Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ವಿತ್ತ ಸಚಿವೆ ಮಂಡಿಸಿದ 9 ನೇ ಕಳಪೆ ಮತ್ತು ಕರ್ನಾಟಕ ವಿರೋಧಿ ಬಜೆಟ್: ಡಾ.ಹೆಚ್.ಸಿ ಮಹದೇವಪ್ಪ
  • Uncategorized

ವಿತ್ತ ಸಚಿವೆ ಮಂಡಿಸಿದ 9 ನೇ ಕಳಪೆ ಮತ್ತು ಕರ್ನಾಟಕ ವಿರೋಧಿ ಬಜೆಟ್: ಡಾ.ಹೆಚ್.ಸಿ ಮಹದೇವಪ್ಪ

Praja Vahini February 1, 2026 1 minute read
fbe5a054-0212-48d0-a8a4-9e99dd8fa5ef
Spread the love

ಬೆಂಗಳೂರು: ದೇಶದಲ್ಲಿ ಆಡಳಿತ ಮಾಡುವ ಸರ್ಕಾರದ ರೀತಿ ನೀತಿಗಳು, ಅಲ್ಲಿನ ಜನರ ಆಶೋತ್ತರಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಿದೆ ಎಂಬುದನ್ನು ಸರ್ಕಾರವು ಮಂಡಿಸುವಂತಹ ಬಜೆಟ್ ಸೂಚ್ಯವಾಗಿ ಹೇಳುತ್ತದೆ.

ಎಲ್ಲ ವಲಯವನ್ನು ಒಳಗೊಂಡಿದೆಯೋ ಅಥವಾ ಇಲ್ಲವೋ ಎಂಬ ಸಂಗತಿಯು ಬಜೆಟ್ ಅನ್ನು ನೋಡಿದರೆ ತಿಳಿಯುತ್ತದೆ.ಈ ಹಿನ್ನಲೆಯಲ್ಲಿ ಹಣಕಾಸು ತಜ್ಞೆ ಅಲ್ಲದ ಕೇಂದ್ರದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 9 ನೇ ಕಳಪೆ ಬಜೆಟ್ ಇದಾಗಿದೆ.

ಪ್ರತಿ ಬಾರಿಯೂ ದೊಡ್ಡ ದೊಡ್ಡ ಅಂಕಿ ಅಂಶಗಳನ್ನು ಹೊತ್ತು ತರುವ ನಿರ್ಮಲಾ ಸೀತಾರಾಮನ್ ಅವರು ಪ್ರತಿ ಬಾರಿಯೂ ಸಹ ತಾವೇ ಮಂಡಿಸಿದ ಬಜೆಟ್ ಅನ್ನು ಸಮರ್ಪಕವಾಗಿ ಜಾರಿ ಮಾಡದೇ ಇನ್ನೊಂದು ಬಜೆಟ್ ಅನ್ನು ಮಂಡಿಸುವುದು ಅತ್ಯಂತ ಹಾಸ್ಯಾಸ್ಪದ ಸಂಗತಿ ಆಗಿದೆ. ಬಜೆಟ್ ಎಂದರೆ ಶ್ರೀಮಂತರ ಅನುಕೂಲಕ್ಕಾಗಿ ಇರುವ ವ್ಯವಸ್ಥೆ ಎಂದುಕೊಂಡು ಬಜೆಟ್ ತಯಾರಿಸುವ ಕೇಂದ್ರ ಸರ್ಕಾರವು, ಕಾರ್ಪೊರೇಟ್ ಉದ್ಯಮಿಗಳಿಗೆ, NRI ಗಳಿಗೆ ಮತ್ತು ಶ್ರೀಮಂತರಿಗೆ ಪೂರಕವಾಗಿ ಬಜೆಟ್ ರೂಪಿಸುತ್ತಿದೆಯೇ ವಿನಃ, ಜನ ಸಾಮಾನ್ಯರ ಪರವಾಗಿ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸದೇ ಇರುವುದು ಇವರ ಜನ ವಿರೋಧಿ ನೀತಿಗೆ ಹಿಡಿದ ಕನ್ನಡಿ.

