ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಚಳಿ ಬಿಡಿಸಿದ್ದು, ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದ ಅಧಿಕಾರಿಗಳ ಅಕ್ರಮಗಳು ಒಂದೊಂದಾಗಿ ಬಯಲಾಗಿದೆ. ಅಲ್ಲದೆ ಭ್ರಷ್ಟ ಅಧಿಕಾರಿಗಳು ಎಕರೆಗಟ್ಟಲೆ ಜಾಮೀನು ಸೇರಿದಂತೆ ಅಕ್ರಮ ಸಂಪತ್ತಿನ ಭಂಡಾರ ಬಗೆದಷ್ಟು ಬಯಲಾಗುತ್ತಿದೆ.
ಹೌದು, ಕರ್ನಾಟಕ ರಾಜ್ಯದಲ್ಲಿ ನಿನ್ನೆ (ಗುರುವಾರ ಫೆ. 12) ಲೋಕಾಯುಕ್ತ ಅಧಿಕಾರಿಗಳು ಧೀಡಿ ದಾಳಿ ನಡೆಸಿ ಸುಮಾರು 29 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸುಮಾರು 23.75 ಕೋಟಿ ಮೌಲ್ಯದ ಆಸ್ತಿಯನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸೂಪರಿಂಟೆಂಡ್ ಎಂಜಿನಿಯರ್ ಎಚ್.ಎಂ.ಜನಾರ್ದನ ಅವರ ಆಪ್ತರ ಮನೆಯಲ್ಲಿ ₹1.70 ಕೋಟಿ ನಗದು ಸೇರಿ ಒಟ್ಟು ₹19.71 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.
ಇನ್ನು ದಾಳಿ ವೇಳೆ ಆರೋಪಿತ ಅಧಿಕಾರಿಗಳು ಸಂಪಾದನೆ ಮಾಡಿಟ್ಟಿದ್ದ ಖಜಾನೆ ಬಯಲಾಗಿದ್ದು, ಕೋಟಿಗಟ್ಟಲೆ ನಗದು, ಕೆ.ಜಿ.ಗಟ್ಟಲೆ ಆಭರಣ ಸೇರಿ 21 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಬೆಂಗಳೂರು ನಗರದಲ್ಲಿ, ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಪುರುಷೋತ್ತಮ ದಾಸ್ ಹೆಗಡೆ ಅವರ ಬಳಿ 11.29 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ.
ಹಲವಾರು ಆಸ್ತಿಗಳು ಮತ್ತು 2 ಶಿಕ್ಷಣ ಸಂಸ್ಥೆಗಳು, 11 ಎಕರೆ ಕೃಷಿ ಭೂಮಿ, 44.23 ಲಕ್ಷ ರೂ. ನಗದು, 60.79 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಮತ್ತು 27 ಲಕ್ಷ ರೂಪಾಯಿಗಳ ಸ್ಥಿರ ಠೇವಣಿಗಳನ್ನು ಹೊಂದಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಎಚ್ ಎಂ ಜನಾರ್ದನ ಅವರು 4.42 ಕೋಟಿ ರೂಪಾಯಿಗಳ ಅಕ್ರಮ ಆಸ್ತಿ – ಒಂದು ನಿವೇಶನ, ಮೂರು ಮನೆಗಳು, 34 ಎಕರೆ ಕೃಷಿ ಭೂಮಿ, 7 ಲಕ್ಷ ರೂಪಾಯಿಗಳ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ 1.70 ಕೋಟಿ ರೂಪಾಯಿಗಳ ಅಕ್ರಮ ಆಸ್ತಿಯನ್ನು ಹೊಂದಿದ್ದಾರೆ.
ದಾವಣಗೆರೆಯಲ್ಲಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರ್ಜುನ್ ಆರ್ ಎಚ್ (ಸಿವಿಲ್) 2.18 ಕೋಟಿ ರೂ. ಅಕ್ರಮ ಆಸ್ತಿ ಹೊಂದಿದ್ದಾರೆ. ಇದನ್ನೂ ಓದಿ: ಸುಸಜ್ಜಿತ ಸಮುದಾಯ ಭವನ ನಿರ್ಮಣ: ಹೆಚ್. ಸಿ. ಮಹದೇವಪ್ಪ
ಧಾರವಾಡದ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಸರ್ವೆ ಮೇಲ್ವಿಚಾರಕ ಸೋಮಲಿಂಗಪ್ಪ ಪಕ್ಕೀರಪ್ಪ ಸಿದ್ದನಗೌಡರ ಅವರು 1.82 ಕೋಟಿ ರೂ. ಆದಾಯಕ್ಕಿಂತಲೂ ಅಧಿಕ ಆಸ್ತಿ ಹೊಂದಿದ್ದಾರೆ.
ಒಟ್ಟಿನಲ್ಲಿ ಭ್ರಷ್ಟ ಅಧಿಕಾರಿಗಳ ಚಳಿಗೊಳಿಸಿದ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಆಸ್ತಿ ಮಾಡಿದ ಭ್ರಷ್ಟರು ಗಡಗಡ ನಡುಗಿದ್ದಾರೆ.
