Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಓದಿದ ಶಾಲೆಯಲ್ಲೇ ಸನ್ಮಾನಿತನಾಗಿದ್ದು ಧನ್ಯತೆಯ ಕ್ಷಣ: ಕೆ.ವಿ.ಪ್ರಭಾಕರ್
  • Politics
  • State
  • ಕೋಲಾರ

ಓದಿದ ಶಾಲೆಯಲ್ಲೇ ಸನ್ಮಾನಿತನಾಗಿದ್ದು ಧನ್ಯತೆಯ ಕ್ಷಣ: ಕೆ.ವಿ.ಪ್ರಭಾಕರ್

Praja Vahini February 21, 2026 1 minute read
WhatsApp Image 2026-02-21 at 15.11.21
Spread the love

ಕೋಲಾರ: ಚಂದ್ರ ಲೋಕಕ್ಕೆ ಕಾಲಿಟ್ಟರೂ, ಕಾಲ ಬುಡದಲ್ಲೇ ಮರ್ಯಾದಾ ಹತ್ಯೆ ನಡೆಯುತ್ತಿರುವುದು ಬೇಸರದ ಸಂಗತಿ. ಜಾತೀಯತೆ, ಮೂಢನಂಬಿಕೆ ವಿಜ್ರಂಭಿಸುತ್ತಲೇ ಇದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರದ ಕೆ.ವಿ.ಪ್ರಭಾಕರ್ ಬೇಸರ ವ್ಯಕ್ತಪಡಿಸಿದರು.

ಮನ್ವಂತರ ಪ್ರಕಾಶನ ಮತ್ತು ತರಬೇತಿ ಸಂಸ್ಥೆ ಆಯೋಜಿಸಿದ್ದ ನಾನಾ ಶ್ರಮಿಕ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.‌

ಮನ್ವಂತರ ಮಾಧ್ಯಮ ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆ ಕಳೆದ ಏಳು ವರ್ಷಗಳಿಂದ “ಸಹೃದಯತೆ,
ಸದ್ವಿಚಾರ, ಸಹಬಾಳ್ವೆ ಎನ್ನುವ ಮೂರು ಮಂತ್ರಗಳನ್ನು ಪಾಲಿಸುತ್ತಾ,
ಸಮಾಜದಲ್ಲಿ ಹೃದಯವಂತಿಕೆಯ ಬೀಜಗಳನ್ನು ಬಿತ್ತುತ್ತಿದೆ.
ತಂತ್ರಜ್ಞಾನದ ಬೆಳವಣಿಗೆಯಿಂದ ಮನುಷ್ಯ ಜಗತ್ತಿನಲ್ಲಿ ಒಂದು ಹೊಸ ಮನ್ವಂತರವೇ ಆರಂಭವಾಗಿದೆ.
ಮನೆಗಳ ಒಳಗೂ ಮನುಷ್ಯ ಸಂಬಂಧ, ಮಾನವೀಯ ಬೆಸುಗೆ ಕಾಣೆಯಾಗುತ್ತಿರುವ ಹೊತ್ತಲ್ಲಿ ಕೋಲಾರದ ಮಣ್ಣಿನಲ್ಲಿ ಮನ್ವಂತರ ಸಂಸ್ಥೆ ಮಾನವೀಯ ಬೆಸುಗೆಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮನ್ವಂತರ ಸಂಸ್ಥೆ ದೊಡ್ಡ ದೊಡ್ಡ ಉದ್ಯಮಿಗಳನ್ನು, IAS, IPS ಅಧಿಕಾರಿಗಳು, ಅಧಿಕಾರಸ್ಥರು, ಹಣವಂತರನ್ನು ಕರೆಸಿ ಸನ್ಮಾನಿಸಿ ದೊಡ್ಡ ಹೆಸರನ್ನು ಸಂಪಾದಿಸಬಹುದಿತ್ತು. ಆದರೆ, ಪಾನಿಪೂರಿ ಮಾಡಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ರಮೇಶ್ ಅವರನ್ನು ಗುರುತಿಸಿದೆ. ನಾವು ಬೆಳಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಡುವ ಮೊದಲೇ ಬೀದಿಯನ್ನು ಗುಡಿಸಿ ಸ್ವಚ್ಚವಾಗಿಡುವ ಪೌರ ಕಾರ್ಮಿಕ ಸಮುದಾಯದ ಕೋಕಿಲಾ ಅವರನ್ನು ಗುರುತಿಸಿದೆ ಎಂದರು.

