ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12 ರಲ್ಲಿ 45 ಕೋಟಿಗೂ ಅಧಿಕ ವೋಟ್ಗಳ ಪಡೆಯುವ ಮೂಲಕ ವಿನ್ನರ್ ಆಗಿರುವ ಗಿಲ್ಲಿ ನಟನಿಗೆ ಸಾಯಿ ಗೋಲ್ಡ್ ಪ್ಯಾಲೆಸ್ ಮುಖ್ಯಸ್ಥ ಶರವಣ ಚಿನ್ನದ ಚೈನ್ ಗಿಫ್ಟ್ ನೀಡಿದ್ದಾರೆ.
ಶರವಣ ಅವರು ಬಿಗ್ ಬಾಸ್ ಫಿನಾಲೆಗೆ ಮೊದಲು ಮಾತನಾಡಿ, ‘ಗಿಲ್ಲಿಯೇ ಗೆಲ್ಲುತ್ತಾನೆ. ಗಿಲ್ಲಿ ಗೆದ್ದರೆ ನನ್ನ ಕಡೆಯಿಂದ 20 ಲಕ್ಷ ರೂಪಾಯಿ ಕೊಡ್ತೀನಿ’ ಎಂದು ಹೇಳಿದ್ದರು. ಆದರೆ ಬಿಗ್ ಬಾಸ್ ವೇದಿಕೆಯಲ್ಲಿ ಯಾವುದೇ ಹಣ ನೀಡಲಾಗಿರಲಿಲ್ಲ.
ಇತ್ತೀಚೆಗೆ ಶಾಪ್ ಓಪನಿಂಗ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಿಲ್ಲಿಗೆ ಶರವಣ ಚಿನ್ನದ ಚೈನ್ ಹಾಕಿದ್ದಾರೆ. ಆದರೆ ಇದು 20 ಲಕ್ಷ ಮೌಲ್ಯದ ಗಿಫ್ಟ್ ಅಲ್ಲ, ಶಾಪ್ಗೆ ಬರುವ ಸೆಲೆಬ್ರಿಟಿಗಳಿಗೆ ಚೈನ್ ಹಾಕುವುದು ಶರವಣ ಅವರ ಸಾಮಾನ್ಯ ಸ್ಟೈಲ್ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕಿಚ್ಚ ಸುದೀಪ್ ಅವರಿಗೂ ಇದೇ ರೀತಿಯ ಗೌರವ ಸಲ್ಲಿಸಿದ್ದರು. ಇದನ್ನೂ ಓದಿ: ಹಾಸನ: ಜೆಡಿಎಸ್ ಪಕ್ಷದ ಬೃಹತ್ ಸಮಾವೇಶ
ಇದೀಗ ಈ ವಿಷಯದ ಕುರಿತು ಶರವಣ ಕಡೆಯಿಂದ ಅಧಿಕೃತ ಸ್ಪಷ್ಟನೆ ಯಾವಾಗ ಬರುತ್ತದೆ ಎಂಬುದು ಕುತೂಹಲ ಮೂಡಿಸಿದೆ.
