Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ವಿಕ್ಟೋರಿಯಾದ ಟ್ರಾಮಾ ಕೇರ್‌ ಸೆಂಟರ್‌ನಲ್ಲಿ ಅಂಗಾಂಗ ಕಸಿ ಯಶಸ್ವಿ
  • Bangalore
  • State
  • Uncategorized

ವಿಕ್ಟೋರಿಯಾದ ಟ್ರಾಮಾ ಕೇರ್‌ ಸೆಂಟರ್‌ನಲ್ಲಿ ಅಂಗಾಂಗ ಕಸಿ ಯಶಸ್ವಿ

Praja Vahini February 25, 2026
15cbb38f-5817-4eea-adb8-6a08588bd23e
Spread the love

ಬೆಂಗಳೂರು: ದಾನಗಳಲ್ಲಿ ಶ್ರೇಷ್ಠ ದಾನ ಅಂಗಾಂಗ ದಾನ ಎನ್ನುತ್ತಾರೆ. ಸಾವಿನಲ್ಲೂ ಸಾರ್ಥಕತೆ ಮೆರೆಯುವುದು ನಿಜಕ್ಕೂ ಸ್ಮರಣೀಯ. ಇಂಥ ಕಾರ್ಯವನ್ನು ಮಾಡುವಲ್ಲಿ ಮಂಡ್ಯದ ಕಸಬಾ ಹೋಬಳಿಯ ಚಿಕ್ಕ ಮಂಡ್ಯ ಗ್ರಾಮದ ಕುಟುಂಬ ಸದಸ್ಯರು ಧೈರ್ಯ ತೋರಿ, ಕೆಲವರ ಬಾಳಿಗೆ ಬೆಳಕು ತುಂಬಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್‌ ಸೆಂಟರ್‌ನಲ್ಲಿ ನಡೆದ ಅಂಗಾಂಗ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದೆ. ಜನರಿಗೆ ಕೈಗೆಟಕುವ ದರದಲ್ಲಿ ಈ ಸೇವೆಯನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ ಒದಗಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಮೆಡಿಕಲ್‌ ಸೂಪರಿಟೆಂಡರ್‌ ಡಾ. ದೀಪಕ್‌ ಮತ್ತು ಟ್ರಾಮಾ ಎಮರ್ಜೆನ್ಸಿ ಕೇರ್‌ ಸೆಂಟರ್ ನ ವಿಶೇಷ ಅಧಿಕಾರಿ ಡಾ. ಅಸೀಮ ಬಾನು, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಟ್ರಾಮ ಕೇರ್‌ ಸೆಂಟರ್‌ ಹಾಗೂ ಜೀವಸಾರ್ಥಕತೆ ತಂಡದ ಸದಸ್ಯರ ಸೇವೆ ಸ್ಮರಣೀಯ ಎಂದರು.

ನೋವಿನ ಸಮಯದಲ್ಲೂ ಸಮಾಜ ಸೇವೆ ಹಾಗೂ ಮತ್ತೊಬ್ಬರ ಬಾಳಿಗೆ ಬೆಳಗಾಗುವ ರೀತಿಯ ನಿರ್ಧಾರ ಕೈಗೊಂಡ ಕುಟುಂಬ ಸದಸ್ಯರಿಗೆ ಧನ್ಯವಾದಗಳು ಎಂದು ಡಾ. ದೀಪಕ್‌ ತಿಳಿಸಿದ್ದಾರೆ.

ಚಿಕ್ಕಮಂಡ್ಯ ಗ್ರಾಮದ ದರ್ಶನ್‌ ಎಂಬ ಯುವಕ ಕಳೆದ ಫೆಬ್ರವರಿ 22 ರಂದು ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ. ಆದರೆ ಆತುರದಲ್ಲಿ ಮನೆಗೆ ಬಂದು ರಾತ್ರಿ ಮಲಗಿದ್ದ. ಆದರೆ ಆತನ ತಲೆಗೆ ಭಾರಿ ಪೆಟ್ಟಾಗಿರುವುದು ಕಂಡು ಆಸ್ಪತ್ರೆಗೆ ಸೇರಿಸಿದರು. ಆಗ ತಲೆಯೊಳಗೆ ರಕ್ತಸ್ರಾವವಾಗಿರುವುದು ಪತ್ತೆಯಾಯಿತು.

ಕೂಡಲೇ ಆತನನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್‌ ಸೆಂಟರ್‌ಗೆ ಕರೆದುಕೊಂಡು ಬರಲಾಯಿತು. ಹಲವಾರು ಪರೀಕ್ಷೆಗಳಿಗೆ ಒಳಪಡಿಸಿದರೂ ಆತ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಎರಡು ದಿನಗಳ ನಂತರ ಪರೀಕ್ಷೆ ನಡೆಸಿದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ. ಕಾವ್ಯಾ, ಡಾ. ದೀಪಕ್‌, ಡಾ. ಆಸೀಮಾ ಬಾನು ಉನ್ನತ ವೈದ್ಯರ ತಂಡ “ಬ್ರೇನ್‌ ಡೆಡ್‌” ಎಂದು ಘೋಷಿಸಿತು.

ನಂತರ ಜೀವ ಸಾರ್ಥಕತೆ ಎಂಬ ತಂಡ, ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ ನಂತರ, ದಿನೇಶ್‌ ಅಂಗಾಂಗ ದಾನ ಮಾಡಲು ಸಮ್ಮತಿಸಿ ಸಾರ್ಥಕತೆ ಮೆರೆದರು.

ದಿನೇಶ್‌ ಅವರ ಯಕೃತ್ತು, ಮೂತ್ರಪಿಂಡ, ಹೃದಯ ನಾಳಗಳು, ಇತರೆ ಅಂಗ ಪಡೆದು ಅರ್ಹರಿಗೆ ಅಳವಡಿಸಲಾಗಿದೆ. ದಿನೇಶ್‌ ಕುಟುಂಬ ಸದಸ್ಯರ ಈ ನಿರ್ಧಾರವನ್ನು ಆಸ್ಪತ್ರೆಯ ವೈದ್ಯರು ಶ್ಲಾಘಿಸಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ನೂತನ ಬಿ.ಆರ್.ಅಂಬೇಡ್ಕರ್ ಭವನ‌ ಉದ್ಘಾಟನೆ
Next: ಡಿಸಿಎಂ ಡಿಕೆ ಶಿವಕುಮಾರ್ ಅವರಿಂದಲೇ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅಚ್ಚರಿ ಹೇಳಿಕೆ!

Views:

41

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.