ಬೆಂಗಳೂರು: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ಕಟ್ಟಡ ಅಕ್ರಮವಾಗಿ ಕಟ್ಟುವುದರ ಜೊತೆಗೆ ಪರಿಶ್ರಮ ನೀಟ್ ಅಕಾಡೆಮಿ ಲೈಸೆನ್ಸ್ ಕೂಡ ಡುಬ್ಲಿಕೇಟ್ ಇದೆ ಎಂದು ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದೆ.
ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ಪಾಠ ಸರಿಯಾಗಿ ಮಾಡದೆ ವಿದ್ಯಾರ್ಥಿಗಳ ಹತ್ತಿರ ಲಕ್ಷ, ಲಕ್ಷ ಫೀಸ್ ವಸೂಲಿ ಮಾಡಿ ಸರಿಯಾಗಿ ಪಾಠ ಮಾಡುತ್ತಿಲ್ಲ ಎಂದು ಈಗಾಗಲೇ ಶಿಕ್ಷಣ ಇಲಾಖೆಗೆ ನೂರಾರು ದೂರು ಕೊಟ್ಟರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರು ಕೇಳಿ ಬರುತ್ತಿದೆ.
ಶಾಸಕ ಪ್ರದೀಪ್ ಈಶ್ವರ್ ಅವರು ಹೇಳುವ ಪ್ರಕಾರ ನನ್ನ ಶ್ರಮದಿಂದ ನಾನು ಇಷ್ಟು ದೊಡ್ಡ ಅಕಾಡೆಮಿಯನ್ನು ಕಟ್ಟಲು ಸಾಧ್ಯವಾಯಿತು ಎಂದು ಪದೇ ಪದೇ ಹೇಳುತ್ತಾರೆ. ಆದರೆ ಇದೀಗ ಶ್ರಮಪಟ್ಟು ಕಟ್ಟಿರುವ ನೀಟ್ ಅಕಾಡೆಮಿಯಲ್ಲಿಯೇ ದೋಖಾ ಕಂಡುಬರುತ್ತಿದೆ. ಇದನ್ನೂ ಓದಿ: ಮೋದಿ ಸರ್ಕಾರವು ಕನ್ನಡಿಗರನ್ನ ಶತ್ರುಗಳಂತೆ ಕಾಣುತ್ತಿದೆ: ಪ್ರಿಯಾಂಕ್ ಖರ್ಗೆ
ಹಾಗಾದ್ರೆ ಶಿಕ್ಷಣ ಇಲಾಖೆಯ ಪರಿಶ್ರಮ ನೀಟ್ ಅಕಾಡೆಮಿಯ ಮೇಲೆ ಕ್ರಮ ತೆಗೆದುಕೊಳ್ಳುತ್ತದ ಅಥವಾ ಇದನ್ನು ಮುಚ್ಚಿ ಹಾಕುತ್ತದ ಎಂದು ಕಾದು ನೋಡಬೇಕಿದೆ.
