Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಶಿಕ್ಷಕನ ಬೇಜವಾಬ್ದಾರಿಗೆ ಮಸಣ ಸೇರಿದ ಇಬ್ಬರು ಬಾಲಕರು
  • Crime
  • State
  • ಶಹಾಪುರ

ಶಿಕ್ಷಕನ ಬೇಜವಾಬ್ದಾರಿಗೆ ಮಸಣ ಸೇರಿದ ಇಬ್ಬರು ಬಾಲಕರು

Praja Vahini February 22, 2026 1 minute read
Screenshot_2026-02-22-20-42-49-91_6012fa4d4ddec268fc5c7112cbb265e7
Spread the love

ಭೀಕರ ಅಪಘಾತಕ್ಕೆ ಇಬ್ಬರು ಬಾಲಕರು ಸಾವು / ಓರ್ವನ ಸ್ಥೀತಿ ಗಂಭೀರ, ಅಪಘಾತದ ರಭಸಕ್ಕೆ ಬಾಲಕನ ದೇಹವೆ ಛಿದ್ರ/ ಚಾಲಕ ಪರಾರಿ

ಶಹಾಪುರ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತದಿಂದ ಇಬ್ಬರು ಬಾಲಕರು ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ದೋರನಹಳ್ಳಿ ಗ್ರಾಮದ ಬಳಿ ನಡೆದಿದೆ. ಅಪಘಾತದ ರಭಸಕ್ಕೆ ದೇಹಗಳೇ ಛಿದ್ರ-ಛಿದ್ರವಾಗಿದ್ದು ಮೃತ ಬಾಲಕರು ಶಹಾಪುರಿನ ಜೀವ್ಹೇಶ್ವರ ಶಾಲೆಯ ವಿದ್ಯಾರ್ಥಿಗಳೆಂದು ಪೊಲೀಸರು ತಿಳಿಸಿದ್ದಾರೆ. ಬೈಕ್‌ಗೆ ಗುದ್ದಿ ವಾಹನ ಮತ್ತು ಚಾಲಕ ಇಬ್ಬರು ಪರಾರಿಯಾಗಿದ್ದಾರೆ.
ಇಂದಿರಾನಗರ ಮೂಲದ ಈಶ್ವರ ತಂದೆ ಸವರಿನಾಥ (೧೭), ಕಕ್ಕಸಗೇರ ಮೂಲಕ ಕನಕಣ್ಣ ತಂದೆ ರಂಗಣ್ಣ ದೊರೆ(೧೬) ಇಬ್ಬರು ಮೃತ ದುರ್ದೈವಿಗಳಾಗಿದ್ದಾರೆ. ಇನ್ನೊರ್ವ ಬಾಲಕ ಮಹೇಶ ತಂದೆ ಬಸಣ್ಣಗೌಡ ಎನ್ನುವವನಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೂವರು ಬಾಲಕರು ಶಾಲೆಯ ಶಿಕ್ಷಕನ ಕೆಎ೪೮ ಇಇ ೪೭೮೬ ಮೋಟರ್ ಸೈಕಲ್ ತೆಗೆದುಕೊಂಡು ಯಾದಗಿರಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ
ಮೂವರು ಬಾಲಕರಲ್ಲಿ ಓರ್ವ ಬಾಲಕನ ಟಿ.ಸಿ (ಶಾಲೆ ಪ್ರಮಾಣಪತ್ರ) ಜಿವ್ಹೇಶ್ವರ ಶಾಲೆಯಲ್ಲಿದೆ. ಇನ್ನುಳಿದ ಇಬ್ಬರ ಬಾಲಕರ ಟಿ.ಸಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲಿದ್ದು ಟಿಸಿ ಇರದೇ ವಿದ್ಯಾಭ್ಯಾಸ ಮಾಡುತ್ತಿದ್ದರು. ಹೀಗಿರುವಾಗ  ವಿದ್ಯಾರ್ಥಿಗಳು ಜೀವ್ಹೇಶ್ವರ ಶಾಲೆಯ ಶಿಕ್ಷಕ ಮಲ್ಲಪ್ಪ ಸಲಾದಪುರ ಎನ್ನುವವರು ಯಾದಗಿರಿಯಲ್ಲಿ ಹೊಸ ಶಾಲೆಯನ್ನು ತೆಗೆದಿದ್ದು ಮಕ್ಕಳನ್ನು ಕರೆದುಕೊಂಡು ಹೋಗಿದ್ದ, ಬಳಿಕ ಮಕ್ಕಳನ್ನು ತನ್ನ ಬೈಕ್ ಕೊಟ್ಟು ಶಹಾಪುರಕ್ಕೆ ಹೋಗಲು ಹೇಳಿದ್ದು ಬರುವಾಗ ದೋರನಹಳ್ಳಿ ಬಳಿ ದುರ್ಘಟನೆ ನಡೆದಿದೆ. ಕೇಲ ಮಾಹಿತಿಯ ಪ್ರಕಾರ ಶಾಲೆಯ ಪರವಾನಗಿ ಇಲ್ಲ ಎಂದು ತಿಳಿದು ಬಂದಿದೆ.
