ಬೆಂಗಳೂರು: ವಿಧಾನಸಭೆ ಪಶ್ಚಿಮ ಪ್ರವೇಶ ದ್ವಾರ ಉದ್ಘಾಟನೆ ಹಾಗೂ 2026 ನೇ ಸಾಲಿನಲ್ಲಿ ಸದಸ್ಯತ್ವದ ಅವಧಿ ಪೂರ್ಣಗೊಳಿಸುತ್ತಿರುವ ಸದಸ್ಯರ ಜತೆ ಗ್ರೂಪ್ ಫೋಟೋ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದು (ಮಂಗಳವಾರ ಮಾರ್ಚ್ 24) ಪಾಲ್ಗೊಂಡರು.
ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ವಿಧಾನಸಭೆ ಸ್ಪೀಕರ್ ಯು ಟಿ ಖಾದರ್, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಎಚ್ ಕೆ ಪಾಟೀಲ್, ಜಿ ಪರಮೇಶ್ವರ, ಬೋಸರಾಜ್ ಮತ್ತಿತರರು ಉಪಸ್ಥಿತರಿದ್ದರು.
