Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನಗರ ನಿರಾಶ್ರಿತರಿಗೆ ಶೀಘ್ರದಲ್ಲಿಯೇ 1000 ನಿವೇಶನಗಳು
  • Uncategorized

ನಗರ ನಿರಾಶ್ರಿತರಿಗೆ ಶೀಘ್ರದಲ್ಲಿಯೇ 1000 ನಿವೇಶನಗಳು

Praja Vahini March 25, 2026 1 minute read
Screenshot_2026-03-25-22-19-18-82_6012fa4d4ddec268fc5c7112cbb265e7
Spread the love

ನಗರ ನಿರಾಶ್ರಿತರಿಗೆ ಶೀಘ್ರದಲ್ಲಿಯೇ 1000 ನಿವೇಶನಗಳು

ಶಹಾಪುರ: ನಗರದಲ್ಲಿ ಯಾದಗಿರಿ ರಸ್ತೆಗೆ ಹೊಂದಿಕೊಂಡಿರುವ  ಸುಮಾರು 50 ಎಕರೆ ಜಮೀನು ರಾಜೀವ್‌ಗಾಂಧಿ ವಸತಿ ಯೋಜನೆಗಾಗಿ ಪಡೆಯಲು ಸರಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಜಮೀನು ಲಭ್ಯವಾದಲ್ಲಿ 1000 ನಿವೇಶನಗಳನ್ನು ಸಿದ್ದಗೊಳಿಸಿ ನಗರದ ನಿರಾಶ್ರಿತ ಕುಟುಂಬಗಳಿಗೆ ನೀಡಬಹುದಾಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ನಗರ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ, ಈ ಕುರಿತು ಜಿಲ್ಲಾಧಿಕಾರಿಗಳು ಸರಕಾರಕ್ಕೆ ಪತ್ರ ಬರೆದಿದ್ದು ಸಂಬಂಧಿಸಿದ ರೇಷ್ಮೆ ಇಲಾಖೆ ಸಚಿವರೊಂದಿಗೆ ಮಾತನಾಡಿದ್ದೇನೆಂದು ತಿಳಿಸಿದರು.

ಈಗಾಗಲೇ ನಗರದಲ್ಲಿನ ನಿರಾಶ್ರಿತ ಕುಟುಂಬಗಳು ನಿವೇಶನ ಕೋರಿ ಸುಮಾರು ೪೦೦೦ಅರ್ಜಿಗಳು ಬಂದಿದ್ದು,ಅದನ್ನು ನಗರಸಭೆ ಅಧಿಕಾರಿಗಳು ಹಾಗೂ ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ಜಂಟಿಯಾಗಿ ಪ್ರತಿ ಅರ್ಜಿದಾರರ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ೮೦೦ಕ್ಕೂ ಅಧಿಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು.ಕೆಲವರಿಗೆ ಈಗಾಗಲೇ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು ಇನ್ನೂ ಹಲವರಿಗೆ ಹಕ್ಕುಪತ್ರ ನೀಡಲಾಗಿದೆ ಎಂದರು.

ಕೊಳಚೆ ನಿರ್ಮೂಲನ ಮಂಡಳಿಯಲ್ಲಿನ 200 ಮನೆಗಳನ್ನು ಸರಕಾರದ ಹೊಸ ಮೀಸಲಾತಿಯನ್ವಯ  136  ಪಜಾತಿ,ಪಪಂ, 44 ಸಾಮಾನ್ಯ, 20 ಅಲ್ಪಸಂಖ್ಯಾತರಿಗೆ ಹಂಚಿಕೆ ಮಾಡಬೇಕಾಗಿದ್ದು ಪಟ್ಟಿ ಸಿದ್ದಪಡಿಸಲಾಗಿದೆ ಎಂದರು. 2021-22 ನೇ ಸಾಲಿನಲ್ಲಿ 774 ಮನೆ ನಿರ್ಮಾಣಕ್ಕಾಗಿ ರಾಜ್ಯ ಸರಕಾರದ ರೂ.1.70ಲಕ್ಷ ಬಿಡುಗಡೆಯಾಗಿದ್ದು ಕೇಂದ್ರ ಸರಕಾರದ ರೂ.1.50ಇನ್ನೂ ಬಿಡುಗಡೆಯಾಗಿಲ್ಲದ ಕಾರಣ ಇನ್ನೊಮ್ಮ ಪಟ್ಟಿ ಕಳುಹಿಸಲಾಗುವುದು. ಹತ್ತಿರದ ಕೃಷ್ಣ ಅಚ್ಚುಕಟ್ಟು ಪ್ರದೇಶದ ಕೆಂಚನಕವಿ ಗ್ರಾಮದಲ್ಲಿ ೯ಎಕರೆಯಲ್ಲಿ ನಿವೇಶನಗಳು ಹಾಗೂ ಹುಲಕಲ್ ಗ್ರಾಮದಲ್ಲಿ ೩೫೧ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರೇಡ್೨ ತಹಸೀಲ್ದಾರ್ ಪ್ರಸನ್ನ ಮೋಗೆಕರ್,ಪೌರಾಯುಕ್ತ ಜೀವನ್ ಕಟ್ಟಿಮನಿ,ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುಕರ್,ನಗರಸಭೆ ಎಇಇ ನಾನಾ ಸಾಹೇಬ್ ಮಡಿವಾಳಕರ್,ಪರಿಸರ ಅಭಿಯಂತರ ಹರೀಶ್ ಸಜ್ಜನ್‌ಶೆಟ್ಟಿ,ಭೀಗುಡಿ ಪುರಸಭೆ ಮುಖ್ಯಾಧಿಕಾರಿ ಮಹ್ಮದ್ ಯೂಸೂಫ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

About the Author

Praja Vahini

Editor

View All Posts

Spread the love

Post navigation

Previous: ಯಾರು ಎಷ್ಟೇ ಟೀಕೆ ಮಾಡಿದರೂ ಮಾವಿನ ಹಣ್ಣು ಬೇವಿನ ಹಣ್ಣಾಗಲು ಸಾಧ್ಯವಿಲ್ಲ: ಸಿಎಂ
Next: ಲೋಕಾ ದಾಳಿ; ಸರ್ಕಾರಿ ಅಧಿಕಾರಿ ಸಸ್ಪೆಂಡ್

Views:

94

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.