Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸ್ವಚ್ಛತೆಗೆ ಇಡೀ ರಾಜ್ಯದಲ್ಲಿಯೇ 5ನೇ ಸ್ಥಾನ ಪಡೆದ ಕಲಬುರ್ಗಿ ಜಿಲ್ಲೆ
  • Politics
  • State
  • ಕಲಬುರಗಿ

ಸ್ವಚ್ಛತೆಗೆ ಇಡೀ ರಾಜ್ಯದಲ್ಲಿಯೇ 5ನೇ ಸ್ಥಾನ ಪಡೆದ ಕಲಬುರ್ಗಿ ಜಿಲ್ಲೆ

Praja Vahini April 4, 2026 1 minute read
WhatsApp Image 2026-04-04 at 16.37.34
Spread the love

ಕಲಬುರ್ಗಿ: ದೇಶದ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಕಲಬುರಗಿ ಗಮನಾರ್ಹ ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿ. ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣೆ ವರದಿಯಲ್ಲಿ 227ನೇ ಸ್ಥಾನದಲ್ಲಿದ್ದ ಕಲಬುರಗಿ ನಗರವು ಸತತ ಪರಿಶ್ರಮ, ಪರಿಣಾಮಕಾರಿ ಆಡಳಿತಾತ್ಮಕ ಯೋಜನೆಗಳಿಂದಾಗಿ 2024-25ನೇ ಸಾಲಿನಲ್ಲಿ 57ನೇ ಸ್ಥಾನಕ್ಕೆ ಜಿಗಿದಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಅವರು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ಕೇವಲ 12 ತಿಂಗಳಲ್ಲಿ 170 ಸ್ಥಾನಗಳಷ್ಟು ಮೇಲೇರಿರುವ ಕಲಬುರಗಿ ನಗರವು ರಾಜ್ಯದಲ್ಲಿಯೇ ಐದನೇ ಸ್ಥಾನ ಪಡೆದಿದೆ. ಕಲಬುರಗಿಯು ಒಟ್ಟು 12,500 ಅಂಕಗಳಲ್ಲಿ 7,823 ಅಂಕಗಳನ್ನು ಗಳಿಸಿದೆ. ಇದು ರಾಜ್ಯ ಹಾಗೂ ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕ ಎನ್ನುವುದು ಗಮನಾರ್ಹ ಸಂಗತಿ.

ಕಲಬುರಗಿ ನಗರವನ್ನು ತ್ಯಾಜ್ಯ ಮುಕ್ತಗೊಳಿಸುವ ಪ್ರಯತ್ನದ ಜೊತೆಗೆ, ಬಯಲು ಬಹಿರ್ದೆಸೆ ಮುಕ್ತಗೊಳಿಸುವಲ್ಲಿಯೂ ಯಶಸ್ಸು ಕಂಡಿದ್ದೇವೆ. ವಸತಿ ಪ್ರದೇಶಗಳು, ಮಾರುಕಟ್ಟೆ ಸಂಕೀರ್ಣಗಳು, ಕೆರೆ- ಜಲಮೂಲಗಳ ಸ್ವಚ್ಛತೆಯಲ್ಲಿ ಶೇ 100 ರಷ್ಟು ಅಂಕಗಳನ್ನು ಪಡೆದಿರುವುದು ನಮ್ಮ ಬದ್ಧತೆಗೆ ಸಾಕ್ಷಿ. ತ್ಯಾಜ್ಯ ಸಂಗ್ರಹಣೆ, ಸಂಸ್ಕರಣೆಯಲ್ಲಿ ಕಲಬುರಗಿ ನಗರವು ಮಾದರಿ ಹೆಜ್ಜೆ ಇರಿಸಿದೆ. ಇದನ್ನೂ ಓದಿ: ಮೋದಿ ಸರ್ಕಾರ ಸಾಲ ಮಾಡಿಲ್ಲವೇ?: ಡಿಕೆಶಿ

ಸ್ವಚ್ಛತಾ ಕಾರ್ಯಗಳ ಮೂಲಕ ರಾಷ್ಟ್ರೀಯ ಮನ್ನಣೆ ಪಡೆಯುವುದು ಮಾತ್ರವಲ್ಲದೆ, ಕಲಬುರಗಿಯನ್ನು ಸ್ವಸ್ಥ, ಆರೋಗ್ಯಕರ, ಆಹ್ಲಾದಕರ ತಾಣವಾಗಿಸುವುದು ನಮ್ಮ ಉದ್ದೇಶ. ಸಂಪೂರ್ಣ ಜಿಲ್ಲೆಯನ್ನು ತ್ಯಾಜ್ಯ ನಿರ್ವಹಣೆ, ವಿಲೇವಾರಿ ಸಮಸ್ಯೆಗಳಿಂದ ಮುಕ್ತಗೊಳಿಸುವತ್ತ ಗಮನ ಹರಿಸಿದ್ದೇವೆ. ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಸ್ವಚ್ಛ ಹಾಗೂ ಮಾದರಿ ಕಲಬುರಗಿ ನಿರ್ಮಿಸುವುದು ನಮ್ಮ ಗುರಿ ಎಂದಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಮೋದಿ ಸರ್ಕಾರ ಸಾಲ ಮಾಡಿಲ್ಲವೇ?: ಡಿಕೆಶಿ
Next: ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ಸೇರಿ 6 ಗಣ್ಯರಿಗೆ ಬೆಂಗಳೂರು ನಗರ ವಿವಿಯಿಂದ ಗೌರವ ಡಾಕ್ಟರೇಟ್

Views:

33

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.