ಕೋಲಾರ ಅಂದರೆ ಸೌಹಾರ್ದತೆಯ ಮಂಟಪ ಇದ್ದ ಹಾಗೆ. ಎಲ್ಲಾ‌ ಧರ್ಮದವರೂ ಒಟ್ಟಾಗಿ ಬೆಸೆದುಕೊಂಡಿರುವ ಶ್ರಮಿಕ ಸಮಾಜ. ಈ ಕೋಲಾರದ ಮಣ್ಣಿನ ಸೌಹಾರ್ದತೆ ಮತ್ತು ಸಹಬಾಳ್ವೆಗೆ ನೀರು ಗೊಬ್ಬರ ಹಾಕುತ್ತಿರುವ ಮುಬಾರಕ್ ಬಾಗಬಾನ್ ಅವರನ್ನು ಗುರುತಿಸಿದೆ. ಎಲ್ಲರೂ ಸಿನಿಮಾ ಮತ್ತು ಸೀರಿಯಲ್ ನಟ ನಟಿಯರನ್ನು ಹುಡುಕಿಕೊಂಡು ಓಡುತ್ತಿರುವ ಹೊತ್ತಿನಲ್ಲಿ ಮನ್ವಂತರ ಸಂಸ್ಥೆ, ಸಾಂಪ್ರದಾಯಿಕ ಕಲೆ ಲಾವಣಿ ಹಾಡುವ ಅರಳು ಮಲ್ಲಿಗೆ ಪ್ರಭುದೇವರನ್ನು, ನಾದಸ್ವರ ಕಲಾವಿದ ವಿದ್ವಾನ್ ಬಿ.ಎನ್.ಗೋಪಾಲ್, ಜಾನಪದ ಕ್ಷೇತ್ರದ ಲಲಿತಮ್ಮ, ಕ್ರೀಡಾಪಟು ಮಹಾದೇವಿ, ನಿವೃತ್ತ ಶಿಕ್ಷಕಿ ಕುಮುದಾ, ವಕೀಲರೂ ಹಿರಿಯ ಕ್ರಿಕೆಟ್ ಪಟು ಗ್ರಾಮೀಣ ಪ್ರತಿಭೆ ಬಿ.ಸಿ.ಪರಮೇಶ್ ಅವರನ್ನು ಗುರುತಿಸಿ ಗೌರವಿಸುತ್ತಿದೆ.
ಮಾತ್ರವಲ್ಲದೆ ಬಹುಭಾಷಿಕ ನೆಲದಲ್ಲಿ ಕನ್ನಡಕ್ಕಾಗಿ‌ ಶ್ರಮಿಸಿದ ಬಿ.ಎನ್.ಮೋಹನ್ ಕುಮಾರ್ ಅವರಿಗೆ ಮರಣೋತ್ತರವಾಗಿ ಪುರಸ್ಕಾರ ನೀಡುತ್ತಿರುವುದಕ್ಕೆ ವಿಶೇಶವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಇವರೆಲ್ಲರ ಕ್ಷೇತ್ರಗಳೂ ಬೇರೆ ಬೇರೆ ಇರಬಹುದು. ಆದರೆ, ಎಲ್ಲರನ್ನೂ ನಾನು “ಸಾಮಾಜಿಕ‌ ಶುಶ್ರೂಶಕರು. ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ Social Doctors ಎಂದು ಕರೆಯಲು ಇಚ್ಚಿಸುತ್ತೇನೆ.
ಇಂಥಾ ಸಹೃದಯರನ್ನು ಸನ್ಮಾನಿಸುವ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಬಂದಿರುವುದು ನನಗೆ ಬಹಳ ಖುಷಿ ಕೊಟ್ಟಿದೆ ಎಂದರು.

 

About the Author

Praja Vahini

Editor

View All Posts

Spread the love

Post navigation

Previous: ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಭ್ರಷ್ಠಾಚಾರ ತಡೆಯುವುದು ಸರ್ಕಾರದ ಆಶಯ: CM
Next: ಖರ್ಗೆ ಭರವಸೆ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ; ಬಹಳ ಸಂತೋಷ: ಡಿಸಿಎಂ ಡಿಕೆಶಿ

Views:

24

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.