ದಳಪತಿ ವಿಜಯ್ ತಮಿಳುನಾಡಿನಲ್ಲಿ ಇತ್ತೀಚಿಗಷ್ಟೇ ರಾಜಕೀಯ ರಂಗಕ್ಕೆ ಹೊಸ ಪಕ್ಷ (ಟಿವಿಕೆ ಪಕ್ಷ) ಕಟ್ಟುವ ಮೂಲಕ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಧಿಕೃತವಾಗಿ ಸ್ಪರ್ಧೆ ಮಾಡುವ ಮೂಲಕ ಇದೀಗ ಚುನಾವಣೆಗೆ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ಹೌದು, ಹಲವಾರು ಸಂಕಷ್ಟ, ಅವಮಾನಗಳನ್ನ ಎದುರಿಸಿ ಇದೀಗ ಮುಂಬರುವ ವಿಧಾನಸಭೆ ಚುನಾವಣೆಯ ಅಖಾಡಕ್ಕೆ ಎಂಟ್ರಿ ಕೊಟ್ಟಿರುವ ವಿಜಯ್ ದಳಪತಿ ಅವರು ಅಬ್ಬರದ ಪ್ರಚಾರ ಕೈಗೊಂಡಿದ್ದು, ಕನ್ಯಾಕುಮಾರಿಯಲ್ಲಿ ಪ್ರಚಾರದ ವೇಳೆ ಅಭಿಮಾನಿ ಒಬ್ಬರು ಹೂಮಾಲೆಯನ್ನ ಎಸೆದಿದ್ದನ್ನು ಕಂಡು ದಳಪತಿ ವಿಜಯ್ ಅವರು ಓಡಿಹೋಗಿದ್ದಾರೆ.
ಕನ್ಯಾಕುಮಾರಿಯಲ್ಲಿ ಪ್ರಚಾರ ನಡೆಸುವ ವೇಳೆ ಸೈಕಲ್ ರೈಡ್ ಮಾಡುತ್ತಿದ್ದರು. ಈ ವೇಳೆ ಅಭಿಮಾನಿಗಳ ದೊಡ್ಡ ಗುಂಪು ಅವರನ್ನು ಸುತ್ತುವರೆದಿದ್ದು, ಭದ್ರತಾ ಆತಂಕದ ನಡುವೆ ಅವರು ಮುಂದೆ ಸಾಗುತ್ತಿದ್ದರು.
ಇದರಲ್ಲಿ ಅಭಿಮಾನಿಯೋರ್ವ ಹೂವಿನ ಮಾಲೆಯನ್ನು ಎಸೆಯಲು ಮುಂದಾದ ಕ್ಷಣ, ದಳಪತಿ ವಿಜಯ್ ಗಾಬರಿಗೊಂಡು ಅದನ್ನು ಬಾಂಬ್ ಎಂದು ಭಾವಿಸಿ ಸೈಕಲ್ ಬಿಟ್ಟು ತಕ್ಷಣ ಸ್ಥಳದಿಂದ ಓಡಿ ಕಾರಿನಲ್ಲಿ ಆಶ್ರಯ ಪಡೆದರು ಎನ್ನಲಾಗಿದೆ. ಇದನ್ನೂ ಓದಿ: ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಕೇಸ್ಗೆ ಬಿಗ್ ಟ್ವಿಸ್ಟ್
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ಹರಡುತ್ತಿದ್ದು, ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಭದ್ರತಾ ಕಾರಣದಿಂದ ಈ ಕ್ರಮ ತೆಗೆದುಕೊಂಡಿರಬಹುದು ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ವಿಜಯ್ ನಡೆಗೆ ಟೀಕೆ ವ್ಯಕ್ತಪಡಿಸಿದ್ದಾರೆ.
