Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಇಫ್ತಿಯಾರ್ ಕೂಟ ಭಾವೈಕ್ಯದ ಸಂಕೇತ
  • State
  • ಶಹಾಪುರ

ಇಫ್ತಿಯಾರ್ ಕೂಟ ಭಾವೈಕ್ಯದ ಸಂಕೇತ

Praja Vahini March 1, 2026
Screenshot_2026-03-01-21-49-05-33_6012fa4d4ddec268fc5c7112cbb265e7
Spread the love

ಶಹಾಪುರ: ರಂಜಾನ್ ತಿಂಗಳು ಮನಸ್ಸು, ವ್ಯಕ್ತಿತ್ವ, ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತದೆ. ದೀನದಲಿತರಿಗೆ, ಅನಾಥರಿಗೆ, ನಿರ್ಗತಿಕರಿಗೆ ಮುಂತಾದವರ ಬದುಕಿಗೆ ಸ್ಪಂದಿಸುವಂತೆ, ನೆರವು ನೀಡುವಂತೆ ತಿಳಿಸಿಕೊಡುತ್ತದೆ. ಸದ್ಯ ಪವಿತ್ರ ರಂಜಾನ್ ಮಾಸ ನಡೆಯುತ್ತಿದ್ದು, ಸಮಸ್ತ ಲೋಕ ಕಲ್ಯಾಣವೇ ರಂಜಾನ್ ಹಬ್ಬದ ಸಂದೇಶವಾಗಿದೆ ಎಂದು ರಾಜಕೀಯ ಚಾಣಕ್ಯರು, ಹಿರಿಯ ಕಾಂಗ್ರೆಸ್ ಮುಖಂಡ ಅಂಬ್ರೇಶಗೌಡ ದರ್ಶನಾಪುರ ಅಭಿಪ್ರಾಯಪಟ್ಟರು.

ನಗರದ ಆಸಾರ ಮಹೋಲ್ಲಾ, ಆಶಾರ್ ಮಸೀದಿನಲ್ಲಿ ರಂಜಾನ್ ಮಾಸದ ನಿಮಿತ್ಯ ಹಮ್ಮಿಕೊಂಡ ಇಫ್ತಿಯಾರ್ ಕೂಟದ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು, ಧರ್ಮದ ಪರಿಧಿಯನ್ನು ಮೀರುವ, ಸಾಂಸ್ಕೃತಿಕ ಮತ್ತು ಮಾನವೀಯ ನೆಲೆಯಲ್ಲಿ ಕಾಣುವ, ಹೃದಯಗಳ ಪರಿಭಾಷೆಯಾಗುವ ಇಫ್ತಿಯಾರ್ ಕೂಟವು ಪರಸ್ಪರರಲ್ಲಿ ಸೌಹಾರ್ದತೆ ಬೆಳೆಸುತ್ತದೆ. ಭಾವನಾತ್ಮಕ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಎಂದು ತಿಳಿಸಿದರು.

ಸಲೀಂ ಸಂಗ್ರಾಮ್ ಅವರು ಇಫ್ತಿಯಾರ್ ಕೂಟ ಏರ್ಪಡಿಸುವುದರ ಮೂಲಕ ಧಾರ್ಮಿಕ ಸಾಮರಸ್ಯಕ್ಕೆ ನಾಂದಿಹಾಡಿದ್ದಾರೆ. ಇಂತಹ ಮಾನವೀಯ ಕಾರ್ಯಗಳು ಇಂದು ತುಂಬಾ ಅಗತ್ಯವಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಬಾಪುಗೌಡ ದರ್ಶನಾಪುರ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಮಾಹಂತ ಚಂದಾಪುರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಆರಬೋಳ, ಡಾ. ಬಸವರಾಜ ಇಜೇರಿ, ಗುಂಡಪ್ಪ ತುಂಬಿಗಿ, ಮಹಾದೇವಪ್ಪ ಸಾಲಿಮನಿ, ಮಲ್ಲಣ್ಣ ಮಡ್ಡಿ, ಅಲ್ಲಾ ಪಟೇಲ್ ಮಕ್ತಾಪುರ, ಎಸ್.ಎನ್ ಖಾದ್ರಿ, ಅನ್ಸರ್ ಪಟೇಲ್, ಕದಿರಸಾಬ್ ಸಂಗ್ರಾಮ, ಪಾಶ ಪಟೇಲ್, ಮುಸ್ತಫ ಸೇಟ್, ಅಡಿವೆಪ್ಪ ಜಾಕಾ, ಇಬ್ರಾಹಿಂ ಶಿರವಾಳ, ಶಾಂತು ಪಾಟೀಲ್, ಬಾಶಸಾಬ ಶಿರವಾಳ, ಮಹ್ಮದ್ ನಿಜಾಮ, ಅಮನ್ ಸಾಬ್, ಹಾಜಿ ಸಾಬ್, ಮಹ್ಮದ್ ಹುಸೇನಿ, ಕಲೀಮುಲ್ಲಾ ಹುಸೇನಿ, ಇಸ್ಮಾ ಹುಸೇನಿ, ಸೇರಿದಂತೆ ಬಡಾವಣೆಯ ಮುಸ್ಲಿಂ ಬಾಂಧವರಿಗೆ ಹಣ್ಣು ಹಂಪಲು, ಶರಬತ್ ನೀಡುವ ಮೂಲಕ ಪರಸ್ಪರ ಖುಷಿ ಹಂಚಿಕೊಂಡರು.

About the Author

Praja Vahini

Editor

View All Posts

Spread the love

Post navigation

Previous: ದುಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ಸರ್ಕಾರ ಕೂಡಲೆ ವಾಪಸ್ ಕರೆತರುವ ಕೆಲಸ ಮಾಡಬೇಕು: ಬೊಮ್ಮಾಯಿ
Next: ಇಂಟರ್ನೆಟ್‌ನಲ್ಲಿ ಧೂಳ್ ಎಬ್ಬಿಸುತ್ತಿದೆ ಟಾಕ್ಸಿಕ್ ಸಿನಿಮಾದ ಮೊದಲ ಸಾಂಗ್

Views:

105

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.