Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬೆಂಗಳೂರಿನಲ್ಲಿ ಲಿವ್‌ಪ್ಯೂರ್‌ನ ನೂತನ ಎಕ್ಸ್‌ ಕ್ಲೂಸಿವ್ ಬ್ರ್ಯಾಂಡ್ ಔಟ್‌ ಲೆಟ್ ಉದ್ಘಾಟನೆ
  • Uncategorized

ಬೆಂಗಳೂರಿನಲ್ಲಿ ಲಿವ್‌ಪ್ಯೂರ್‌ನ ನೂತನ ಎಕ್ಸ್‌ ಕ್ಲೂಸಿವ್ ಬ್ರ್ಯಾಂಡ್ ಔಟ್‌ ಲೆಟ್ ಉದ್ಘಾಟನೆ

Praja Vahini January 28, 2026 1 minute read
330c17e2-4257-4e2e-a5cd-418bcd43bd40
Spread the love

ಬೆಂಗಳೂರು: ಭಾರತದ ಪ್ರಮುಖ ಮತ್ತು ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ ಗಳಲ್ಲಿ ಒಂದಾದ ಲಿವ್‌ಪ್ಯೂರ್, ಇಂದು ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಹೊಸ ಎಕ್ಸ್‌ ಕ್ಲೂಸಿವ್ ಬ್ರ್ಯಾಂಡ್ ಔಟ್‌ಲೆಟ್ ಅನ್ನು ಉದ್ಘಾಟಿಸಿದೆ. ಈ ಹೊಸ ಮಳಿಗೆಯು ಲಿವ್‌ಪ್ಯೂರ್‌ನ ಸ್ಮಾರ್ಟ್, ಅನುಕೂಲಕರ ಮತ್ತು ಆರೋಗ್ಯ ಕೇಂದ್ರಿತ ಗೃಹೋತ್ಪನ್ನಗಳನ್ನು ಗ್ರಾಹಕರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗಿಸಲಿದೆ. ಅಲ್ಲದೆ, ಕುಟುಂಬಗಳು ಮಳಿಗೆಗೆ ಭೇಟಿ ನೀಡಿ ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಆತ್ಮವಿಶ್ವಾಸದಿಂದ ಸೂಕ್ತ ಆಯ್ಕೆ ಮಾಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು ನಗರವು ತಂತ್ರಜ್ಞಾನ ಆಧಾರಿತ ಜೀವನಶೈಲಿ ಮತ್ತು ಆರೋಗ್ಯ ಪ್ರಜ್ಞೆಯುಳ್ಳ ಗ್ರಾಹಕರ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಈ ಹಿನ್ನೆಲೆಯಲ್ಲಿ, ಪ್ರಮುಖ ಮಹಾನಗರಗಳಲ್ಲಿ ತನ್ನ ಮಾರುಕಟ್ಟೆಯನ್ನು ಬಲಪಡಿಸುವ ಲಿವ್‌ಪ್ಯೂರ್‌ನ ಉದ್ದೇಶಕ್ಕೆ ಈ ಹೊಸ ಮಳಿಗೆ ಹೆಚ್ಚಿನ ಶಕ್ತಿ ನೀಡಿದೆ. ಈಗಾಗಲೇ 6 ಎಕ್ಸ್‌ ಕ್ಲೂಸಿವ್ ಬ್ರ್ಯಾಂಡ್ ಔಟ್‌ಲೆಟ್‌ ಗಳನ್ನು ಯಶಸ್ವಿಯಾಗಿ ಪ್ರಾರಂಭಿಸಿರುವ ಸಂಸ್ಥೆಯು, ಈ ಹೊಸ ಮಳಿಗೆಯ ಮೂಲಕ ತನ್ನ ರೀಟೇಲ್ ವಿಸ್ತರಣಾ ಕಾರ್ಯತಂತ್ರದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಲಿವ್‌ಪ್ಯೂರ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಕೇಶ್ ಕೌಲ್ ಅವರು , “ಬೆಂಗಳೂರಿನಲ್ಲಿ ನಮ್ಮ ಎಕ್ಸ್‌ ಕ್ಲೂಸಿವ್ ಬ್ರ್ಯಾಂಡ್ ಔಟ್‌ಲೆಟ್ ಪ್ರಾರಂಭಿಸಿರುವುದು ಭಾರತದ ಅತ್ಯಂತ ಕ್ರಿಯಾಶೀಲ ಮತ್ತು ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿರುವ ನಗರ ಮಾರುಕಟ್ಟೆಗಳಲ್ಲಿ ನಮ್ಮ ಅಸ್ತಿತ್ವವನ್ನು ಬಲಪಡಿಸುವ ಬದ್ಧತೆಯನ್ನು ತೋರಿಸುತ್ತದೆ. ಬೆಂಗಳೂರಿನ ಗ್ರಾಹಕರು ತಂತ್ರಜ್ಞಾನ, ಕ್ಷೇಮ ಮತ್ತು ವಿವೇಕಯುಕ್ತ ನಿರ್ಧಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ನಮ್ಮ ಈ ಮಳಿಗೆಯು ಗ್ರಾಹಕರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದ್ದು, ಇಲ್ಲಿ ಅವರು ನಮ್ಮ ಸಂಪೂರ್ಣ ಉತ್ಪನ್ನ ಶ್ರೇಣಿಯನ್ನು ವೀಕ್ಷಿಸಬಹುದು, ಸ್ಮಾರ್ಟ್ ಉತ್ಪನ್ನಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ದೈನಂದಿನ ಜೀವನವನ್ನು ಉತ್ತಮಗೊಳಿಸುವ ಉತ್ತಮ ಆಯ್ಕೆಗಳನ್ನು ಮಾಡಬಹುದು” ಎಂದು ಹೇಳಿದರು.

