ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ಪಾಲಿಕೆಗಳ ಲೋಗೋಗಳನ್ನ ಅನಾವರಣಗೊಳಿಸಿದೆ.
ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಮರುನಾಮಕರಣವಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಇದೀಗ ತನ್ನ 5 ಲೋಗೋಗಳನ್ನ ಅನಾವರಣಗೊಳಿಸಿದೆ.
ಇನ್ನು ಪ್ರಮುಖವಾಗಿ ಐದು ಲೋಗೋಗಳಲ್ಲಿ ಒಂದು ಲೋಗೋದಲ್ಲಿ ಕೆಂಪೇಗೌಡ ಅವರು ಖಡ್ಗ ಹಿಡಿದು ನಿಂತಿರುವ ಲೋಗೋ ಆಕರ್ಷಕವಾಗಿದ್ದು, ಇದರ ಹಿಂದೆ ಹಲವಾರು ಪ್ರಮುಖ ಉದ್ದೇಶಗಳಿವೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಪರಂಪರೆ ಮತ್ತು ವೈಭವವನ್ನು ಪ್ರತಿಬಿಂಬಿಸುವಂತೆ ಲೋಗೋವನ್ನು ಹೊಸ ರೀತಿಯಲ್ಲಿ ರೂಪಿಸಲಾಗಿದೆ. ಹಳೆಯ ಬಿಬಿಎಂಪಿ ಚಿಹ್ನೆಯಲ್ಲಿದ್ದ ಕೆಂಪೇಗೌಡರ ಗೋಪುರವನ್ನು ಇಲ್ಲಿಯೂ ಬಳಸಿಕೊಳ್ಳಲಾಗಿದ್ದು, ಕೊಂಚ ಹೊಸ ಸ್ಪರ್ಶ ನೀಡಲಾಗಿದೆ.
ಇನ್ನು ಲೋಗೋದ ಪ್ರತಿಯೊಂದು ಬಣ್ಣಗಳು ಗಮನ ಸೆಳೆಯುವಂತಿವೆ. ನಗರ ಪಾಲಿಕೆಗಳ ಹೆಸರನ್ನು ವೃತ್ತಾಕಾರದಲ್ಲಿ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ದಾವಣಗೆರೆಯಲ್ಲಿ ಶ್ರೀರಾಮುಲು ಭರ್ಜರಿ ಮತ ಪ್ರಚಾರ
ಪ್ರತಿಯೊಂದು ಪಾಲಿಕೆಗಳ ಲೋಗೋದಲ್ಲಿ ಕೆಂಪೇಗೌಡರ ಗೋಪುರವಿದ್ದು, ಪ್ರತ್ಯೇಕ ಬಣ್ಣಗಳನ್ನು ಹೊಂದಿವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು 5 ನಗರ ಪಾಲಿಕೆಗಳ ಲೋಗೋವನ್ನು ಚಿತ್ರಕಲಾ ಪರಿಷತ್ನಿಂದ ಸಿದ್ಧಪಡಿಸಲಾಗಿದೆ. ಮಾರ್ಚ್ 20ರಂದು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಜಿಬಿಎ ಸಭೆಯಲ್ಲಿ ಲೋಗೋವನ್ನು ಅಂತಿಮಗೊಳಿಸಲಾಗಿತ್ತು. ಒಟ್ಟಿನಲ್ಲಿ ಐದು ಬಣ್ಣಗಳಲ್ಲಿ ಐದು ಲೋಪಗಳು ವಿಭಿನ್ನವಾಗಿದ್ದು ನೋಡಲು ಆಕರ್ಷಕವಾಗಿವೆ.
