ಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರನ್ನು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಭೇಟಿ ಮಾಡಿ ಸಿದ್ಧರಾಮೇಶ್ವರ ಜಯಂತಿಯ ಶುಭಾಶಯಗಳು ಕೋರಿದರು.
ಸರ್ಕಾರ ಆಚರಿಸುವ ರಾಜ್ಯಮಟ್ಟದ ಸಿದ್ಧರಾಮೇಶ್ವರ ಜಯಂತಿಗೆ ಸಚಿವರಾದ ಶಿವರಾಜ ತಂಗಡಗಿ ಆಹ್ವಾನಿಸಿದರು. ಪರಿಶಿಷ್ಟ ಜಾತಿಯ ಪ್ರವರ್ಗ-3 ಲೋಪದೋಷಗಳ ಕುರಿತು ಗಮನ ಸೆಳೆದರು.
ಈ ಸಂರ್ಭದಲ್ಲಿ ಭೋವಿ ನಿಗಮದ ಅಧ್ಯಕ್ಷರಾದ ರಾಮಪ್ಪ ಎಂ, ನಿಗಮದ ಮಾಜಿ ಅಧ್ಯಕ್ಷರಾದ ಸೀತಾರಾಮ, OCCII ರವಿ ಮಾಕಳಿ, ಹಾವೇರಿ ರವಿ ಪೂಜಾರಿ, ಬಾಗೆಪಲ್ಲಿ ಕೃಷ್ಣಪ್ಪ, ಬಂಜಾರ ಸಮಾಜದ ಅನಂತ ನಾಯ್ಕ, ಕೊರಚ ಸಮಾಜದ ಆದರ್ಶಯಲ್ಲಪ್ಪ, ಮೈಸೂರಿನ ವಿಜಯಕುಮಾರ ಉಪಸ್ಥಿತಿಯಿದ್ದರು.