ಪ್ರತಿ ಬಾರಿಯೂ ಆದಾಯ ತೆರಿಗೆಯ ರೂಪು ರೇಷೆಗಳನ್ನು ತಯಾರಿಸುವ ಕೇಂದ್ರ ಸರ್ಕಾರವು ಜನರಿಗೆ ಆದಾಯವನ್ನು ಪಡೆಯುವ ಮಾರ್ಗಗಳನ್ನು ಸೃಷ್ಟಿಸಲು ವಿಫಲವಾಗಿದೆ. ಅದರಲ್ಲೂ ಜಾರಿಯಲ್ಲಿದ್ದ ಮನ್ ರೇಗಾ ದಂತಹ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳನ್ನು ದುರ್ಬಲಗೊಳಿಸಿ ಜನರ ಉದ್ಯೋಗವನ್ನು ಕಿತ್ತುಕೊಳ್ಳಲು ಹೊರಟಿದೆ.

ದೇಶದ ಜನಸಂಖ್ಯೆಯಲ್ಲಿ 24% ಇರುವಂತಹ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಜೆಟ್ ನಲ್ಲಿ ಏನಾದರೂ ಅನುಕೂಲ ಮಾಡಿದ್ದಾರಾ ಎಂದು ಹುಡುಕಿದರೆ, ಅಲ್ಲಿ ಎಂದಿನಂತೆ ದೊಡ್ಡ ಸೊನ್ನೆಯೊಂದು ನಮಗೆ ಕಾಣುತ್ತಿದೆ. ಇನ್ನು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಬಹು ನಿರೀಕ್ಷಿತ ಮೇಕೆದಾಟು ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ಕಡೆಗಣಿಸಿದ್ದು ತಮ್ಮ ಕರ್ನಾಟಕ ವಿರೋಧಿ ನೀತಿಯನ್ನು ಮುಂದುವರೆಸಿದ್ದಾರೆ.

ಇನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆಂದು ನಿರೀಕ್ಷಿಸಿದ್ದ ಸುಮಾರು 5000 ಕೋಟಿ ಅನುದಾನದ ಕನಿಷ್ಠ ಪ್ರಸ್ತಾಪವನ್ನೂ ಮಾಡದ ಕೇಂದ್ರ ಸರ್ಕಾರವು, ರೈತರಿಂದ ಬೆಂಬಲ ಬೆಲೆ ಅಡಿಯಲ್ಲಿ ಪಡೆದ ಉತ್ಪನ್ನಗಳಿಗೆ ನೀಡಬೇಕಿದ್ದ 2461 ಕೋಟಿ ಹಣದ ಬಗ್ಗೆ ಕನಿಷ್ಠ ಪ್ರಸ್ತಾಪ ಮಾಡದೇ ಇರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.

ಬಜೆಟ್ ಘೋಷಣೆಯ ಕೆಲವೇ ಕ್ಷಣದಲ್ಲಿ ಮಾರುಕಟ್ಟೆಯು ದಿಢೀರ್ ಕುಸಿತ ಕಂಡಿದ್ದೂ ಕೂಡಾ ಕೇಂದ್ರದ ಬಜೆಟ್ ನ ಕಳಪೆತನದ ಪ್ರತೀಕವಾಗಿದೆ ಎಂದರು.

About the Author

Praja Vahini

Editor

View All Posts

Spread the love

Post navigation

Previous: ಅರವಿಂದ ಲಿಂಬಾವಳಿ ಹುಟ್ಟುಹಬ್ಬದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ
Next: ಪೂಜ್ಯಶ್ರೀಗಳು ಶಿಕ್ಷಣ, ಆಧ್ಯಾತ್ಮ, ಜಾತ್ಯಾತೀತತೆಗೆ ಮನ್ನಣೆ ನೀಡಿದ್ದರು: ಸಿಎಂ

Views:

15

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.