ಬೆಂಗಳೂರು: ಬೆಂಗಳೂರು ನಗರ ವಾಸಿಗಳೇ ಗಮನಿಸಿ, ಇನ್ಮುಂದೆ ಜಿಬಿಎ ಪೌರಕಾರ್ಮಿಕರಿಗೆ ನಿಮ್ಮ ಮನೆಯ ಕಸ ವಿಂಗಡಿಸಿ ಕೊಡದಿದ್ದರೆ ನಿಮಗೆ ಬೀಳಲಿದೆ ದಂಡ.
ಹೌದು, ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಇನ್ಮುಂದೆ ಘನತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ನಿಯಮಗಳು ಜಾರಿಯಾಗಲಿದ್ದು ನಾಳೆಯಿಂದ (ಏಪ್ರಿಲ್ 01) ರಿಂದ ಈ ಹೊಸ ನಿಯಮ ಜಾರಿಯಾಗಲಿದೆ ಎಂದು ತಿಳಿದು ಬಂದಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಇಡೀ ದೇಶದಾದ್ಯಂತ ಘನತ್ಯಾಜ್ಯ ನಿರ್ವಹಣೆಯಲ್ಲಿ ಏಕರೂಪದ ನಿಯಮಗಳಿರಬೇಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅದರಂತೆ ನಾಳೆಯಿಂದ ಬೆಂಗಳೂರು ನಗರದಲ್ಲೂ ಕೂಡ ಸುಪ್ರೀಂ ಆದೇಶ ಜನರು ಪಾಲಿಸಬೇಕಾಗಿದೆ.
ಸರಿಯಾಗಿ ಕಸ ವಿಂಗಡಣೆ ಮಾಡದೇ ನಿಯಮ ಉಲ್ಲಂಘಿಸಿದ್ರೆ ಮೊದಲ ಬಾರಿಗೆ 500 ರೂ., ಎರಡನೇ ಬಾರಿ ನಿಯಮ ಉಲ್ಲಂಘಿಸಿದ್ರೆ 1,000 ರೂ ವಿಧಿಸಲಾಗುವುದು. 4 ಮಾದರಿಯಲ್ಲಿ ಕಸ ವಿಂಗಡಣೆ ಮಾಡಿ ಆಟೋಗಳಿಗೆ ಕೊಡಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ: ಸಿಎಂ
ಪ್ರತಿ ಮನೆಯಿಂದಲೂ ಕೂಡ ಹಸಿ ಕಸ, ಒಣ ಕಸ, ಸ್ಥಳೀಯ ನೈರ್ಮಲ್ಯ ಕಸ, ವಿಶೇಷ ತ್ಯಾಜ್ಯ ಕಸ ವಿಂಗಡಿಸಿ ಕೊಡುವಂತೆ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ.
