ಸೊರಬ: ಸೊರಬ ಮತಕ್ಷೇತ್ರದ ಕೋಡಿಕೊಪ್ಪ ಗ್ರಾಮದಲ್ಲಿ ಇಂದು (ಬುಧವಾರ ಫೆ. 11) ಸುಮಾರು ₹120.40 ಲಕ್ಷ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮದ ಮೂಲಭೂತ ಸೌಕರ್ಯಗಳಾದ ನೀರು, ಶಿಕ್ಷಣ ಮತ್ತು ರಸ್ತೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸಮಗ್ರ ಪ್ರಗತಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಇನ್ನು ಶುದ್ಧ ಕುಡಿಯುವ ನೀರಿಗಾಗಿ ಜೆಜೆಎಂ (JJM) ಯೋಜನೆಯಡಿ ₹85.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್ ಲೋಕಾರ್ಪಣೆ ಮಾಡಿದರು. ಇನ್ನು ಮುಂದೆ ಗ್ರಾಮದ ಪ್ರತಿ ಮನೆಗೂ ನಲ್ಲಿಯ ಮೂಲಕ ಶುದ್ಧ ನೀರು ಬರಲಿದೆ ಎಂದರು.
ಶಿಕ್ಷಣಕ್ಕೆ ಆಸರೆ: ₹14.90 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ “ವಿವೇಕ ಶಾಲಾ ಕಟ್ಟಡ” ಉದ್ಘಾಟನೆ. ಗ್ರಾಮೀಣ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಹೊಸ ಬಲ ಬಂದಿದೆ ಎಂದರು.
ಸುಗಮ ಸಂಚಾರ: ಎಸ್.ಸಿ ಕಾಲೋನಿಯಲ್ಲಿ ₹20.00 ಲಕ್ಷ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇದನ್ನೂ ಓದಿ: ಇಲ್ಲಿ ಯಾವುದೇ ಜಾತಿ ಮುಖ್ಯವಲ್ಲ, ಅವರ ತತ್ವ ಸಿದ್ಧಾಂತಗಳು ಮುಖ್ಯ: ಶಿವರಾಜ್ ತಂಗಡಗಿ
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಪ್ರೀತಿಯ ಗ್ರಾಮಸ್ಥರು ಉಪಸ್ಥಿತರಿದ್ದರು.
