ಶಹಾಪುರ: ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್(ಗ್ರಾಮೀಣ) ಮಸೂದೆ ೨೦೨೫ನ್ನು ವಾಪಸ್ ಪಡೆಯಬೇಕು ಹಾಗೂ ಮೊದಲಿನ ಮನರೇಗಾ ಯೋಜನೆಯನ್ನು ಮುಂದುವರಿಸಬೇಕು ಎಂದು ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾವಲಸಾಬ್ ನದಾಫ್ ಆಗ್ರಹಿಸಿದರು.
ನಗರದ ತಾ.ಪಂ ಕಛೇರಿ ಎದುರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ , ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಜಿರಾಮ್‌ಜಿ ಮಸೂದೆ ವಾಪಸ್ ಪಡೆಯಲು, ಕೂಲಿಕಾರರಿಗೆ ಕೂಲಿ ಕೆಲಸ ನೀಡುವಂತೆ ಆಗ್ರಹಿಸಿ ಅನಿಧಿಷ್ಠಾವಧಿ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿ
ಪ್ರಧಾನಿ ಮೋಧಿ ಸರ್ಕಾರ ರೈತರನ್ನು ದಿವಾಳಿ ಮಾಡಲು ಹೊರಟಿದೆ. ದೇಶದ ಬಡವರು, ಮಧ್ಯಮ ವರ್ಗದವರಿಗೆ ಆಸರೆಯಾಗಿದ್ದ ಮಹಾತ್ಮಗಾಂಧಿ ಉದ್ಯೋಗ ಕಾತ್ರಿ ಯೋಜನೆಯ ಹೆಸರು ಬದಲಿಸಿ, ವಿಬಿ-ಜಿರಾಮ್ ಜಿ ಮಸೂದೆಯನ್ನು ಜಾರಿಗೆ ತರುವ ಮೂಲಕ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ ಎಂದು ದೂರಿದರು. ಮಹಾತ್ಮಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ತೆಗೆದು, ಸ್ಕೀಮ್ ಆಗಿ ಬದಲಿಸಿರುವುದು ಖಂಡನಾರ್ಹ ಉದ್ಯೋಗ ಖಾತ್ರಿ ಯೋಜನೆ ಉಳಿಬೇಕು, ಜೀ.ರಾಮ್‌ಜಿ ಸ್ಕೀಮ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಮತ್ತು ಪಂಚಾಯಿತಿಗಳಲ್ಲಿ ಕೆಲಸಕ್ಕಾಗಿ ಫಾರಂ ನಂ ೬ ಕೊಟ್ಟರು ಸರಿಯಾದ ಕೆಲಸ ನೀಡುತ್ತಿಲ್ಲಾ. ಸರ್ಕಾರದ ನಿಯಮದ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ೧೦೦ ದಿನಗಳ ಕೆಲಸ ನೀಡಬೇಕಿದೆ ಆದರೆ ಅಧಿಕಾರಿಗಳನ್ನು ಇದನ್ನು ಸಮರ್ಪಕ ನಿರ್ವಹಿಸುತ್ತಿಲ್ಲಾ. ಮತ್ತು ಎನ್‌ಎಂಆರ್ ಕೊಡುವವರೆಗೆ ಧರಣಿಯನ್ನು ಹಿಂಪಡೆಯಲ್ಲಾ ಎಂದು ಆಗ್ರಹಿಸಿದರು.
ಬೇಡಿಕೆ ಈಡೇರುವವರೆಗೂ ಧರಣಿ ಸತ್ಯಾಗ್ರಹ
ಅಧಿಕಾರಿಗಳು ಪಂಚಾಯಿತಿ ಮಟ್ಟದ ಸಮಸ್ಯೆಗಳನ್ನು ಈಡೇರಿಸಬೇಕು. ಕೂಲಿಕಾರರಿಗೆ ಕೂಲಿ ಕೆಲಸ ನೀಡುವವರೆಗೂ ಕಚೇರಿ ಎದುರೆ ಠಿಕಾಣಿ ಹೂಡಲಿದ್ದೇವೆ. ಮತ್ತು ಜ.೨೬ ರಂದು ರಸ್ತೆಗೆ ಇಳಿದು ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ. ಬೇಡಿಕೆ ಈಡೇರಿಕೆಗಾಗಿಯೇ ಫೆ. ೧೨ ರಂದು ದೇಶಾದ್ಯಂತ ರೈತ ಸಂಘಟನೆ, ಸಿಐಟಿಯು, ಕಾರ್ಮಿಕ ಸಂಘಟನೆಗಳಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಸಂಘಟನ ಮುಖಂಡರು ತಿಳಿಸಿದರು.
ಗ್ರಾಮೀಣ ಜನರುದ್ಯೋಗ ಕಸಿಯಲಾಗಿದೆ. ಶೋಷಿತ ಹಾಗೂ ದುಡಿಯುವ ವರ್ಗದ ಮೂಲಭೂತ ಹಕ್ಕಿಗೆ ಕೊಡಲಿ ಏಟು ಕೊಡಲಾಗಿದೆ. ಕೆಲಸ ಕೇಳುವ ಪ್ರತಿಯೊಬ್ಬರಿಗೂ ಕೆಲಸ ಮತ್ತು ನ್ಯಾಯಬದ್ಧ ಕೂಲಿ ಸಿಗಬೇಕು ಎನ್ನುವುದು ಕಾನೂನಾತ್ಮಕ ಹಕ್ಕು. ಅಧಿಕಾರಿಗಳ ನಿರ್ಲಕ್ಷಕ್ಕೆ ಜನರ ಬೇಡಿಕೆಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಫೆ. ೯ರಂದು ಕರ್ನಾಟಕ ಪ್ರಾಂತ ರೈತ ಸಂಘ ಸಮ್ಮೇಳನ ಮಾಡಲು ತಿರ್ಮಾನಿಸಿದ್ದು ಅಂದು ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು, ಕೂಲಿಕಾರರು ಪಾಲ್ಗೊಳ್ಳಬೇಕು ಎಂದುರೈತ ಸಂಘದ ಮುಖಂಡರಾದ ಚೆನ್ನಪ್ಪ ಆನೇಗುಂದಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್.ಎಮ್ ಸಾಗರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಮಲ್ಲಣಗೌಡ ಮಾಲಿ ಪಾಟೀಲ್, ಜಿಲ್ಲಾ ಸಮಿತಿ ಮುಖಂಡ ರಾಮಯ್ಯ ಬೋವಿ, ರಾಮನಗೌಡ, ಭೀಮಣ್ಣ ಚೆನ್ನೂರ, ವಿಜಯಕುಮಾರ ದೊಡ್ಮನಿ, ಮಲ್ಲಿಕಾರ್ಜುನ ಮರಂಕಲ್, ಹಲಗೇರಿ, ಶರಣಪ್ಪ ಹಾಲಿಗೇರಿ, ಹಳ್ಳಮ್ಮ ದೋರನಹಳ್ಳಿ , ರೇಣುಕಾ ಎಂ, ದೇವಮ್ಮ ನಾಗಮ್ಮ ಸೇರಿದಂತೆ ಇತರರು ಇದ್ದರು.
