ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮಾಧ್ಯಮಗಳಲ್ಲಿ ಹೆಣ್ಣು ಮಕ್ಕಳಿಗೆ ಅಶ್ಲೀಲ ಕಾಮೆಂಟ್ಸ್ ಹಾಕುವುದು ಮತ್ತು ಅಶ್ಲೀಲ ಫೋಟೋಗಳನ್ನು ಎಡಿಟ್ ಮಾಡಿ ಹಂಚಿಕೊಳ್ಳುವುದು ಹೆಚ್ಚಾಗಿ ಕಂಡುಬರುತ್ತಿದ್ದು, ಇದರಿಂದ ಹೆಣ್ಣು ಮಕ್ಕಳು ಅದರಲ್ಲೂ ಕೂಡ ಸೆಲೆಬ್ರಿಟಿಗಳು ಹೆಚ್ಚಾಗಿ ಕಿರುಕುಳ ಅನುಭವಿಸುತ್ತಿದ್ದಾರೆ.
ಹೌದು, ಸಾಮಾಜಿಕ ಮಾಧ್ಯಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದ ಲಾವಣ್ಯಾ ತ್ರಿಪಾಠಿ ಅವರಿಗೆ ಆನ್ಲೈನ್ ನಲ್ಲಿ ಅಶ್ಲೀಲ ಕಾಮೆಂಟ್ಸ್ ಹಾಗೂ ಅಶ್ಲೀಲ ಚಿತ್ರಗಳನ್ನು ಎಡಿಟ್ ಮಾಡಿ ನನಗೆ ಕಳಿಸುತ್ತಿದ್ದಾರೆ ಎಂದು ಇದೀಗ ದೂರು ನೀಡಿದ್ದಾರೆ.
ಲಾವಣ್ಯಾ ತ್ರಿಪಾಠಿ ಅವರನ್ನು ಹಾಗೂ ಅವರ ಕುಟುಂಬದವರನ್ನು ಗುರಿ ಮಾಡಿಕೊಂಡು ಆನ್ಲೈನ್ನಲ್ಲಿ ಕೆಲ ವ್ಯಕ್ತಿಗಳು ತೀವ್ರ ನಿಂದನೆ, ಅಶ್ಲೀಲ ಕಮೆಂಟ್ಗಳು, ಫೋಟೊ ತಿದ್ದಿ ಹಂಚಿಕೊಳ್ಳುವ ಕಾರ್ಯಗಳನ್ನು ಮಾಡುತ್ತಿದ್ದಾರಂತೆ. ಈ ಆನ್ಲೈನ್ ದೌರ್ಜನ್ಯ, ಹಿಂಸೆಯ ವಿರುದ್ಧ ದನಿ ಎತ್ತಿರುವ ನಟಿ ಲಾವಣ್ಯಾ, ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಹೈದರಾಬಾದ್ನ ಸೈಬರ್ ಪೊಲೀಸರಿಗೆ ನಟಿ ಲಾವಣ್ಯಾ ತ್ರಿಪಾಠಿ ದೂರು ನೀಡಿದ್ದು, ಕಿರುಕುಳ ನೀಡುತ್ತಿರುವವರ ಖಾತೆಯ ಮಾಹಿತಿಯನ್ನು ಸಹ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡ ಅಂದ್ರೆ ನನಗೆ ಬಹಳ ಪ್ರೀತಿ: ಜೂನಿಯರ್ NTR
ಪರ್ಪಲ್ ಕ್ರೆಯಾನ್ (purple crayon00) ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ತಮಗೆ ಸತತ ಕಿರುಕುಳ ನೀಡಲಾಗುತ್ತಿದೆ ಎಂದು ನಟಿ ಲಾವಣ್ಯಾ ತ್ರಿಪಾಠಿ ಹೇಳಿದ್ದಾರೆ. ಈ ಖಾತೆಯು ತಮ್ಮ ವಿರುದ್ಧ ಕೀಳು ಮಟ್ಟದ ಹೇಳಿಕೆಗಳು, ಫೋಟೊಗಳನ್ನು ಹಂಚಿಕೊಳ್ಳುತ್ತಿರುವ ಜೊತೆಗೆ ತಮ್ಮ ಕುಟುಂಬದವರ ಜೊತೆಗೆ ಸಹ ಆಕ್ಷೇಪಾರ್ಹ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದಿದ್ದಾರೆ ನಟಿ. ಕಳೆದ ಕೆಲ ತಿಂಗಳುಗಳಿಂದಲೂ ಪರ್ಪಲ್ ಕ್ರೆಯಾನ್ ಖಾತೆಯಿಂದ ನಟಿಗೆ ಸಂದೇಶಗಳು, ನಟಿಯ ಪೋಸ್ಟ್ಗಳಿಗೆ ಕಮೆಂಟ್ಗಳನ್ನು ಮಾಡಲಾಗುತ್ತಿದೆಯಂತೆ.
