ಕೆಆರ್ ಪುರ: ಬೆಂಗಳೂರು ನಗರದಲ್ಲಿ ಇತ್ತೀಚಿಗೆ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಈಗಾಗಲೇ ಬರದಿಂದ ಸಾಗುತ್ತಿದ್ದು, ಇದೀಗ ಕೆ ಆರ್ ಪುರಂ ವ್ಯಾಪ್ತಿಯಲ್ಲಿ ಇರುವಂತಹ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಜಂಟಿ ಆಯುಕ್ತೆ ಸುಧಾ ಅವರು ಆದೇಶಿಸಿದ್ದಾರೆ.
ಹೌದು, ಕೆಆರ್ ಪುರಂ ಸುತ್ತಮುತ್ತಲಿನಲ್ಲಿರುವ ಅನಧಿಕೃತ ಕಟ್ಟಡಗಳಿಗೆ ಈಗಾಗಲೇ ತೆರವು ಕಾರ್ಯಾಚರಣೆ ಪ್ರಾರಂಭವಾಗಿದ್ದು, ಕೆಆರ್ ಪುರಂ ಕ್ಷೇತ್ರದ ಹೊರಮಾವು, ಅಗ್ರದ ಸುತ್ತಮುತ್ತಲು ಸುಮಾರು ಎರಡು ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ಮನೆಗಳ ತೆರವು ಕಾರ್ಯಚರಣೆ ನಡೆಸಲಾಗುವುದು ಎಂದು ಜಂಟಿ ಆಯುಕ್ತೆ ಸುಧಾ ಅವರು ಆದೇಶಿಸಿದ್ದಾರೆ.
ಇನ್ನು ಕೆಆರ್ ಪುರ ಕ್ಷೇತ್ರದ ಹೊರಮಾವು ಅಗ್ರದ ಸರ್ವೇ ನಂಬರ್ 11/1, 11/2, 11/3, 11/4, 11/5 ಒಟ್ಟು 2 ಎಕರೆ 05 ಗುಂಟೆ ಗಳಲ್ಲಿ ನಿರ್ಮಾಣ ಗೊಂಡ ಮನೆಗಳಿಗೆ ನೋಟಿಸ್ ನೀಡಿದರು.
ಬಳಿಕ ಮಾತನಾಡಿದ ಅವರು ನವೆಂಬರ್ ತಿಂಗಳಲ್ಲಿ ಕೆಲಸಕ್ಕೆ ನಿಲ್ಲಿಸಲಿಕ್ಕೆ ಆದೇಶ ನೀಡಲಾಗಿತ್ತು. ಇವತ್ತು ನೋಟಿಸ್ ನೀಡಲಾಗಿದೆ.. ಅದನ್ನು ಅಲ್ಲಿನ ನಿವಾಸಿಗಳು ನಿರಾಕರಿಸಿದ್ದಾರೆ. ಆದ್ದರಿಂದ ವಿದ್ಯುತ್ ಹಾಗೂ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದರು. ಇದನ್ನೂ ಓದಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಿಎಂ
ಅನಧಿಕೃತವಾಗಿ ನಿರ್ಮಾಣವಾಗಿರುವ 39 ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತದೆ. ಇಲ್ಲಿರುವ ಕಟ್ಟಡಗಳು ರಾತ್ರೋರಾತ್ರಿ ಕಟ್ಟಿರುವ ಕಟ್ಟಡಗಳಲ್ಲ. ಈ ಹಿಂದಿನ ಅಧಿಕಾರಿಗಳು ಯಾವ ಕಾರಣಕ್ಕೆ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ಕೊಟ್ಟರು ಗೊತ್ತಿಲ್ಲ. ತನಿಖೆಗೆ ನಡೆಸಲಾಗುತ್ತದೆ ಎಂದು ಹೇಳಿದರು. ಈ ವೇಳೆ ಬೆಂಗಳೂರು ಪೂರ್ವ ಪಾಲಿಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
