ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12 ಕೊನೆಯ ಹಂತ ತಲುಪಿದ್ದು ಇಂದು (ಭಾನುವಾರ ಜ. 18) ಅದ್ದೂರಿಯಾಗಿ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ ಜೊತೆಗೆ ಎಲ್ಲಾ ಕಂಟೆಸ್ಟೆಂಟ್ಗಳ ಜೊತೆ ವಿಭಿನ್ನವಾಗಿ ಆಟವಾಡಿದ ಗಿಲ್ಲಿನೇ ಗೆಲ್ಲೋದು ಎಂದು ಇಡೀ ಕರ್ನಾಟಕ ಜನತೆ ಗಿಲ್ಲಿಗೆ ವೋಟ್ ಮಾಡುವುದರ ಜೊತೆಗೆ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಗಿಲ್ಲಿಗೆ ಮಾಡುತ್ತಿದ್ದಾರೆ.
ಹೌದು… ಇಂದು ಅದ್ದೂರಿಯಾಗಿ ಬಿಗ್ ಬಾಸ್ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು ಈ ಗ್ರ್ಯಾಂಡ್ ಫಿನಾಲೆಯಲ್ಲಿ ಬಹುತೇಕ ಗಿಲ್ಲಿನೇ ಗೆಲ್ಲೋದು ಎಂದು ಇಡೀ ಕರ್ನಾಟಕದ ಜನತೆ ನಟರಾಜು ಅಲಿಯಾಸ್ ಗಿಲ್ಲಿಗೆ ಹೆಚ್ಚಿನ ವೋಟ್ ಮಾಡುವ ಮೂಲಕ ಅಭಿಮಾನಿಗಳು ಪ್ರೋತ್ಸಾಹಿಸುತ್ತಿದ್ದಾರೆ.
ಕನ್ನಡ ಜನತೆಗೆ ಗಿಲ್ಲಿ ನಟನೆಗೆ ಈಗಾಗಲೇ 37 ಕೋಟಿ ವೋಟ್ ಮಾಡಿದ್ದಾರೆ. ಟಾಪ್-6ನಲ್ಲಿರುವ ಎಲ್ಲರೂ ಚನಾಗಿ ಆಡುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬಿಗ್ ಬಾಸ್ ಸಾಕಷ್ಟು ಹೆಸರು ಮಾಡುತ್ತಿದೆ.
ಕರುನಾಡ ಜನತೆ ಗಿಲ್ಲಿ ನಟನ ಕೈಹಿಡಿಯುವುದರ ಜೊತೆಗೆ ಇದರಲ್ಲಿ ಗಿಲ್ಲಿಯ ಜೀವನವೇ ಅಡಗಿದೆ ಎಂದರೆ ತಪ್ಪಾಗಲ್ಲ.
ಹಾಗಾದ್ರೆ ಕನ್ನಡ ಬಿಗ್ ಬಾಸ್ ಸೀಸನ್ 12ರ ಟ್ರೋಪಿಗೆ ಮುತ್ತಿಕೋರು ಯಾರು ಎಂದು ಕಾದು ನೋಡಬೇಕಿದೆ.