ಹೆಚ್ಚಾಗುತ್ತಿರುವ ಅಪಘಾತ ಪ್ರಕರಣ;
ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆ ಹಾಗೂ ವಾಹನ ದಟ್ಟಣೆಯಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿ ವರ್ಷ ಸರಾಸರಿ ೫೦ ಕ್ಕೂ ಹೆಚ್ಚು ಜನ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಅಪಘಾತಕ್ಕೀಡಾದ ಅನೇಕರು ಶಾಶ್ವತವಾಗಿ ವಿಶೇಷ ಚೇತನರಾಗಿದ್ದಾರೆ ಎಂಬುವುದೇ ದುರಂತ. ರಾತ್ರಿ ೭ ಆದರೆ ಸಾಕು ದೈತ್ಯಾಕಾರದ ಮರಳು ತುಂಬಿದ ಬೃಹತ್ ಟಿಪ್ಪರ್‌ಗಳ ಸದ್ದೇ ಇರಲಿದ್ದು, ನಿದ್ದೆ ಮಂಪರಿನಲ್ಲಿ ಬಂದು ಜೀವ ತೆಗೆಯುತ್ತಿದ್ದು, ಇದಕ್ಕೆ ಪೊಲೀಸ್ ಇಲಾಖೆಯೆ ಕಾವಲಾಗಿ ನಿಂತಿರುವುದು ನಾಚಿಕೇಗೇಡು ಸಂಗತಿ.
ಶಿಕ್ಷಕನ ಬೇಜವಾಬ್ದಾರಿಯಿಂದಲೇ ಅಪಘಾತ ಸಂಭವಿಸಿದೆ
ಭೀಕರ ಅಪಘಾತದ ಪರಿಣಾಮ ಇಬ್ಬರು ಬಾಲಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಶಿಕ್ಷಕ ಮಲ್ಲಪ್ಪನ ಬೇಜಾವ್ದಾರಿಯಿಂದಲೇ ನಮ್ಮ ಮಕ್ಕಳನ್ನು ನಾವು ಕಳೆದುಕೊಂಡಿದ್ದು, ಪೊಲೀಸ್ ಇಲಾಖೆಯವರು ಕಟ್ಟುನಿಟ್ಟಾಗಿ ಶಿಸ್ತುಕ್ರಮ ಜರುಗಿಸಿ ಮೃತ ಬಾಲಕರ ಸಾವಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮೃತ ಬಾಲಕರ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಸೂಕ್ತ ತನಿಖೆಗೆ ಆಗ್ರಹ
ದೋರನಹಳ್ಳಿ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದು, ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು
ಶಶಿಧರ ಕೋಸಂಬೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಹುಳಿಮಾವು ಶ್ರೀ ಸತ್ಯನಾರಾಯಣ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ
Next: ಸ್ನೇಹಮಯಿ ಕೃಷ್ಣಗೆ ಎದುರಾಗ್ತಿದೆ ಸಂಕಷ್ಟದ ಮೇಲೆ ಸಂಕಷ್ಟ!

Views:

1481

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.