ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಮಾರ್ಚ್ ಮೊದಲನೇ ವಾರದಲ್ಲಿ ಅಧಿವೇಶನ ಮತ್ತು ಬಜೆಟ್ ಘೋಷಣೆ ಕುರಿತು ಈಗಾಗಲೇ ಎಲ್ಲ ರೀತಿ ತಯಾರಿ ಮಾಡಿಕೊಂಡಿದ್ದು, ಇದೀಗ ರಾಜ್ಯ ಸರ್ಕಾರದ ವಿರುದ್ಧ ಅಧಿವೇಶನದಲ್ಲಿ ಯಾವ ರೀತಿ ಕಟ್ಟಿ ಹಾಕಬೇಕು ಎಂಬುದರ ಕುರಿತು ಬಿಜೆಪಿಯು ತಯಾರಿ ನಡೆಸಿಕೊಳ್ಳುತ್ತಿದೆ.
ಬಜೆಟ್ ಅಧಿವೇಶನ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗುತ್ತಿದೆ ಇದರ ಬಗ್ಗೆ ನಾನು, ಆರ್ ಅಶೋಕ್ ಅವರು ಸದನ ಹೇಗೆ ಮುನ್ನಡೆಸಬೇಕು ಅಂತ ಚರ್ಚೆ ಮಾಡುತ್ತೇವೆ ತದನಂತರ ಎಲ್ಲಾ ವಿಚಾರಗಳನ್ನು ಪ್ರಮುಖರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದೇವೆ ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಶಾಸಕ ಚಂದ್ರು ಲಮಾಣಿ ಬಂಧನ ವಿಚಾರ
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಂಜಾರ ಸಮಾಜವನ್ನೇ ಟಾರ್ಗೆಟ್ ಮಾಡುತಗತಿರುವುದು ಎಲ್ಲರಿಗು ಗೊತ್ತಿರುವ ವಿಚಾರ. ಬಂಜಾರ ಸಮಾಜ ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿರುವುದೇ ಕಾಂಗ್ರೆಸ್ ಗೆ ಸಹಿಸಲು ಅಸಾದ್ಯವಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ಬಂಜಾರ ಸಮಾಜಕ್ಕೆ ಅನ್ಯಾಯವೂ ಆಗಿದೆ, ನಿರ್ಲಕ್ಷ್ಯ ಮಾಡಿದ್ದಾರೆ.
ಡಿಸಿಎಂ ಅವರು ಬಂಜಾರ ಕಾರ್ಯಕ್ರಮ ಕ್ಕೆ ಬಂದಾಗ ಸಹಜವಾಗಿ ಡಿಸಿಎಂಗೆ ಆ ಸಮಾಜದ ಯುವಕರು ಘೇರಾವ್ ಹಾಕಿ ಪ್ರತಿಭಟನೆ ಮಾಡಿದ್ರು. ಇದನ್ನು ಸಹಿಸಿದ ಡಿಸಿಎಂ ಓಡಿ ಹೋಗುವುದರ ಜೊತೆಗೆ ಘೋಷಣೆ ಕೂಗಿದದ ಯುವಕರ ಮೇಲೆ FIR ಹಾಕಿದ್ದಾರೆ. ಹಾಗಾಗಿ ಆ ಸಮಾಜದ ಮೇಲೆ ಕಾಂಗ್ರೆಸ್ ಈಗ ಟಾರ್ಗೆಟ್ ಮಾಡಿದೆ ನಮ್ಮ ಶಾಸಕರಾದ ಚಂದ್ರು ಲಮಾಣಿ ಶಾಸಕರಿದ್ದಾರೆ, ಅವರು ಕೋರ್ಟಲ್ಲಿ ವಿಚಾರಣೆ ಎದುರಿಸುತ್ತಾರೆ. ಈಗಾಗಲೇ ಅನೇಕ ಆಡಿಯೋ ಲೀಕ್ ಆಗಿದೆ. ಅದರ ಸತ್ಯಾಸತ್ಯತೆ ಹೊರಬರಬೇಕಿದೆ.
ಸಚಿವ ಪ್ರಿಯಾಂಕ್ ಖರ್ಗೆ ಸಿಎಂ, ಡಿಸಿಎಂ ಭ್ರಷ್ಟಾಚಾರ ಬಗ್ಗೆ ಮಾತಾಡೋ ಯೋಗ್ಯತೆ ಇದೆಯಾ.? ಸರ್ಕಾರ ಬಂದ ಕೂಡಲೇ ವಾಲ್ಮೀಕಿ ಹಗರಣ, ಮೂಡಾ ಹಗರಣ ನಡೆದಿದೆ. ಇದನ್ನೂ ಓದಿ: ಸ್ನೇಹಮಯಿ ಕೃಷ್ಣಗೆ ಎದುರಾಗ್ತಿದೆ ಸಂಕಷ್ಟದ ಮೇಲೆ ಸಂಕಷ್ಟ!
ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಸಿಕೊಂಡಿಲ್ಲವಾ.? ಪ್ರಿಯಾಂಕ್ ಖರ್ಗೆ ನಮಗೆ ಭ್ರಷ್ಟಾಚಾರದ ಬಗ್ಗೆ ಹೇಳ್ತಾರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ತರ ಆಗಿದೆ.ಭ್ರಷ್ಟಾಚಾರಕ್ಕೆ ಜಾತಿ ಲೇಪನ ಹಾಕಲ್ಲ. ಸತ್ಯಾಸತ್ಯತೆ ಹೊರಗೆ ಬರಲಿ, ತನಿಖೆ ಆಗಲಿ ಅಂತ ಹೇಳಿದರು.
ಇನ್ನು ಸಿದ್ದರಾಮಯ್ಯ ಅವರಿಗೆ ಬಿಜೆಪಿ ಮೇಲೆ ಸಿಟ್ಟು ಇಲ್ಲ. ಆದ್ರೆ ಅವರ ಕೋಪ ಅವರ ಪಕ್ಷದಲ್ಲಿ ಇರುವವರ ಮೇಲೆ ಅಂತ ಹೇಳಿದರು.
