ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಒಂದು ಕಾರ್ಯಕ್ರಮ ಅಥವಾ ಯಾವುದೇ ಒಂದು ವೇದಿಕೆಯಲ್ಲಿ ಮಾತನಾಡಬೇಕಾದರೆ ಅವರ ಅಭಿಮಾನಿಗಳು ಹೌದು ಹುಲಿಯ, ಹೌದು ಹುಲಿಯ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರನ್ನ ಹುರಿದುಂಬಿಸುತ್ತಾರೆ.
ಇನ್ನು ಇಂದು (ಸೋಮವಾರ ಫೆಬ್ರುವರಿ 02) ನಡೆದಾ ಸದನದಲ್ಲಿ ಹೌದು ಹುಲಿಯ ಎನ್ನುವ ಬದಲು ಸಿಎಂ ಸಿದ್ದರಾಮಯ್ಯ ಅವರಿಗೆ, ʻಹೌದು ಇಲಿಯಾʼ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಕಾಲು ಎಳೆದಿದ್ದಾರೆ. ಇದನ್ನೂ ಓದಿ: ಆರೋಗ್ಯವಂತ ತಾಯಿಯಿಂದಲೇ ಆರೋಗ್ಯವಂತ ಕುಟುಂಬ: ಡಿಕೆಶಿ
ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡರು.. ಸಿಎಂ ಡಲ್ ಆಗಿದ್ದಾರೆ, ಮೊದಲಿನ ಹಾಗಿಲ್ಲ. ಆಡಳಿತದಲ್ಲಿ ಬಿಗಿ ಇಲ್ಲ. ʻಹೌದು ಹುಲಿಯಾ ಆಗಿ ಅವ್ರು ಉಳಿದಿಲ್ಲ, ಹೌದು ಇಲಿಯಾʼ ಆಗಿದ್ದಾರೆ. ಲೂಟಿಕೋರ ಅಧಿಕಾರಿಗಳ ವಿರುದ್ಧ ಕ್ರಮ ಇಲ್ಲ. ಇಲಾಖೆಗಳಲ್ಲಿ ಲೂಟಿ ನಿಲ್ತಿಲ್ಲ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಲಂಚಾವತಾರ ತಾಂಡವ ಆಡ್ತಿದೆ. ಸರ್ಕಾರಕ್ಕೆ ನೈತಿಕತೆ ಇಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.
