ಕೇರಳ: ಇತಿಹಾಸ ಪ್ರಸಿದ್ಧ ಪ್ರಯಾಗ್ರಾಜ್ ಕುಂಭಮೇಳದಲ್ಲಿ ತನ್ನ ಕಣ್ಣಿನ ಅಂದದಿಂದಲೇ ಇಡೀ ಪ್ರಪಂಚದಾದ್ಯಂತ ಸದ್ದು ಮಾಡಿದ ಸುಂದರಿ ಇದೀಗ ಇಲ್ಲದೆ ಮದುವೆಯಾಗಿದ್ದಾರೆ.
ಹೌದುಪ್ರಯಾಗ್ರಾಜ್ ಕುಂಭಮೇಳದಲ್ಲಿ ತನ್ನ ಕಣ್ಣಿನ ಅಂದದ ಮೂಲಕವೇ ಇಡಿ ಪ್ರಪಂಚದಾದ್ಯಂತ ಸದ್ದು ಮಾಡಿದ್ದ ಮೊನಾಲಿಸಾ ಭೋಸ್ಲೆ ಇದೀಗ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ತನ್ನ ಪ್ರಿಯಕರನ ಜೊತೆ ಕೇರಳದ ಪೊಲೀಸ್ ಠಾಣೆಯಲ್ಲಿ ಮದುವೆಯಾಗಿದ್ದಾರೆ. ಕೇರಳದ ನಯನಾರ್ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಈ ಜೋಡಿ ಮದುವೆಯಾಗಿದೆ.
ಇನ್ನು ಮೊನಾಲಿಸಾ ಮದುವೆಯಾಗಿರುವ ಹುಡುಗ ಅನ್ಯ ಜಾತಿಯಾಗಿರುವುದರಿಂದ ಅದರಲ್ಲೂ ಕೂಡ ಇಸ್ಲಾಮಿ ದರ್ಮಿಯ ಆಗಿರುವುದರಿಂದ ಮೊನಾಲಿಸಾ ತಮ್ಮ ಹಿಂದೂ ಜಾತಿಯನ್ನು ತೊರೆದು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸುದ್ದಿಯಾಗುತ್ತಿದೆ.
ಈ ಬಗ್ಗೆ ಮದುವೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊನಾಲಿಸಾ, “ನಾವು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದೇವೆ. ನಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿಲ್ಲ. ಹಾಗಾಗಿ ಇದು ಲವ್ ಜಿಹಾದ್ ಅಲ್ಲ,” ಎಂದು ಸ್ಪಷ್ಟಪಡಿಸಿದರು. ಮದುವೆ ವೇಳೆ ಹಣೆಯ ಮೇಲೆ ಸಿಂಧೂರ ಧರಿಸಿದ್ದ ಅವರು, “ಈ ಮದುವೆಗೆ ಮೊದಲು ಫರ್ಮಾನ್ ಒಪ್ಪಿರಲಿಲ್ಲ. ನಾನೇ ಒತ್ತಾಯ ಮಾಡಿ ಮದುವೆ ಆಗುವಂತೆ ಮಾಡಿದೆ,” ಎಂದು ಹೇಳಿದರು. ಇದ್ನನೂ ಓದಿ: ಬಳ್ಳಾರಿ ಜನತೆಗೆ ಸಿಹಿ ಸುದ್ದಿ ನೀಡಿದ ಸಚಿವ ಎಂ ಬಿ ಪಾಟೀಲ್
ಈ ವೇಳೆ ಫರ್ಮಾನ್ ಖಾನ್ ಮಾತನಾಡಿ, “ನಾವಿಬ್ಬರೂ ಕಲಾವಿದರು. ಎಲ್ಲಾ ಧರ್ಮಗಳನ್ನೂ ಗೌರವಿಸುತ್ತೇವೆ. ಪ್ರೀತಿಯಲ್ಲಿ ಧರ್ಮ ಬದಲಾಯಿಸುವ ಅಗತ್ಯವಿಲ್ಲ,” ಎಂದು ಹೇಳಿದರು.
ಮೊನಾಲಿಸಾ ಅವರು ಕೇರಳದಲ್ಲಿ ಚಿತ್ರೀಕರಣಕ್ಕಾಗಿ ಇದ್ದ ವೇಳೆ ಭದ್ರತೆ ಕೋರಿ ತಿರುವನಂತಪುರಂ ಪೊಲೀಸರನ್ನು ಸಂಪರ್ಕಿಸಿದ್ದರು. ತಮ್ಮ ತಂದೆ ಬಲವಂತವಾಗಿ ಊರಿಗೆ ಕರೆದೊಯ್ದು ಸೋದರ ಸಂಬಂಧಿಯೊಂದಿಗೆ ಮದುವೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.
