ಬೆಂಗಳೂರು: ಸಿದ್ದಗಂಗಾ ಮಠದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವವನ್ನು ಮಹಾಲಕ್ಷ್ಮೀ ಲೇಔಟ್ ಬಸವಧಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಶಾಸಕರಾದ ಕೆ.ಗೋಪಾಲಯ್ಯರವರು ಸ್ವಾಮೀಜಿಯ ಭಾವಚಿತ್ರ ಹಾಗೂ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗುರುವಂದನೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಸ್ವಾಮೀಜಿಗಳು ಶ್ರೀಮನ್ ನಿರಂಜನ ಪ್ರಣವ ಸ್ವರೂಪಿಗಳಾಗಿದ್ದರು, ಬಸವಶ್ರೀ ಪ್ರಶಸ್ತಿ ಪುರಸ್ಕೃತರು, ಪದ್ಮಭೂಷಣ ಹಾಗೂ ಕರ್ನಾಟಕ ರತ್ನ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ನಡೆದಾಡುವ ದೇವರಾಗಿದ್ದರು. ತ್ರಿವಿಧ ದಾಸೋಹಿಗಳು ಹಾಗೂ ಕಾಯಕ ಯೋಗಿಯಾಗಿದ್ದ ಸ್ವಾಮೀಜಿಯವರು ಯುಗಪುರುಷರಾಗಿದ್ದಾರೆ. ಅವರ ಆಶೀರ್ವಾದ ಸದಾ ನಮ್ಮ ನಿಮ್ಮೆಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಇದನ್ನೂ ಓದಿ: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ; ರಾಜೇಂದ್ರ ಚೋಳನ್ ಪರಿಶೀಲನೆ
ಈ ಸಂದರ್ಭದಲ್ಲಿಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾದ ಡಾ. ಮಂಜುನಾಥ್ ಗೌಡ, ಮಂಡಲದ ಅಧ್ಯಕ್ಷರಾದ ಡಾ. ನಾಗೇಂದ್ರ, ಮಾಜಿ ಕಾರ್ಪೊರೇಟರ್ ಗಳಾದ ಜಯರಾಮ್, ರಾಜೇಂದ್ರ ಕುಮಾರ್ ಮಹದೇವ್, ಶಿವಾನಂದಮೂರ್ತಿ, ಅವಿನ್ ಆರಾಧ್ಯ, ರಾಘವೇಂದ್ರ ಶೆಟ್ಟಿ, ಎನ್.ರಾಘವೇಂದ್ರ, ರೈಲ್ವೆ ನಾರಾಯಣ್, ಹೇಮಂತ್ ಮೊದಲಾದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಸ್ವಾಮೀಜಿಯ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.
