡಿಯುವುದರಿಂದ ದೇಹದ ಉಷ್ಣತೆ ಏರಿಕೆ ಕಂಡುಬರುತ್ತದೆ. ಇದು ಶಾಖದ ಹೊಡೆತಕ್ಕೆ ಕಾರಣವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಎಚ್ಚರಿಕೆ ಅಗತ್ಯ
ಬೇಸಿಗೆಯಲ್ಲಿ ಚಹಾ ಕುಡಿಯುವುದರಿಂದ ಏನೂ ಆಗುವುದಿಲ್ಲ ಎಂಬ ಭಾವನೆ ಹಲವರಲ್ಲಿ ಇದೆ. ಆದರೆ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ಮಿತವಾಗಿ, ಸರಿಯಾದ ಸಮಯದಲ್ಲಿ ಚಹಾ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತು ಎಂದು ತಜ್ಞರು ಸಲಹೆ ನೀಡಿದ್ದಾರೆ.
