ಶಹಾಪುರ: ಶಹಾಪುರ -ಸಿಂದಗಿ ಹೆದ್ದಾರಿಯ ಗೋಗಿ ಗ್ರಾಮದ ಗಣೇಶ ದೇವಸ್ಥಾನದ ಹತ್ತಿರ ಬುಧವಾರ ಎರಡು ಬೈಕ್ ನಡುವೆ ಮುಖಾಮುಖಿ ಹೊಡೆದ ಪರಿಣಾಮ ಇಬ್ಬರು ಸಾವನ್ನಿಪ್ಪಿದ್ದಾರೆ.
ಶಹಾಪುರ ತಾಲ್ಲೂಕಿನ ಅಣಬಿ ಗ್ರಾಮದ ಮಲ್ಲಿಕಾರ್ಜುನ(40) ಹಾಗೂ ಗೋಗಿ ಗ್ರಾಮದ ಮಹ್ಮದ ಆರುನ್(30) ಮೃತಪಟ್ಟ ವ್ಯಕ್ತಿಗಳು. ಅದರಲ್ಲಿ ಶಮಶುದ್ದೀನ ಹಾಗೂ ಅಶೋಕ ಅವರು ಗಂಭೀರವಾಗಿ ಗಾಯಗೊಂಡಿದ್ದು ಕಲಬುರ್ಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎರಡು ಬೈಕ್ ನಡುವೆ ಮುಖಾ ಮುಖಿ ಡಿಕ್ಕಿ ಹೊಡೆದಿವೆ. ಎರಡು ಬೈಕ್ ನಲ್ಲಿ ತಲಾ ಒಬ್ಬರು ಹಿಂಬದಿ ಕುಳಿತಿದ್ದರು. ಡಿಕ್ಕಿಯ ರಭಸಕ್ಕೆ ಎರಡು ಬೈಕ್ ನಜ್ಜುನುಜ್ಜಾಗಿವೆ ಎಂದು ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದರು. ಗೋಗಿ ಠಾಣೆಯಲ್ಲಿ ದೂರು ದಾಖಲಾಗಿದೆ.