‘ತಂತ್ರಜ್ಞಾನದ ಮೂಲಕ ಯೋಗಕ್ಷೇಮ’ ಎಂಬ ತನ್ನ ತತ್ವಕ್ಕೆ ಬದ್ಧವಾಗಿರುವ ಲಿವ್‌ಪ್ಯೂರ್, ಬೆಂಗಳೂರಿನ ಈ ಹೊಸ ಮಳಿಗೆಯಲ್ಲಿ ಎಐ ಮತ್ತು ಐಓಟಿ ತಂತ್ರಜ್ಞಾನ ಆಧಾರಿತ ಅತ್ಯುತ್ತಮ ಆವಿಷ್ಕಾರಗಳನ್ನು ಪ್ರದರ್ಶಿಸುತ್ತಿದೆ. ಇದರಲ್ಲಿ ಮುಖ್ಯವಾಗಿ ಬ್ರ್ಯಾಂಡ್‌ನ ‘ಮೇಂಟೆನೆನ್ಸ್ ಫ್ರೀ’ ವಾಟರ್ ಪ್ಯೂರಿಫೈಯರ್ ಶ್ರೇಣಿ, ಧ್ವನಿ ಆಧಾರಿತ ಚಿಮಣಿಗಳು ಮತ್ತು ಸುಸ್ಥಿರ ಜೀವನಶೈಲಿಗೆ ಪೂರಕವಾದ ಇಂಧನ ದಕ್ಷತೆಯ ಸ್ಮಾರ್ಟ್ ಉಪಕರಣಗಳು ಸೇರಿವೆ. ಭೇಟಿ ನೀಡುವ ಗ್ರಾಹಕರು ಉತ್ಪನ್ನಗಳ ನೇರ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಬಹುದು ಮತ್ತು ತರಬೇತಿ ಪಡೆದ ತಜ್ಞರಿಂದ ವೈಯಕ್ತಿಕ ಮಾರ್ಗದರ್ಶನವನ್ನು ಪಡೆಯಬಹುದು ಎಂದರು.

 

About the Author

Praja Vahini

Editor

View All Posts

Spread the love

Post navigation

Previous: ಸನ್‌ಡ್ಯಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಳಗಿದ ಬೆಂಗಳೂರು ಪ್ರತಿಭೆ: ನಿರ್ದೇಶಕಿ ಅನೂಯ ಸ್ವಾಮಿಗೆ ಜಾಗತಿಕ ಮನ್ನಣೆ!
Next: ಜಿಟಿಸಿಸಿ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ  ನೀಡಿದ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ

Views:

18

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.