Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂದರೆ ಕಿರುಕುಳ ಎಷ್ಟು ಆಗಿರಬಾರದು: ಪ್ರಿಯಾಂಕ್ ಖರ್ಗೆ
  • Bangalore
  • Politics
  • State

ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂದರೆ ಕಿರುಕುಳ ಎಷ್ಟು ಆಗಿರಬಾರದು: ಪ್ರಿಯಾಂಕ್ ಖರ್ಗೆ

Praja Vahini January 31, 2026 1 minute read
WhatsApp Image 2026-01-31 at 15.27.26
Spread the love

ಬೆಂಗಳೂರು: ಉದ್ಯಮ ಲೋಕದ ಧೀಮಂತ ಸಾಮ್ರಾಟ ಸಿಜೆ ರಾಯ್ ಅವರಿಗೆ ಐಟಿ ಅಧಿಕಾರಿಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತಾಗಿ ಇದೀಗ ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಇಂದು (ಶನಿವಾರ ಜ. 31) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಾಪ್ ಉದ್ಯಮಿಗಳು ಕೇಂದ್ರ ಸರಕಾರದ ಮಾತು ಕೇಳದಿದ್ದರೆ ಪ್ರತಿಷ್ಠಿತ ಉದ್ಯಮಿಗಳಿಗೆ ಐಟಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿರುವುದು ಇದೇನು ಹೊಸದಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

ಈಗಾಗಲೇ ದೇಶದಲ್ಲಿ ಅದೆಷ್ಟೋ ಉದ್ಯಮಿಗಳ ಮೇಲೆ ಐಟಿ ಎಂಬ ಹೆಸರಿನಲ್ಲಿ ಕಿರುಕುಳ ನೀಡಿ ಅದೆಷ್ಟೋ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಕಳೆದ 10 ವರ್ಷಗಳಿಂದ ಇಡಿ, ಐಟಿ, ಜಿಎಸ್ಟಿಯಿಂದ ಉದ್ಯಮಿಗಳಿಗೆ ಕಿರುಕುಳ ಆಗುತ್ತಿದೆ. ಕೇಂದ್ರಕ್ಕೆ ತಲೆ ಭಾಗದ ಉದ್ಯಮಿಗಳಿಗೆ ಈ ಕಿರುಕುಳ ಆಗುತ್ತಿದೆ. ಸಾಕಷ್ಟು ಉದಾಹರಣೆ ಇದೆ. ಅಂಬಾನಿ, ಅದಾನಿಗೆ ಇಡಿ, ಐಟಿ ಕಿರುಕುಳ ಏನು ಇಲ್ಲ. ಸರ್ಕಾರ ಅವರಿಗಾಗಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂದರೆ ಕಿರುಕುಳ ಎಷ್ಟು ಆಗಿರಬಾರದು ನೋಡಿ. ಸಾಮಾನ್ಯ ಜನರಿಗೂ ಇಂತಹ ಕಿರುಕುಳ ಆಗುತ್ತಿದೆ. ಬೇಕಾದ್ರೆ ಸರ್ವೆ ಮಾಡಿ ಗೊತ್ತಾಗುತ್ತದೆ. ಜನರಿಗೆ ತೊಂದರೆ ಕೊಡಲು ಕೇಂದ್ರದ ಬಳಿ ಹೊಸ ಆಯುಧವೇ ಇದೆ. ಕಿರುಕುಳದ ಬಗ್ಗೆ ನಾನು ಹೇಳುತ್ತಿಲ್ಲ, ಅವರ ಕುಟುಂಬ ಹೇಳುತ್ತಿದೆ. ಇದರ ಬಗ್ಗೆ ತನಿಖೆ ಆಗಲಿ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ವಿಫಲ: ಆರ್. ಅಶೋಕ್

ರಾಯ್ ಅವರು ಕೆಳ ಮಟ್ಟದಿಂದ ಬೆಳೆದ ವ್ಯಕ್ತಿ. ಅವರು ಯಾಕೆ ಹತಾಶೆ ಆಗಿದ್ದರು. ಯಾಕೆ ಅವರು ಇಂತಹ ನಿರ್ಧಾರ ಮಾಡಿದ್ರು ಎಂಬ ಬಗ್ಗೆ ತನಿಖೆ ಮಾಡಲಿ ಸತ್ಯ ಹೊರಗೆ ಬರಲಿ. ಐಟಿ ಅಧಿಕಾರಿಗಳ ವಿರುದ್ಧವೂ ತನಿಖೆ ಆಗಬೇಕು. ಅವರು ಕ್ರೈಂ ಸೀನ್‌ನಲ್ಲಿ ಇದ್ದರು, ತನಿಖೆ ಆಗಲಿ. ಅಲ್ಲಿ ಇದ್ದವರ ಎಲ್ಲರ ತನಿಖೆ ಆಗಲಿ ಎಂದು ಒತ್ತಾಯಿಸಿದರು.

 

About the Author

Praja Vahini

Editor

View All Posts

Spread the love

Post navigation

Previous: ಕಾಂಗ್ರೆಸ್ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ವಿಫಲ: ಆರ್. ಅಶೋಕ್
Next: ಸಿಜೆ ರಾಯ್ ಆತ್ಮಹತ್ಯೆಗೆ ಕೇರಳ ಎಲೆಕ್ಷನ್ ಕಂಟಕ!?

Views:

34

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.