ಬೆಂಗಳೂರು: ವಿವಿಧ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ಒಟ್ಟಿಗೆ ಸೇರಿಕೊಂಡು ಕ್ರಿಕೆಟ್ ಆಡುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2026 ಫೈನಲ್ ಪಂದ್ಯವನ್ನು ಕೊಯಂಬತ್ತೂರಿನಲ್ಲಿ ನಿನ್ನೆ ಫೆಬ್ರುವರಿ 01 ರಂದು ನಡೆಯಿತು. ಈ ಫೈನಲ್ ಪಂದ್ಯದಲ್ಲಿ 12 ವರ್ಷಗಳ ಬಳಿಕ ಕರ್ನಾಟಕ ಬೋಲ್ಡೋಸರ್ ತಂಡ ಗೆದ್ದು ಬೀರಿದೆ.
ಯೆಸ್…ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಆಲ್ರೌಂಡ್ ಪ್ರದರ್ಶನ ತೋರಿ ಬಂಗಾಳ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಐತಿಹಾಸಿಕ ಗೆಲುವಾಗಿದೆ. ಬರೋಬ್ಬರಿ 12 ವರ್ಷಗಳ ಬಳಿಕ ತಂಡ ಮತ್ತೆ CCL ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈಗಾಗಲೇ 2 ಬಾರಿ ಚಾಂಪಿಯನ್ ಆಗಿದ್ದ ಕರ್ನಾಟಕ, 2013 ಮತ್ತು 2014ರಲ್ಲಿ ಪ್ರಶಸ್ತಿ ಗೆದ್ದಿತ್ತು. ಈ ಬಾರಿ 3ನೇ ಬಾರಿ ಚಾಂಪಿಯನ್ ಆಗುವ ಮೂಲಕ ತಮ್ಮ ಶಕ್ತಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಇದಕ್ಕೂ ಮೊದಲು 6 ಬಾರಿ ಫೈನಲ್ ತಲುಪಿದರೂ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾದ ಕರ್ನಾಟಕ, ಈ ಸೀಸನ್ನಲ್ಲಿ ಆರಂಭದಿಂದಲೇ ಸಂಘಟಿತ ಆಟವಾಡುತ್ತಾ ಫೈನಲ್ ಗೆದ್ದು ಸಂಭ್ರಮಾಚರಣೆ ಮಾಡಿದೆ.
