ಬೆಂಗಳೂರು: ಎಂಬ್ರಾಯಿಡರಿ ತಂತ್ರಜ್ಞಾನ ವಲಯವು ಬೆಂಗಳೂರಿನಲ್ಲಿ ಮಹತ್ತರ ಹೆಜ್ಜೆ ಇರಿಸಿದ್ದು ಖ್ಯಾತ ನಟಿ ಪ್ರಣೀತಾ ಸುಭಾಷ್ ಅವರು 1500 ಆರ್.ಪಿ.ಎಂ.ವರೆಗಿನ ವೇಗ ತಲುಪುವ ಯಂತ್ರ ಬೈ ಎಚ್.ಎಸ್.ಡಬ್ಲ್ಯೂ.ವಿನ ಟರ್ಬೊ 1.5 ಬಿಡುಗಡೆ ಮಾಡಿದರು.
“ಎಂಬ್ರಾಯಿಡರಿಗೆ ತಂತ್ರಜ್ಞಾನವು ಲಭ್ಯವಾಗುವಂತೆ ಮಾಡಿದಾಗ ಜೀವನಗಳನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ” ಎಂದು ತಪನ್ ಕಪಾಡಿಯಾ ಹೇಳಿದರು. “ನಮ್ಮ ಯಂತ್ರಗಳನ್ನು ಸಣ್ಣದಾಗಿ ಪ್ರಾರಂಭಿಸಿ ನಂತರ ತಮ್ಮದೇ ಉದ್ಯಮಗಳನ್ನು ನಿರ್ಮಿಸುವ ಜನರಿಂದ ಬಳಸಲ್ಪಡುತ್ತವೆ. ಟರ್ಬೊ 1.5 ಅನ್ನು ಅವರು ಬೆಳೆಯಲು ಅಗತ್ಯವಾದ ವೇಗ ಮತ್ತು ದಕ್ಷತೆ ನೀಡಲು ನಿರ್ಮಿಸಲಾಗಿದೆ” ಎಂದರು.
ಟರ್ಬೊ 1.5 ನೊಂದಿಗೆ ಎಚ್.ಎಸ್.ಡಬ್ಲ್ಯೂ. ಎರಡು ಇತರೆ ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರಗಳನ್ನೂ ಈ ಹೊಸ ಶ್ರೇಣಿಯ ಭಾಗವಾಗಿ ಬಿಡುಗಡೆ ಮಾಡಿದೆ.
ಹಲವು ವರ್ಷಗಳಿಂದ ಎಚ್.ಎಸ್.ಡಬ್ಲ್ಯೂ.ಯಂತ್ರಗಳು ಸಾವಿರಾರು ಜನರಿಗೆ ಎಂಬ್ರಾಯಿಡರಿ ಉದ್ಯಮಗಳನ್ನು ಅವರೇ ಸ್ವಂತ ಪ್ರಾರಂಭಿಸಲು ನೆರವಾಗುತ್ತವೆ. ಈ ಉದ್ಯಮಿಗಳಲ್ಲಿ ಹಲವರು ಮಹಿಳೆಯರಾಗಿದ್ದು ಅವರು ಮನೆಯಿಂದ ಸಣ್ಣ ಎಂಬ್ರಾಯಿಡರಿ ಯೂನಿಟ್ ಗಳಿಂದ ಪ್ರಾರಂಭಿಸುತ್ತಾರೆ, ಅವರಲ್ಲಿ ಸ್ಥಿರವಾದ ಆದಾಯದ ಅವಕಾಶಗಳನ್ನು ನಿರೀಕ್ಷಿಸುವ ವಿಧವೆಯರು ಮತ್ತು ಒಂಟಿ ತಾಯಂದಿರು ಇದ್ದಾರೆ.
ಕಂಪನಿಯು ತನ್ನ ಗ್ರಾಹಕರಿಗೆ ಆನ್ಲೈನ್ ತರಬೇತಿ ಮತ್ತು ಸೇವಾ ನೆರವಿನೊಂದಿಗೆ ಬೆಂಬಲಿಸುತ್ತದೆ, ಇದರಿಂದ ಮೊದಲ ಸಲದ ಉದ್ಯಮಿಗಳು ತಾಂತ್ರಿಕ ಮಾರ್ಗದರ್ಶನಕ್ಕೆ ಪ್ರಯಾಣಿಸುವ ಅಗತ್ಯವಿಲ್ಲದೆ ಯಂತ್ರದ ಬಳಕೆ ಮತ್ತು ಉತ್ಪಾದನೆಯ ತಂತ್ರಗಳನ್ನು ಕಲಿಯಬಹುದು.
ಅಲ್ಟ್ರಾ ಮತ್ತು ನಿಯೊ ಮಾಡೆಲ್ ಗಳಿಗೆ ಟರ್ಬೊ 1.5 ಬಿಡುಗಡೆಯಿಂದ ಎಚ್.ಎಸ್.ಡಬ್ಲ್ಯೂ ಮೂರು ಹೊಸ ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರಗಳನ್ನು ತನ್ನ ಗಾರ್ಮೆಂಟ್ ಉದ್ಯಮಗಳ ಪೋರ್ಟ್ ಫೋಲಿಯೊಗೆ ಸೇರಿಸಿದೆ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ನಿರೀಕ್ಷಿಸುವ ಉದ್ದೇಶದ ಉದ್ಯಮಿಗಳಿಗೆ ತಂದಿದೆ.
ಎಚ್.ಎಸ್.ಡಬ್ಲ್ಯೂ. ಟರ್ಬೊ 1.5 ವಿಶೇಷತೆಗಳು:
10-ಇಂಚು ಟಚ್ ಸ್ಕ್ರೀನ್ ಕಂಪ್ಯೂಟರ್ ಸಿಸ್ಟಂ
12 ಸೂಜಿಯ ಕಾನ್ಫಿಗರೇಷನ್
ಗರಿಷ್ಠ ವೇಗ 1500 ಆರ್.ಪಿ.ಎಂ.
ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಥ್ರೆಡ್ ಟ್ರಿಮ್ಮರ್
ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಕಲರ್ ಚೇಂಜ್
ದೊಡ್ಡ ಎಂಬ್ರಾಯಿಡರಿ
5 ವರ್ಷಗಳ ವಾರೆಂಟಿ
ಟಿ-ಶರ್ಟ್ ಗಳು, ಬ್ಲೌಸ್ ಗಳು ಮತ್ತು ಲೆಹಂಗಾ ಕಲಿ ವರ್ಕ್ ಗೆ ಸೂಕ್ತ
