Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕೆಬಿಜೆಎನ್‌ಎಲ್; ಮಾರ್ಚ್ ಅಂತ್ಯಕ್ಕೆ ಅನುದಾನ ಲೂಟಿಗೆ ಹುನ್ನಾರ
  • State
  • ಶಹಾಪುರ

ಕೆಬಿಜೆಎನ್‌ಎಲ್; ಮಾರ್ಚ್ ಅಂತ್ಯಕ್ಕೆ ಅನುದಾನ ಲೂಟಿಗೆ ಹುನ್ನಾರ

Praja Vahini March 27, 2026
Screenshot_2026-03-27-19-24-48-60_6012fa4d4ddec268fc5c7112cbb265e7
Spread the love

ಶಹಾಪುರ: ಕೃಷ್ಣ ಭಾಗ್ಯ ಜಲ ನಿಗಮ ಭೀಮರಾಯನಗುಡಿ ಲಿಮಿಟೆಡ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ದುರಸ್ಥಿಗಾಗಿ ಟೆಂಡರ್ ಕರೆದು ಇದೀಗ ಟೆಂಡರ್ ಸಮಯ ಮುಗಿಯುವ ಹಂತಕ್ಕೆ ಬಂದಿದ್ದು, ಎಲ್ಲಿಯೂ ಸಹ ಪೂರ್ಣ ಕಾಮಗಾರಿಗಳು ನಡೆದಿಲ್ಲಾ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿ ಮಾಡದೇ ಅನುದಾನ ಲೂಟಿ ಮಾಡುವ ಹುನ್ನಾರ ನಡೆಯುತ್ತಿದೆ ಈ ಬಗ್ಗೆ ಪರಿಶೀಲಿಸಬೇಕು ಎಂದು ನಮ್ಮ ಕರ್ನಾಟಕ ಸೇನೆಯ ಸಿದ್ದು ಪಟ್ಟೆದಾರ ಆಗ್ರಹಿಸಿದರು.
ಈ ಕುರಿತು ಕೃಷ್ಣ ಕಾಡಾ ಆಡತಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ವಿವಿಧ ದುರಸ್ತಿಗಾಗಿ ೨೦೨೫ ರ ನವೆಂಬರ್‌ನಲ್ಲಿ ಕೋಟ್ಯಾನುಗಟ್ಟಲೇ ಅನುದಾನದ ಪ್ಯಾಕೇಜ್ ಕಾಮಗಾರಿ ಟೆಂಡರ್ ಕರೆದಿದ್ದು, ಕೃಷ್ಣ ಕಾಡಾ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಪೂರ್ಣ ಅನುದಾನ ಲೂಟಿ ಮಾಡಲು ಹೊರಟಿದ್ದಾರೆ. ಗುತ್ತಿಗೆದಾರರು (ಲೋಕಲ್ ಲೀರ‍್ಸ್) ಸಹ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಅನುದಾನ ಲೂಟಿಗೆ ಹುನ್ನಾರಗಳು ಒಳಗೊಳಗೆ ನಡೆಯುತ್ತಿವೆ. ಇದೀಗ ಮಾರ್ಚ್ ಅಂತಿಮದ ತಿಂಗಳಲ್ಲಿ ಎಲ್ಲಾ ಕಾಮಗಾರಿಗಳ ಅನುದಾನವನ್ನು ಬೋಗಸ್ ಮಾಡಿ ಅನುದಾನ ಕಬಳಿಕೆಗೆ ಮುಂದಾಗಿದ್ದಾರೆ. ಇನ್ನೂ ಕಛೇರಿಯ ಕೇಲ ಅಧಿಕಾರಿಗಳ ಕುಮ್ಮಕ್ಕಿನಿಂದ ೩೦/೪೦ ಬೀಲವ್ ಟೆಂಡರ್ ಪಡೆದು ಅರ್ಧಂಭರ್ದ ಕಾಮಗಾರಿ ಮಾಡಿ ಪೂರ್ಣ ಹಣ ಒಡೆಯುತ್ತಿದ್ದಾರೆ. ಅಧಿಕಾರಿಗಳಿಗೆ ದೂರು ನೀಡಿದರೆ ಗುತ್ತಿಗೆದಾರರಿಗೆ ಸರಿಪಡಿಸಲು ಹೇಳಿದರೆ ಬೇರೆ ಜಿಲ್ಲೇಗಳಿಂದ ಮರಮ್, ಮರಳು ಬರುತ್ತಿದೆ ಬಂದಾಗ ಮಾಡುತ್ತೇವೆ ಎಂದು ಉಡಾಫೆ ಉತ್ತರ ನೀಡಿ ಜಾರಿಕೊಳ್ಳುತ್ತಾರೆ. ಕೂಡಲೇ ಇದಕ್ಕೆಲ್ಲಾ ಕಡಿವಾಣ ಹಾಕಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡಬೇಕು. ಮತ್ತು ಕಾಮಗಾರಿ ಪೂರ್ಣಗೊಂಡರೆ ಮಾತ್ರ ಅನುದಾನ ನೀಡಬೇಕು ಇಲ್ಲವಾದರೆ ಬಿಲ್ ತಡೆಹಿಡಿಯಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಮಾರ್ಚ್ ಅಂತ್ಯಕ್ಕೆ ಕಾಮಗಾರಿಗಳು ಮುಗಿಯದೇ ಬಿಲ್ ಪಡೆದಿರುವ ವಿಷಯ ತಿಳಿದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಂಬರೀಶ ದೋರನಹಳ್ಳಿ, ಶಶಿಪಾಲರೆಡ್ಡಿ ಪಾಟೀಲ್, ಸಕ್ಮೀರ ಕನ್ಯಾಕೊಳ್ಳೂರ, ಮಹಾದೇವ ದೇಸಾಯಿ, ಸದ್ಮ ಮಠ, ವಿನೋದ ಶಾರದಹಳ್ಳಿ, ಶರಣು ದೇವರಮನಿ, ರಫೀಕ್ ಮಲ್ಲಾ, ಅನಿಲ್ ಹದ್ನೂರ, ಮಲ್ಲುನಾಯಕ ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ಲೋಕಾ ದಾಳಿ; ಸರ್ಕಾರಿ ಅಧಿಕಾರಿ ಸಸ್ಪೆಂಡ್
Next: ಆಸಕ್ತಿ ಇದ್ದವರು ಕಾಸು ಕೊಟ್ಟು ಪಂದ್ಯ ನೋಡುವುದು ಉತ್ತಮ: ಡಿ.ಕೆ. ಸುರೇಶ್

Views:

232

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.