ನವದೆಹಲಿ: ಲೋಕಸಭೆಯಲ್ಲಿ ಇಂದು ಕೂಡ ಪ್ರತಿಪಕ್ಷಗಳು ಭಾರಿ ಗದ್ದಲ, ಕೋಲಾಹಲ ಎಬ್ಬಿಸಿದ ಹಿನ್ನಲೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯದೆ ದ್ರೌಪದಿ ಮುರ್ಮು ಅವರ ಭಾಷಣ ಲೋಕಸಭೆಯಲ್ಲಿಂದು ಅಂಗೀಕಾರವಾಯಿತು.
ಪ್ರತಿಪಕ್ಷಗಳ ಸದಸ್ಯರು ಪ್ರಧಾನಿಯವರ ಭಾಷಣಕ್ಕೆ ತೀವ್ರ ಅಡ್ಡಿಪಡಿಸಿದ್ದರಿಂದ ಕಡೆಗಳಿಗೆಯಲ್ಲಿ ಮೋದಿ ಭಾಷಣವನ್ನು ರದ್ದುಪಡಿಸಲಾಯಿತು. ಗದ್ದಲ, ಕೋಲಾಹಲದ ನಡುವೆ ಲೋಕಸಭೆಯಲ್ಲಿ ಸಭಾಧ್ಯಕ್ಷ ಓಂ ಬಿರ್ಲಾ ರಾಷ್ಟ್ರಪತಿ ಭಾಷಣವನ್ನು ಅಂಗೀಕರಿಸಲಾಗಿದೆ ಎಂದು ಪ್ರಕಟಿಸಿದರು.
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ರದ್ದಾದ ಬಗ್ಗೆ ಮತ್ತು ಪದೇ ಪದೇ ಗದ್ದಲ ಉಂಟಾಗಿ ಗೊಂದಲದ ಗೂಡಾಯಿತು. ಇದೇ ವಿಚಾರವಾಗಿ ರಾಜ್ಯಸಭೆಯಲ್ಲೂ ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿತು.
ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ರಾಹುಲ್ ಗಾಂಧಿ ಅವರನ್ನು ಟೀಕಿಸಿ ಕಾಂಗ್ರೆಸ್ ಪಕ್ಷ “ಮುಗ್ಧ ಮಗುವಿನ ಒತ್ತೆಯಾಳು” ಎಂದು ಆರೋಪಿಸಿದ ನಂತರ ಕಾವೇರಿದ ವಾಗ್ವಾದ ನಡೆಯಿತು. ಈ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಮಲ್ಲಿಕರ್ಜುನ ರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರಾಜ್ಯಸಭಾ ನಾಯಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆಪಿ ನಡ್ಡಾ ಅವರು ಕಲಾಪಗಳನ್ನು ಸ್ಥಗಿತಗೊಳಿಸಿದ್ದಕ್ಕಾಗಿ ವಿರೋಧ ಪಕ್ಷಗಳನ್ನು ದೂಷಿಸಿದರು ಮತ್ತು ಪ್ರಜಾಪ್ರಭುತ್ವ ಕಾರ್ಯ ಚಟುವಟಿಕೆಗೆ ಅಪಾಯವಿದೆ ಎಂದು ದೂರಿದ್ದಾರೆ.
ಸಂಸತ್ತು ಎರಡೂ ಸದನಗಳನ್ನು ಒಳಗೊಂಡಿದೆ ಎಂದು ಹೇಳಿದ ಅವರು, ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ಮುಕ್ತವಾಗಿ ಏಕೆ ಎತ್ತಬಾರದು ಎಂದು ಪ್ರಶ್ನಿಸಿದ ಅವರು ನೀವು ಸದನವನ್ನು ಈ ರೀತಿ ಹೇಗೆ ನಡೆಸುತ್ತೀರಿ?” ಎಂದು .ತರಾಟೆಗೆ ತೆಗೆದುಕೊಂಡರು
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕೂಡ ಇದಕ್ಕೆ ಸಮ್ಮತಿಸಿ, ಸಂಸದರು ಸದನದ ನಿಯಮಗಳು ಮತ್ತು ಸಂಪ್ರದಾಯಗಳನ್ನು ಗೌರವಿಸಬೇಕೆಂದು ಕರೆ ನೀಡಿದರು.
